ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಸುಲಭ ಮನೆಮದ್ದು!

ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಆಂತರಿಕ ಸೌಂದರ್ಯ ಮುಖ್ಯ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಟೆನ್ಷನ್ ಮಾಡಿಕೊಳ್ಳಬಾರದು. ಕನಿಷ್ಟ ದಿನಕ್ಕೆ 4 ಲೀಟರ್ ನೀರನ್ನು ಕುಡಿಯಬೇಕು. ಪ್ರತಿದಿನ ಮೋಷನ್ ಗೆ 2 ರಿಂದ 3 ಸಲ ಹೋಗಬೇಕು . ಹಣ್ಣು ತರಕಾರಿಗಳನ್ನು ಮತ್ತು ಮೊಳಕೆಯೊಡೆದ ಕಾಳುಗಳನ್ನು ಹೆಚ್ಚು ಸೇವಿಸಬೇಕು. ಹಣ್ಣುಗಳಲ್ಲಿರುವ ಆಂಟಿ ಆ್ಯಕ್ಸಿಡೆಂಟ್ ಗಳು ನಮ್ಮ ಮುಖದ ಗ್ಲೋ ಹೆಚ್ಚಿಸುತ್ತದೆ. ಎಲ್ಲ ರೀತಿಯ ಹಣ್ಣುಗಳನ್ನು ಸೇವಿಸಬೇಕು. ಟೊಮೆಟೊ ಹಣ್ಣಿನಲ್ಲಿರುವ ಲೈಕೋ ತ್ರಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಪಪ್ಪಾಯ ಪೇಸ್ಟ್ ಮಾಡಿ ಅದಕ್ಕೆ ಕಿತ್ತಳೆ ರಸ ಮತ್ತು ಓಟ್ಸ್ ಸೇರಿಸಿ ಹಚ್ಚಿಕೊಂಡು 20 ನಿಮಿಷ ಬಿಟ್ಟು ವಾಷ್ ಮಾಡುವುದರಿಂದ ಮುಖದ ಗ್ಲೋ ಹೆಚ್ಚಾಗುತ್ತದೆ. ಹುತ್ತದ ಮಣ್ಣನ್ನು ಪ್ರತಿದಿನ ನೆನೆಸಿ ಬೆಳಗ್ಗೆ ಹಾಗೂ ಸಂಜೆ ಹಚ್ಚುವುದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಹುತ್ತದ ಮಣ್ಣಿಗೆ ಮುಲ್ತಾನಿ ಮಿಟ್ಟಿಯನ್ನು ಮಿಕ್ಸ್ ಮಾಡಿ ಹಚ್ಚಬಹುದು.
ಹಾಲು ಮತ್ತು ಅರಿಶಿನ:ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಅರಿಶಿನದ ಪಾತ್ರ ಮಹತ್ತರವಾಗಿದ್ದು ಭಾರತದಲ್ಲಿ ನೂರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. ಒಂದು ಚಿಕ್ಕ ಚಮಚ ಅರಿಶಿನ ಪುಡಿಯನ್ನು ಕೊಂಚವೇ ಹಸಿ ಹಾಲಿನೊಂದಿಗೆ ಬೆರೆಸಿ ಮುಖಲೇಪ ತಯಾರಿಸಿ.ಹಾಲು ಮತ್ತು ಅರಿಶಿನ ಇದಕ್ಕೆ ಕೆಲವು ಹನಿ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿಸಿ. ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ. ಈ ವಿಧಾನ ಒಣಚರ್ಮಕ್ಕೆ ಹೆಚ್ಚು ಸೂಕ್ತವಾಗಿದೆ.
ಕಡಲೆ ಹಿಟ್ಟು:ಬೇಕಾಗುವ ಸಾಮಗ್ರಿಗಳು ; 2 ಟೇಬಲ್ ಚಮಚೆ ಕಡಲೆ ಹಿಟ್ಟು, 4 ಟೇಬಲ್ ಚಮಚೆ ರೋಸ್ ವಾಟರ್, ಟವೆಲ್ತಯಾರಿಕೆ ಅವಧಿ : 2 ನಿಮಿಷ ಉಪಚರಿಸುವ ಅವಧಿ : 20 ನಿಮಿಷ
ಬಳಸುವ ವಿಧಾನ : ಕಡಲೆ ಹಿಟ್ಟಿಗೆ ರೋಸ್ ವಾಟರ ಸೇರಿಸಿ ನುಣುಪಾದ ಮಿಶ್ರಣ ತಯಾರಿಸಿಕೊಳ್ಳಿ. ಮೃದುವಾದ ಕ್ಲೆನ್ಸರ್‌ನಿಂದ ಮುಖ ತೊಳೆದುಕೊಂಡು ಟವೆಲ್‌ನಿಂದ ಸಂಪೂರ್ಣ ಒಣಗಿಸಿ. ಈಗ ಕಡಲೆ ಹಿಟ್ಟಿನ ಮಿಶ್ರಣವನ್ನು ಫೇಸ್ ಪ್ಯಾಕ್ ರೀತಿಯಲ್ಲಿ ಮುಖಕ್ಕೆ ಹಚ್ಚಿಕೊಳ್ಳಿ. ಬಾಯಿ ಹಾಗೂ ಕಣ್ಣುಗಳಿಗೆ ಮಿಶ್ರಣ ತಾಗದಂತೆ ನೋಡಿಕೊಳ್ಳಿ. ಇದನ್ನು 20 ನಿಮಿಷ ಹಾಗೆಯೇ ಇರಲು ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಮುಖವನ್ನು ಟವೆಲ್‌ನಿಂದ ಒರೆಸಿಕೊಂಡು ಸಂಪೂರ್ಣ ಒಣಗಿಸಿಕೊಳ್ಳಿ. ವಾರಕ್ಕೆ 2 ರಿಂದ 3 ಬಾರಿ ಈ ವಿಧಾನವನ್ನು ಅನುಸರಿಸಬಹುದು.
ಲಿಂಬೆ ಮತ್ತು ಜೇನು:ಬಿಸಿಲಿನಿಂದ ಚರ್ಮ ಕಪ್ಪಗಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಲಿಂಬೆಯ ಬಿಳಿಚುಕಾರಕ ಗುಣ ಮತ್ತು ಜೇನಿನ ತಂಪೊಗೊಳಿಸುವ ಗುಣಗಳು ಒಟ್ಟಾಗಿ ಚರ್ಮದ ಬಣ್ಣವನ್ನು ಸಹಜ ವರ್ಣದತ್ತ ತರಲು ನೆರವಾಗುತ್ತವೆ. ಇದರಿಂದ ಕಳೆಗುಂದಿದ್ದ ಚರ್ಮ ಮತ್ತೆ ಕಾಂತಿ ಪಡೆಯುತ್ತದೆ. ಸಮ ಪ್ರಮಾಣದಲ್ಲಿ ಲಿಂಬೆಸರ ಮತ್ತು ಜೇನನ್ನು ಬೆರೆಸಿ ಕೊಂಚವೇ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಹತ್ತಿಯಿಂಡೆಯಿಂದ ಒರೆಸಿಕೊಳ್ಳುವ ಮೂಲಕ ಈ ಕಾಂತಿಯನ್ನು ಪಡೆಯಬಹುದು.
ಪಪ್ಪಾಯಿ:ಬೇಕಾಗುವ ಸಾಮಗ್ರಿಗಳು : 1 ಹೋಳು ಪಪ್ಪಾಯಿ, 1 ಟೇಬಲ್ ಚಮಚೆ ನಿಂಬೆ ರಸ, 1 ಟೇಬಲ್ ಚಮಚೆ ಹಾಲುತಯಾರಿಕೆ ಅವಧಿ : 2 ನಿಮಿಷ ಉಪಚರಿಸುವ ಅವಧಿ : 20 ನಿಮಿಷ
ಬಳಸುವ ವಿಧಾನ : ಎಲ್ಲ ಸಾಮಗ್ರಿಗಳನ್ನು ಬ್ಲೆಂಡ್ ಮಾಡಿಕೊಂಡು ನುಣುಪಾದ ಪೇಸ್ಟ್ ತಯಾರಿಸಿಕೊಳ್ಳಿ. ಮೃದುವಾದ ಕ್ಲೆನ್ಸರ್‌ನಿಂದ ಮುಖ ತೊಳೆದು ಟವೆಲ್‌ನಿಂದ ಒಣಗಿಸಿಕೊಳ್ಳಿ. ಈಗ ಪಪ್ಪಾಯಿ ಮಿಶ್ರಣವನ್ನು ಫೇಸ್ ಪ್ಯಾಕ್ ರೀತಿಯಲ್ಲಿಮುಖಕ್ಕೆ ಹಚ್ಚಿಕೊಳ್ಳಿ. ಕಣ್ಣು ಹಾಗೂ ಬಾಯಿಗೆ ಮಿಶ್ರಣ ತಾಗದಂತೆ ಎಚ್ಚರಿಕೆ ವಹಿಸಿ. 20 ನಿಮಿಷ ಹಾಗೆಯೇ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಈಗ ಟವೆಲ್‌ನಿಂದ ಮುಖವನ್ನು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಿ.ವಾರಕ್ಕೆ 1 ರಿಂದ 2 ಬಾರಿ ಈ ವಿಧಾನ ಅನುಸರಿಸಬಹುದು.
ಸೌತೆಕಾಯಿಯನ್ನು ತೆಳುವಾಗಿ ಕತ್ತರಿಸಿ 10 ನಿಮಿಷಗಳ ಕಾಲ ಕಣ್ಣಿನ ರೆಪ್ಪೆಗಳ ಮೇಲಿಟ್ಟುಕೊಂಡರೆ, ಕಣ್ಣಿನ ಸುತ್ತಲೂ ಇರುವ ಕಪ್ಪುವರ್ತುಲ ಮಾಯವಾಗುತ್ತದೆ. ಗಟ್ಟಿ ಮೊಸರಿನಲ್ಲಿರುವ ನೀರನ್ನು ತೆಗೆದು ಅದನ್ನು ಮುಖಕ್ಕೆ 10-15 ನಿಮಿಷ ಮಸಾಜ್ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
ನಿಂಬೆ, ಕಿತ್ತಳೆ ಹಾಗೂ ಮೂಸಂಬಿ ಹಣ್ಣುಗಳ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹೆಚ್ಚಿ 15-20 ನಿಮಿಷ ಬಿಟ್ಟು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.