ಡಯಾಬಿಟಿಸ್ ನಿಯಂತ್ರಣಕ್ಕೆ ಹಣ್ಣುಗಳು..!

ವೇಗದ ಜೀವನಶೈಲಿಯಿಂದಾಗಿ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇಂದಿನ ಯುಗದಲ್ಲಿ, ಮಧುಮೇಹವು ವಿಶ್ವದಲ್ಲಿ ಅಪಾಯಕಾರಿ ಆರೋಗ್ಯ ಸಮಸ್ಯೆಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲವು ಮಾರ್ಗಗಳಿವೆ. ಸರಿಯಾದ ಔಷಧಿ ಮತ್ತು ಆರೋಗ್ಯ ರಕ್ಷಣೆ ಅತ್ಯಗತ್ಯವಾದರೂ, ಜೀವನಶೈಲಿಯ ಬದಲಾವಣೆಯು ಮಧುಮೇಹವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಪೌಷ್ಟಿಕ ತಜ್ಞರ ಪ್ರಕಾರ, ಮಧುಮೇಹಿಗಳು ತಮ್ಮ ನಿತ್ಯದ ಆಹಾರದಲ್ಲಿ ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಅಂತಹ ಹಣ್ಣುಗಳ ಬಗ್ಗೆ ತಿಳಿಯೋಣ
ಮಾವಿನ ಹಣ್ಣು:ಮಾವು ಹಣ್ಣುಗಳ ರಾಜ, ಇದರಲ್ಲಿ ಪೋಷಕಾಂಶಗಳು ಹೇರಳವಾಗಿ ಇರುವುದರಿಂದ ಇದಕ್ಕೆ ರಾಜನ ಸ್ಥಾನಮಾನ ಸಿಕ್ಕಿದೆ. ಮಾವಿನ ಹಣ್ಣಿನಲ್ಲಿರುವ ಬೀಟಾ-ಕ್ಯಾರೋಟಿನ್ ಅಂಶವು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಈ ಅಂಶ ನಿಮ್ಮ ದೇಹ ಸೇರುವುದರಿಂದ ಬೇಸಿಗೆಯ ಬಿಸಿಲಿನಲ್ಲಿ ನಿಮ್ಮ ಚರ್ಮದ ನೀರಿನಾಂಶ ಕಡಿಮೆಯಾಗುವುದಿಲ್ಲ. ಇದಲ್ಲದೆ, ಮಾವಿನ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಸಿ ಇರುತ್ತದೆ. ವಿಟಮಿನ್ ಸಿ ನಿಮ್ಮ ದೇಹದಲ್ಲಿ ಕೊಲಾಜೆನ್ ಉತ್ಪತ್ತಿ ಮಾಡುತ್ತದೆ. ಕೊಲಾಜೆನ್ ನಿಮ್ಮ ಚರ್ಮದ ವಿನ್ಯಾಸವನ್ನು ನಿಯಂತ್ರಿಸುತ್ತದೆ ಹಾಗು ಚರ್ಮಕ್ಕೆ ಹೊಳಪನ್ನು ಕೊಡುತ್ತದೆ. ಮಾವಿನ ಹಣ್ಣಿನಲ್ಲಿ ಗ್ಯಾಲೋಟಾನಿನ್‌ಗಳು, ಕ್ವೆರ್ಸೆಟಿನ್ ಮತ್ತು ಮ್ಯಾಂಗಿಫೆರಿನ್‌ಗಳು ಹೇರಳವಾಗಿರುತ್ತವೆ. ಈ ಫೈಟೊನ್ಯೂಟ್ರಿಯೆಂಟ್‍ಗಳಿಂದ ನಿಮ್ಮ ಜ್ಞಾಪಕಶಕ್ತಿ ಹಾಗು ಏಕಾಗ್ರತೆ ಹೆಚ್ಚಾಗುತ್ತದೆ ಹಾಗೆಯೇ ರಕ್ತದ ಒತ್ತಡ ಮತ್ತು ಕೊಲೆಸ್ಟರಾಲನ್ನು ಸಹ ಕಡಿಮೆ ಮಾಡುತ್ತದೆ.
ಪೇರಳೆ ಹಣ್ಣು / ಸೀಬೆಹಣ್ಣು :ಸಾಮಾನ್ಯವಾಗಿ ಸೀಬೆಹಣ್ಣು ಎಂದೇ ಪ್ರಸಿದ್ದವಾಗಿರುವ ಪೇರಳೆಯಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಸತುವು ಸಮೃದ್ಧವಾಗಿದೆ. ಇದನ್ನು ನಾರಿನ ಹಣ್ಣು ಎಂದೂ ಕರೆಯುತ್ತಾರೆ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತದೆ. ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದುವುದರ ಜೊತೆಗೆ, ಪೇರಲದಲ್ಲಿ ಸೋಡಿಯಂ ಕಡಿಮೆ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಮಧುಮೇಹಿಗಳಿಗೆ ಇದು ಮುಖ್ಯವಾಗಿದೆ. ಪೇರಲದಲ್ಲಿ ಕಿತ್ತಳೆಗಿಂತ ನಾಲ್ಕು ಪಟ್ಟು ಹೆಚ್ಚು ವಿಟಮಿನ್ ಸಿ ಇದೆ.
ನೇರಳೆಹಣ್ಣು ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ದೇಹದಲ್ಲಿ ಇನ್ಸುಲಿನ್ ಕೊರತೆಯಾದಾಗ ಮಧುಮೇಹ ಅಥವಾ ಡಯಾಬಿಟಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ಜೀವಕೋಶಗಳು ಆಹಾರದಿಂದ ಪಡೆಯುವ ಗ್ಲೂಕೋಸ್ ಅನ್ನು ಶಕ್ತಿಯಾಗಿ ಪರಿವರ್ತನೆ ಮಾಡುತ್ತದೆ. ಮೆದೋಜೀರಕ ಗ್ರಂಥಿಯಿಂದ ಬಿಡುಗಡೆಯಾಗುವ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುವುದನ್ನು ತಡೆಯುತ್ತದೆ. ಸಕ್ಕರೆ ಪ್ರಮಾಣವು ರಕ್ತದಲ್ಲಿ ಶೇಖರಣೆಗೊಳ್ಳುವ ಬದಲು ಜೀವಕೋಶಗಳಿಗೆ ಸರಬರಾಜಾಗುವಂತೆ ಮಾಡುತ್ತದೆ.ಮಧುಮೇಹವನ್ನು ವೈದ್ಯರ ಔಷಧಗಳ ಮೂಲಕ ಕಡಿಮೆ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಆಹಾರದ ಅಭ್ಯಾಸದಲ್ಲಿ ಬದಲಾವಣೆ, ಕೆಲವು ವ್ಯಾಯಾಮಗಳು, ಆಹಾರದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಸೇವಿಸದಿರುವುದರ ಮೂಲಕ ಡಯಾಬಿಟಿಸ್ ಅನ್ನು ನಿಯಂತ್ರಿಸಿಕೊಳ್ಳಬಹುದು. ಅದರ ಜತೆಗೆ ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇರುವ ಆಹಾರಗಳ ಸೇವನೆ ಉತ್ತಮ ಎನ್ನುತ್ತಾರೆ ತಜ್ಞರು. ಆದರೆ ಇತ್ತೀಚೆಗೆ ಪ್ರಕಟವಾದ ಅಧ್ಯಯನವೊಂದರ ವರದಿಯಲ್ಲಿ ನೇರಳೆ ಹಣ್ಣು ಅಥವಾ ಬ್ಲ್ಯೂ ಬೆರಿ ಹಣ್ಣು ಮಧುಮೇಹ ನಿಯಂತ್ರಣ ಮಾಡಲಿದೆ ಎಂದು ಹೇಳಲಾಗಿದೆ. ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಈ ನೇರಳೆ ಹಣ್ಣು ಪರಿಹಾರ ನೀಡಲಿದೆ.ನೆರಳೆ ಹಣ್ಣುಗಳಲ್ಲಿ ಯಥೇಚ್ಛವಾದ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಸಿ, ಕ್ಯಾನ್ಸರ್ ವಿರೋಧಿ ಗುಣ ಸೇರಿದಂತೆ ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ನೇರಳೆ ಹಣ್ಣು ಒಂದು ಪರಿಪೂರ್ಣ ಆಹಾರವಾಗಿದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ.ನೇರಳೆ ಹಣ್ಣುಗಳು ಮಧುಮೇಹ ತಡೆಗೆ ಸಹಕಾರಿ ಎಂದು ಪತ್ತೆ ಮಾಡಲು ಅಧ್ಯಯನದಲ್ಲಿ ಪಾಲ್ಗೊಂಡವರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಮೊದಲ ಗುಂಪಿಗೆ ಬ್ರೆಡ್ ಮತ್ತು ನೇರಳೆ ಹಣ್ಣುಗಳನ್ನು, ಎರಡನೇ ಗುಂಪಿಗೆ ನೇರಳೆ ಹಣ್ಣುಗಳನ್ನು ಹಾಗೂ ಮೂರನೇ ಗುಂಪಿಗೆ ಕೇವಲ ಬ್ರೆಡ್ಅನ್ನು ನೀಡಲಾಗಿತ್ತು. 7 ದಿನಗಳ ಬಳಿಕ ರಕ್ತದ ಮಾದರಿಗಳನ್ನು ಕಲೆ ಹಾಕಿ ಪರೀಕ್ಷಿಸಲಾಯಿತು. ಆಗ ನೇರಳೆ ಹಣ್ಣುಗಳನ್ನು ತಿಂದ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿ ಇರುವುದು ಕಂಡುಬಂದಿದೆ
ಪಿಯರ್: ಪಿಯರ್ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ3 ಮತ್ತು ವಿಟಮಿನ್ ಬಿ9 ಸಮೃದ್ಧವಾಗಿದೆ. ಪಿಯರ್ ಹಣ್ಣು ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ, ಆದ್ದರಿಂದ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಅನುಮತಿಸುವುದಿಲ್ಲ.
ಶಿಫಾರಸ್ಸು ಮಾಡಲಾದ ಹಣ್ಣಿನ ಪ್ರಮಾಣ ಮತ್ತು ಅದನ್ನು ತಿನ್ನಲು ಒಳ್ಳೆಯ ಸಮಯ:ನೀವು ವಾರಕ್ಕೆ ಎರಡು ಸಲ ಮಧ್ಯಮ ಗಾತ್ರದ ಅರ್ಧ ಮಾವಿನ ಹಣ್ಣನ್ನು ಬೆಳಿಗ್ಗೆ ಸುಮಾರು ಒಂಬತ್ತು ಅಥವಾ ಹತ್ತು ಗಂಟೆಗೆ ತೆಗೆದುಕೊಳ್ಳಬಹುದು. ಇದರ ಜೊತೆಗೆ ಒಂದುವರೆ ವಾಲ್ನಟ್‌ಗಳನ್ನು ಸೇವಿಸಿ. ಇದನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಕೊಬ್ಬು ಸಿಗುತ್ತದೆ ಹಾಗೂ ರಕ್ತದ ಸಕ್ಕರೆ ಮಟ್ಟದ ಏರಿಕೆಯನ್ನು ತಡೆಯುತ್ತದೆ.
ಶಿಫಾರಸ್ಸು ಮಾಡಲಾದ ಹಣ್ಣಿನ ಪ್ರಮಾಣ ಮತ್ತು ಅದನ್ನು ತಿನ್ನಲು ಒಳ್ಳೆಯ ಸಮಯ:ವ್ಯಾಯಾಮ ಮಾಡುವವರು ಮತ್ತು ಕ್ರೀಡಾಪಟುಗಳು, ವಾರಕ್ಕೊಮ್ಮೆ ವ್ಯಾಯಾಮ ಮಾಡುವುದಕ್ಕಿಂತ ಮುಂಚೆ ಒಂದು ಸಣ್ಣ ಬಾಳೆಹಣ್ಣನ್ನು ಸೇವಿಸಬಹುದು. ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತವೆ