ಬಾಳೆ ಹಣ್ಣಿನ ಸಿಪ್ಪೆಯ ಪ್ರಯೋಜನ ತಿಳಿಯಿರಿ

ಬಾಳೆ ಹಣ್ಣಿನ ಸಿಪ್ಪೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಇದರಲ್ಲಿ ಅನೇಕ ಜೀವಸತ್ವಗಳು, ಖನಿಜಗಳು ಮತ್ತು ಪೋಶಕಾಂಶಗಳಿರುವುದರಿಂದ ಆರೋಗ್ಯಕ್ಕೆ ಉತ್ತಮ.

ಸಾಮಾನ್ಯವಾಗಿ ಬಾಳೆಹಣ್ಣಿನ ಸೇವನೆ ಆರೋಗ್ಯಕ್ಕೆ ಪ್ರಯೋಜನ ಎಂಬುದು ತಿಳಿದಿದೆ. ಮಲಬದ್ಧತೆ ಸಮಸ್ಯೆ, ಜೀರ್ಣಕ್ರಿಯೆಯನ್ನು ಸುಧಾರಿಸಿಕೊಳ್ಳಲು ಬಾಳೆಹಣ್ಣನ್ನು ಸೇವಿಸುತ್ತೇವೆ. ಜತೆಗೆ ಮಧ್ಯಾಹ್ನದ ಊಟ ಆದ ತಕ್ಷಣ ಒಂದು ಬಾಳೆ ಹಣ್ಣನ್ನು ಸೇವನೆ ಮಾಡುವುದರಿಂದ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ಮಾತನ್ನೂ ಕೇಳಿದ್ದೇವೆ. ಆದರೆ ಹಣ್ಣು ತಿಂದು ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲಿಯೂ ಸಹ ಎಷ್ಟೆಲ್ಲಾ ಪೌಷ್ಠಿಕಾಂಶಗಳಿವೆ ಎಂಬುದನ್ನು ನೀವು ತಿಳಿಯಲೇಬೇಕು.

ನಮ್ಮಲ್ಲಿ ಅನೇಕರಿಗೆ ಬಾಳೆಹಣ್ಣಿನ ಚಹಾದ ಬಗ್ಗೆ ತಿಳಿದಿಲ್ಲ. ಆದರೆ ಈ ವಿಶಿಷ್ಟ ಚಹಾವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಇದು ಉತ್ತಮ ಜೀವನಶೈಲಿಗೆ ಬದಲಾಯಿಸಲು ನಮಗೆ ಸಹಾಯ ಮಾಡುತ್ತದೆ.

ಬಾಳೆಹಣ್ಣಿನ ಟೀ ಮಾಡುವುದು ಹೇಗೆ?:

ಬಾಳೆಹಣ್ಣನ್ನು ಸಿಪ್ಪೆಯೊಂದಿಗೆ ಅಥವಾ ಇಲ್ಲದೆ ನೀರಿನಲ್ಲಿ ಕುದಿಸಿ. ನಂತರ ಸೋಸಬೇಕು ಮತ್ತು ನೀರನ್ನು ಕಪ್ಪು ಚಹಾ ಅಥವಾ ಹಾಲಿನ ಚಹಾದೊಂದಿಗೆ ಬೆರೆಸಿ ಕುಡಿಯಿರಿ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:ಬಾಳೆಹಣ್ಣಿನ ಸಿಪ್ಪೆಯಲ್ಲಿ ನಾರಿನಾಂಶವಿದೆ. ನಿಯಮಿತವಾಗಿ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಬಹುದು. ಇದು ಮಲಬದ್ಧತೆ, ಅತಿಸಾರ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ.

ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ:ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆಬಾಳೆಹಣ್ಣಿನ ಸಿಪ್ಪೆ ಬಳಸಿ ವಾರಕ್ಕೊಮ್ಮೆ ಹಲ್ಲುಗಳನ್ನು ಉಜ್ಜಿದಾಗ ಹೊಳಪು ಬರಲು ಸಹಾಯಕವಾಗಿದೆ. ಇದರಲ್ಲಿರುವ ಪೊಟ್ಯಾಷಿಯಂ ಮತ್ತು ಮೆಗ್ನೀಷಿಯಂ ಅಂಶ ದವಡೆಯನ್ನು ಸದೃಢಗೊಳಿಸುತ್ತದೆ. ಇದರಲ್ಲಿರುವ ಖನಿಜಾಂಶದಿಂದ ಹಲ್ಲುಗಳು ಹೊಳಪು ಕಾಣುತ್ತವೆ.

ಮೊಡವೆ ಸಮಸ್ಯೆಯಿಂದ ಪರಿಹಾರ:ಮುಖದಲ್ಲಿ ಏಳುವ ಮೊಡವೆಗಳನ್ನು ತೆಗೆದುಹಾಕಲು ಬಾಳೆಹಣ್ಣಿನ ಸಿಪ್ಪೆ ಸಹಾಯಕವಾಗಿದೆ. ಬಾಳೆಹಣ್ಣಿ ಸಿಪ್ಪೆಯ ಒಳ ಪದರದ ಮೂಲಕ ಮುಖವನ್ನು ಉಜ್ಜಿದರೆ ಮೊಡವೆಗಳು ಏಳುವುದಿಲ್ಲ. ವಾರಕ್ಕೊಮ್ಮೆ ಮುಖವನ್ನು ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜುವ ಅಭ್ಯಾಸ ಒಳ್ಳೆಯದು. ಜತೆಗೆ ಇದರಲ್ಲಿರುವ ಪೋಷಕಾಂಶಗಳು ಚರ್ಮದ ಉರಿಯೂತವನ್ನು ನಿವಾರಣೆಗೊಳಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group