ನಿಮ್ಮ ಮನೆಗೆ ಹಾವು ಬರದಂತೆ ತಡೆಯೋದಕ್ಕೆ ಇಲ್ಲಿವೆ ಟಿಪ್ಸ್ :

ವಾಸ್ತವದಲ್ಲಿ, ಮಳೆಗಾಲದಲ್ಲಿ ಹಾವುಗಳು ಮತ್ತು ವಿಷಕಾರಿ ಕೀಟಗಳ ಅಪಾಯ ಹೆಚ್ಚು. ವಿಶೇಷವಾಗಿ ಈ ಅವಧಿಯಲ್ಲಿ, ವಿಷಕಾರಿ ಹಾವುಗಳು ಹೆಚ್ಚು ಸಂಚಾರದಲ್ಲಿರುತ್ತವೆ. ಕೆಲವೊಮ್ಮೆ ಅವು ಮನೆಯೊಳಗೂ ಕಾಣಿಸುತ್ತವೆ. ಮನೆಯೊಳಗೆ ಹಾವು ಬರದಂತೆ ತಡೆಯಲು ಏನು ಮಾಡಬೇಕು? ಅವುಗಳನ್ನು ಹೊರಹಾಕುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್.
ಕಾರ್ಬೋಲಿಕ್ ಆಮ್ಲ: ಕಾರ್ಬೋಲಿಕ್ ಆಮ್ಲವು ಹಾವುಗಳನ್ನು ಹಿಮ್ಮೆಟ್ಟಿಸಲು ಅತ್ಯುತ್ತಮ ಅಸ್ತ್ರ. ನೀವು ಮನೆಯ ಸುತ್ತಲೂ ಕಾರ್ಬೋಲಿಕ್ ಆಮ್ಲವನ್ನು ಹರಡಿದರೆ, ಹಾವು ಮನೆಯೊಳಗೆ ಪ್ರವೇಶಿಸುವ ಆತಂಕವನ್ನು ಕಡಿಮೆಮಾಡಿಕೊಳ್ಳಬಹುದು.
ಸಲ್ಫರ್ ಪೌಡರ್: ಕಾರ್ಬೋಲಿಕ್ ಆಮ್ಲ ಲಭ್ಯವಿಲ್ಲದಿದ್ದರೆ, ಹಾವು ಚಲಿಸುವ ಜಾಗಕ್ಕೆ ಗಂಧಕದ ಪುಡಿಯನ್ನು ಸಿಂಪಡಿಸಿ. ಇದರೊಂದಿಗೆ ಹಾವು ಅಲ್ಲಿಂದ ದೂರ ಸರಿಯುತ್ತದೆ. ಸಲ್ಫರ್ ಪೌಡರ್ ಹಾವುಗಳ ಮೇಲೆ ಉದುರಿಸಿದರೆ, ಅವುಗಳ ಚರ್ಮಕ್ಕೆ ಕಿರಿಕಿರಿ ಉಂಟಾಗಿ ದೂರ ಹೋಗುತ್ತವೆ.
ಬೆಳ್ಳುಳ್ಳಿ: ನಿಮ್ಮ ಮನೆಯಲ್ಲಿ ಕಾರ್ಬೋಲಿಕ್ ಆಮ್ಲವಿಲ್ಲದಿದ್ದರೆ, ಬೆಳ್ಳುಳ್ಳಿಯನ್ನು ಪುಡಿ ನೀವು ಮನೆಯ ಸುತ್ತಲೂ ಚೆಲ್ಲಬಹುದು. ಅಥವಾ ಬೆಳ್ಳುಳ್ಳಿಯನ್ನು ಜಜ್ಜಿ ಅದಕ್ಕೆ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಒಂದು ದಿನ ಇಟ್ಟುಕೊಂಡು ನಂತರ ಆ ಮಿಶ್ರಣವನ್ನು ಮನೆಯ ಸುತ್ತಲೂ ಸಿಂಪಡಿಸಿ. ಹಾವುಗಳ ಕಾಟ ಇರದು.
ನಿಂಬೆ, ಕೆಂಪು ಮೆಣಸು: ನಿಂಬೆ ರಸದೊಂದಿಗೆ ಕೆಂಪು ಮೆಣಸು ಅಥವಾ ಸುಣ್ಣದ ಪುಡಿಯನ್ನು ಬೆರೆಸಿ ಮನೆಯ ಸುತ್ತಲೂ ಸಿಂಪಡಿಸಬಹುದು. ಹಾವುಗಳು ಆ ಜಾಗಕ್ಕೆ ಬರುವುದಿಲ್ಲ. ಕೊಳೆತ ಈರುಳ್ಳಿಯನ್ನು ಮನೆಯ ಸುತ್ತಲೂ ಚೆಲ್ಲಿದರೂ ಸಾಕು. ಹಾವುಗಳು ಆ ಕಡೆಗೆ ಸುಳಿಯುವುದಿಲ್ಲ.
ನಾಫ್ತಲೀನ್: ಹಾವುಗಳನ್ನು ಮನೆಯ ಆವರಣದಿಂದ ದೂರವಿಡಲು ನಾಫ್ತಲೀನ್ ಕೂಡ ಸುಲಭವಾದ ಮಾರ್ಗ. ಮನೆಯ ಸುತ್ತಲೂ ಜೌಗು ಪ್ರದೇಶವಿದ್ದರೆ ಅಥವಾ ದೀರ್ಘಕಾಲ ನೀರು ನಿಂತಿದ್ದರೆ, ಸ್ವಲ್ಪ ವಿನೆಗರ್ ಅನ್ನು ಸೇರಿಸಬಹುದು. ಆಗ ಹಾವು ಆ ಜಾಗದಲ್ಲಿ ಅಡಗಿಕೊಂಡು ದೂರ ಸರಿಯುತ್ತದೆ.
ಇತ್ತೀಚಿಗೆ ನೋಯ್ಡಾದ ಸೊಸೈಟಿಯೊಂದರಲ್ಲಿ ಒಂದು ತಿಂಗಳೊಳಗೆ 59 ಹಾವುಗಳು ಹೊರಬಂದಿವೆ. ಈ ಹಾವುಗಳಲ್ಲಿ, ಹೆಚ್ಚಿನ ಸಂಖ್ಯೆ ಇದ್ದುದು ನಾಗರಹಾವುಗಳದ್ದು. ಅಲ್ಲದೇ ಛತ್ತೀಸ್‌ಗಢದಲ್ಲಿ ಮನೆಯೊಂದರ ಗೋಡೆ ಒಡೆದಾಗ ಹತ್ತಕ್ಕೂ ಹೆಚ್ಚು ಹಾವುಗಳು ಹೊರಬಂದಿವೆ. ಮನೆಯೊಳಗೆ ಎಲ್ಲಿ ಬೇಕಾದರೂ ಇವು ಗೋಚರಿಸಬಹುದು ಎಂಬುದಕ್ಕೆ ಇವು ನಿದರ್ಶನಗಳಷ್ಟೆ.
ಮಳೆಗಾಲದಲ್ಲಿ ಹಲವು ರೋಗಗಳು ಕಾಡುತ್ತವೆ. ಅಂತೆಯೇ ಹಾವು, ಚೇಳುಗಳ ಕಾಟವೂ ಕಡಿಮೆ ಏನಲ್ಲ. ಮಳೆಗಾಲವಾದ ಕಾರಣ ಅವು ಹೊರಗೆಲ್ಲ ಸಂಚರಿಸುತ್ತಿರುತ್ತವೆ. ಆದ್ದರಿಂದ ಈ ವಿಷಯದಲ್ಲಿ ಬಹಳ ಜಾಗರೂಕರಾಗಿರಿ.