ಸೀಬೆ ಹಣ್ಣಿನ ಎಲೆಗಳ ಕೆಲವು ಪ್ರಯೋಜನಗಳು!

ಪೇರಲೆ ಅಥವಾ ಸೀಬೆ ಹಣ್ಣಿನಿಂದ ಹಲವು ರೀತಿಯ ಆರೋಗ್ಯಕರ ಪ್ರಯೋಜನಗಳು ಸಿಗುವುದರ ಬಗ್ಗೆ ಗೊತ್ತಿರುವುದೇ. ಆದರೆ ಈ ಹಣ್ಣಿನ ಎಲೆಗಳು ಸಹ ಆರೋಗ್ಯಕ್ಕೆ ಪ್ರಯೋಜನಕಾರಿ. ಸೀಬೆ ಹಣ್ಣಿನ ಎಲೆಗಳು ಅತಿಸಾರ, ಕೊಲೆಸ್ಟ್ರಾಲ್ ನಿಯಂತ್ರಣ, ಮಧುಮೇಹ, ಮುಂತಾದವುಗಳಿಗೆ ಔಷಧಿಯಾಗಿ ಬಳಸಿಕೊಳ್ಳಬಹುದು.

ಕೊಲೆಸ್ಟ್ರಾಲ್ ನಿಯಂತ್ರಣ: ಪೇರಲೆ ಎಲೆಗಳೊಂದಿಗೆ ಚಹಾ ಕುಡಿಯುವುದರಿಂದ ಎಂಟು ವಾರಗಳಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನವು ಸಾಬೀತುಪಡಿಸಿದೆ. ಎಲ್ಡಿಎಲ್ ಅಥವಾ ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ ದೇಹದಾದ್ಯಂತ ಎಲ್ಲಾ ಕೊಬ್ಬಿನ ಅಣುಗಳನ್ನು ಸಾಗಿಸುವ ಲಿಪೊಪ್ರೋಟೀನ್​ಗಳ ಐದು ಪ್ರಮುಖ ಗುಂಪುಗಳಲ್ಲಿ ಒಂದಾಗಿದೆ. ಈ ರೀತಿಯ ಕೊಲೆಸ್ಟ್ರಾಲ್ ಅನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸಿದಾಗ, ವ್ಯಕ್ತಿಯ ಆರೋಗ್ಯವು ಹದಗೆಡುತ್ತದೆ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವಿದೆ. ಇದನ್ನೇ ಸೀಬೆ ಎಲೆಗಳ ಸೇವನೆಯಿಂದ ನಿಯಂತ್ರಿಸಿಕೊಳ್ಳಬಹುದು.

ಅತಿಸಾರಕ್ಕೆ ಮದ್ದು:ಅಧ್ಯಾಯನದ ಪ್ರಕಾರ ಅತಿಸಾರಕ್ಕೆ ಕಾರಣವಾದ ಸ್ಟಾಫಿಲೋಕಾಕಸ್ ಏರಿಯಸ್ ಎಂಬ ಬ್ಯಾಕ್ಟೀರಿಯಾದ ವೃದ್ದಿಯನ್ನು ಪೇರಳೆ ಎಲೆಯಲ್ಲಿರುವ ಪೋಷಕಾಂಶಗಳು ನಿಗ್ರಹಿಸುತ್ತವೆ. ಅತಿಸಾರ ತೊಂದರೆ ಇರುವ ವ್ಯಕ್ತಿಗಳು ನಿಯಮಿತವಾಗಿ ಪೇರಳೆ ಎಲೆಗಳ ಟೀ ಕುಡಿಯುತ್ತಾ ಬಂದರೆ ಹೊಟ್ಟೆನೋವು ಕಡಿಮೆಯಾಗುತ್ತದೆ ಹಾಗೂ ಮಲವಿಸರ್ಜನೆಯಲ್ಲಿ ನೀರು ನಷ್ಟವಾಗುವುದು ಕಡಿಮೆಯಾಗುತ್ತದೆ ಹಾಗೂ ಶೌಚಾಲಯಕ್ಕೆ ಧಾವಿಸುವ ಆತುರವೂ ಕಡಿಮೆಯಾಗುತ್ತದೆ ಹಾಗೂ ಶೀಘ್ರವೇ ಅತಿಸಾರ ಇಲ್ಲವಾಗುತ್ತದೆ ಎಂದು ಡ್ರಗ್ಸ್ . ಕಾಂ ವರದಿ ಮಾಡಿದೆ. ಒಂದು ಕಪ್ ನೀರನ್ನು ಕುದಿಸಿ ಇದರಲ್ಲಿ ಪೇರಳೆ ಎಲೆಗಳು ಮತ್ತು ಬೇರನ್ನೂ ಬೆರೆಸಿ ಕೊಂಚ ಕಾಲ ಹಾಗೇ ತಣಿಯಲು ಬಿಟ್ಟು ಬಳಿಕ ಸೋಸಿ ಈ ನೀರನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಅತ್ಯುತ್ತಮ ಪರಿಹಾರ ದೊರಕುತ್ತದೆ.

ಶೀತ ಮತ್ತು ಕೆಮ್ಮಿಗೆ ಪರಿಹಾರ: ಪೇರಲೆ ಎಲೆಗಳು ವಿಟಮಿನ್ ಸಿ ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವುದರಿಂದ, ಕೆಮ್ಮು ಮತ್ತು ಶೀತವನ್ನು ಗುಣಪಡಿಸಲು ಇದರ ಎಲೆಗಳ ಕಷಾಯವು ಸಹಾಯ ಮಾಡುತ್ತದೆ. ಪೇರಲ ರಸವು ಶ್ವಾಸಕೋಶ ಮತ್ತು ಗಂಟಲನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.

ಅಲರ್ಜಿಯನ್ನು ನಿವಾರಿಸುತ್ತದೆ:ಪೇರಲ ಎಲೆಗಳು ಅಲರ್ಜಿ ನಿವಾರಕ ಗುಣಗಳನ್ನು ಹೊಂದಿವೆ. ಕೆಮ್ಮು, ಸೀನುವಿಕೆ ಮತ್ತು ತುರಿಕೆ ಮುಂತಾದ ಅಲರ್ಜಿಯ ಲಕ್ಷಣಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ನೆನಪಿಡಿ: ಯಾವಾಗಲೂ ಪೇರಲ ಎಲೆಗಳನ್ನು ತೊಳೆದು ಸೇವಿಸಬೇಕು. ಹಳೆಯ ಎಲೆಗಳನ್ನು ಬಳಸಬಾರದು. ಮಾತ್ರವಲ್ಲ ಇದನ್ನು ಅತಿಯಾಗಿ ತಿನ್ನುವುದರಿಂದ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ಹಾಗಾಗಿ ಯಾವುದೇ ಆದರೂ ಹಿತ-ಮಿತವಾಗಿದ್ದರೆ ಒಳಿತು.

ಕ್ಯಾನ್ಸರ್ ವಿರುದ್ದ ಹೋರಾಡುತ್ತದೆತಜ್ಞರ ಪ್ರಕಾರ “ಪೇರಳೆ ಎಲೆಗಳು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸಬಹುದು” ವಿಶೇಷವಾಗಿ ಸ್ತನ, ಪ್ರಾಸ್ಟ್ರೇಟ್ ಹಾಗೂ ಬಾಯಿಯ ಕ್ಯಾನ್ಸರ್ ಗೆ ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ಲೈಕೋಪೀನ್ ಎಂಬ ಆಂಟಿ ಆಕ್ಸಿಡೆಂಟ್ ಕಾರಣವಾಗಿದೆ. ಈ ಬಗ್ಗೆ ನಡೆದ ಹಲವು ಅಧ್ಯಯನಗಳ ಪ್ರಕಾರ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇರುವ ಪೋಷಕಾಂಶಗಳಲ್ಲಿ ಲೈಕೋಪೀನ್ ಪ್ರಮುಖವಾಗಿದೆ.

ನಮ್ಮ ಮುಖದ ಮೇಲೆ ಆಗುವ ಮೊಡವೆಗಳಿಗೂ ಸಹ ಸೀಬೆ ಎಲೆ ಮನೆ ಮದ್ದು:ಮುಖದ ಮೇಲೆ ಮೊಡವೆಗಳು ಆಗಿದ್ದರೆ ಸೀಬೆ ಎಲೆಗಳಿಂದ ಪೇಸ್ಟ್ ಮಾಡಿಕೊಂಡು ಅದನ್ನ ಮುಖಕ್ಕೆ ಹಚ್ಚಿದರೆ ಮೊಡವೆಗಳು ಕಡಿಮೆ ಆಗುತ್ತವೆ. ಬಾಯಿಯಲ್ಲಿ ಹುಣ್ಣು ಆಗಿದ್ದರೂ ಸಹ ಸೀಬೆ ಎಲೆಗಳನ್ನು ಅರೆದು ಬಾಯಿ ಹುಣ್ಣು ಆದ ಜಾಗಕ್ಕೆ ಹಚ್ಚಿದರೆ ಸಮಸ್ಯೆ ನಿವಾರಣೆ ಆಗುತ್ತದೆ. ಶ್ವಾಸಕೋಶದ ಸಮಸ್ಯೆ ಇರುವವರು ಸಹ ಪೇರಳೆ ಎಲೆಯನ್ನು ಬಳಸಿದರೆ ಉತ್ತಮ. ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಇರುತ್ತವೆ ಹಾಗಾಗಿ ಶ್ವಾಸಕೋಶದ ಸಮಸ್ಯೆಗಳಿಗೆ ಪೇರಳೆ ಎಲೆ ರಾಮಬಾಣ. ಸೀಬೆ ಎಲೆಗಳನ್ನು ಅಗೆದು ತಿನ್ನುವುದರಿಂದ ಹಲ್ಲಿನ ನೋವು , ದಂತಕ್ಷಯ , ಬಾಯಿಯ ದುರ್ವಾಸನೆ ನಿವಾರಣೆ ಆಗುತ್ತದೆ. ಸೀಬೆ ಎಲೆಯ ಕಷಾಯದ ಸೇವನೆಯಿಂದ ಹೊಟ್ಟೆ , ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಗುಣ ಆಗುತ್ತವೆ. ಕ್ಯಾನ್ಸರ್ ರೋಗವನ್ನು ತಡೆಯುವ ಶಕ್ತಿ ಸಹ ಈ ಎಲೆಗಳಿಗೆ ಇದೆ. ಸೀಬೆ ಎಲೆಗಳ ಕಷಾಯ ಸಕ್ಕರೆ ಕಾಯಿಲೆಗೆ ಉತ್ತಮ ರಾಮ ಬಾಣ. ದೇಹದಲ್ಲಿ ಇನ್ಸುಲಿನ್ ಅಂಶವನ್ನ ಉತ್ಪತ್ತಿ ಮಾಡಲು ನೆರವಾಗುತ್ತದೆ. ದಿನಕ್ಕೆ ಎರಡು ಬಾರಿ ಈ ಸೀಬೆ ಎಲೆಯ ಕಷಾಯವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದು.

ಜೀರ್ಣಕ್ರಿಯೆಗಾಗಿ:ಪೇರಲ ಎಲೆಗಳು (Guava Leaves) ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿವೆ. ಗ್ಯಾಸ್ಟ್ರಿಕ್ ಅಲ್ಸರ್ ತಡೆಯಲು ಇದು ಸಹಕಾರಿ. ಇದರೊಂದಿಗೆ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group