ಕೂದಲು ಉದುರದೆ ಇರಲು ಕೆಲವು ಮನೆಮದ್ದು!

ಕೂದಲು ಉದುರುವುದನ್ನು ತಡೆಯಲು ಸಾಕಷ್ಟು ವಿವಿಧ ಬಗೆಯ ಶಾಂಪೂ ಮತ್ತಿತರ ವಸ್ತುಗಳನ್ನು ಬಳಸುತ್ತೇವೆ ಆದರೆ ಇವುಗಳಿಂದ ಕೂದಲು ಉದುರುವಿಕೆಯನ್ನು ತಡೆಯುವುದಕ್ಕಿಂತ ಅಧಿಕವಾಗಿ ಅಡ್ದ ಪರಿಣಾಮಗಳೇ ಹೆಚ್ಚು. ಆದ್ದರಿಂದಲೇ ಕೂದಲು ಉದುರಿವಿಕೆಯನ್ನು ಕಡಿಮೆ ಮಾಡುವ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದ ಮನೆ ಮದ್ದುಗಳನ್ನು ಬಳಸುವುದು ಕೂದಲಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಮನೆಮದ್ದುಗಳನ್ನು ನೈಸರ್ಗಿಕವಾಗಿ ದೊರಕುವ ವಸ್ತುಗಳನ್ನು ಉಪಯೋಗಿಸಿ ತಯಾರಿಸುವುದಾದ್ದರಿಂದ ಇದು ಕೂದಲಿಗೆ ಬಹಳ ಒಳ್ಳೆಯದು.

ಕೂದಲು ಉದುರುವುದನ್ನು ತಡೆಯಲು:

ಲೊಳೆಸರ : ಇತ್ತೀಚೆಗೆ ಹೆಚ್ಚುತಿರುವ ಮಾಲಿನ್ಯದಿಂದ ಕೂದಲು ಉದುರುವ ಸಮಸ್ಯೆಯು ಸಹ ಬಹಳ ಸಾಮಾನ್ಯವಾಗಿ ಕಂಡುಬರುತ್ತಿದೆ. ಕೂದಲು ಉದುರುವುದರಿಂದ ಕಾಪಾಡಿಕೊಳ್ಳುವುದಕ್ಕೆ ನಾವು ಲೊಳೆಸರವನ್ನು ಬಳಸಬಹುದು. ಲೊಳೆಸರದ ಮಂದವಾದ ಕ್ಷಾರೀಯ ಗುಣ ನಮ್ಮ ನೆತ್ತಿಯ ನೈಸರ್ಗಿಕ ಪಿ. ಹೆಚ್(PH) ಮಟ್ಟವನ್ನುಕಾಯ್ದುಕೊಳ್ಳಲು ಸಹಾಯ ಮಾಡುವುದರಿಂದ ನೆತ್ತಿಯ ಚರ್ಮದ ಆರೋಗ್ಯ ಹಾಗೂ ಕೂದಲ ಮರು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ತಲೆ ಹೊಟ್ಟನ್ನು ನಿವಾರಿಸುವಲ್ಲಿ ಸಹ ಲೊಳೆಸರ ಬಹಳ ಸಹಾಯಕಾರಿ. ಲೊಳೆಸರದ ಎಲೆಯನ್ನು ಕತ್ತರಿಸಿ ಅದರಲ್ಲಿರುವ ಸಾರವನ್ನು ನಿಮ್ಮ ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿರಿ. 45 ನಿಮಿಷಗಳು ಅಥವಾ ಒಂದು ಗಂಟೆಯ ನಂತರ ನೀರಿನಲ್ಲಿ ತಲೆಯನ್ನು ತೊಳೆದುಕೊಳ್ಳಿರಿ. ಈ ರೀತಿಯಾಗಿ ವಾರಕ್ಕೆ ಮೂರು ನಾಲ್ಕು ಬಾರಿ ಮಾಡುವುದರಿಂದ ಫಲಿತಾಂಶ ಉತ್ತಮವಾಗಿರುತ್ತದೆ.

ತೆಂಗಿನ ಎಣ್ಣೆ ತೆಂಗಿನ ಎಣ್ಣೆ ಹಾಗೂ ಒಂದೆರಡು ನೆಲ್ಲಿ ಒಣ ತುಂಡುಗಳನ್ನು ಮಿಶ್ರಣ ಮಾಡಿ ಕುದಿಸಿ ಬಾಟಲಿಯಲ್ಲಿ ಶೇಖರಿಸಿಡಿ. ನಂತರ ನಿರಂತರವಾಗಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚುತ್ತಾ ಬನ್ನಿ. ಇದರಿಂದ ಭಾಗಶಃ ಕೂದುಲು ಉದುರುವುದು ಕಡಿಮೆಯಾಗುತ್ತದೆ.

ಬೇವಿನ ಎಲೆಗಳು:ಬೇವು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿ. ಕೂದಲು ಉದುರುವುದನ್ನು ತಡೆಯಲು ಇದನ್ನು ಮಾಸ್ಕ್ ಆಗಿ ಬಳಸಬಹುದು. ಬೇವಿನ ಎಲೆಗಳನ್ನು ಕುದಿಸಿ ನಂತರ ಅವುಗಳನ್ನು ಪೇಸ್ಟ್ ಮಾಡಿ. ಶಾಂಪೂ ಮಾಡಿದ ನಂತರ ಪೇಸ್ಟ್ ಅನ್ನು ಅನ್ವಯಿಸಿ. 30 ನಿಮಿಷಗಳ ನಂತರ ಕೂದಲು ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಬಳಸಿ

ಕೂದಲು ಉದುರುವಿಕೆ ತಡೆಯುವುದಕ್ಕೆ ಈರುಳ್ಳಿ :ನಿಮ್ಮ ಕೂದಲು ಅತಿಯಾಗಿ ಉದುರುತ್ತಿದ್ದರೆ, ಅದನ್ನು ತಡೆಗಟ್ಟಲು ಹಾಗೂ ಕೂದಲು ಮತ್ತೆ ಬೆಳೆಯುವಂತೆ ಮಾಡಲು ಈರುಳ್ಳಿ ಒಂದು ಅಧ್ಭುತವಾದ ಔಷಧಿಯಾಗಿ ಕೆಲಸಮಾಡುತ್ತದೆ. ಹೌದು, ನಿಮ್ಮ ಅಡುಗೆಮನೆಯಲ್ಲಿರುವ ಈರುಳ್ಳಿಯಲ್ಲಿ ಹೆಚ್ಚಾಗಿರುವ ಗಂಧಕದ ಅಂಶ ನಮ್ಮ ನೆತ್ತಿಯ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಕೂದಲ ಬೇರಿಗೆ ಶಕ್ತಿಯನ್ನು ಒದಗಿಸುತ್ತದೆ ಹಾಗೂ ಆದರ ಜೀವಿರೋಧೀ ಗುಣ ನಮ್ಮ ನೆತ್ತಿಯಲ್ಲಿರಬಹುದಾದ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ತಾಜಾ ಈರುಳ್ಳಿಗಳನ್ನು ರುಬ್ಬಿ ಅದರ ರಸವನ್ನು ಹೀರಿತೆಗೆದು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ ಹಾಗೂ ಅರ್ಧ ಗಂಟೆಯ ನಂತರ ಸೌಮ್ಯವಾದ ಸಾಬೂನು ಹಾಗೂ ನೀರಿನೊಂದಿಗೆ ತೊಳೆಯಿರಿ.

ತಣ್ಣೀರಿನಿಂದ ಆರೈಕೆ:ತಣ್ಣನೆಯ ನೀರಿನಲ್ಲಿ ಕೂದಲನ್ನು ತೊಳೆದು ಬೆರಳುಗಳಿಂದ ಬಲವಾಗಿ ತಲೆಯನ್ನು ಉಜ್ಜಿ. ಇದು ಕ್ರಮೇಣ ಕೂದಲು ಉದುರುವ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು:ದೈನಂದಿನ ಜಂಜಾಟದಿಂದ ಮನಸ್ಸು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತದೆ.. ಸರಿಯಾದ ರೀತಿಯಲ್ಲಿ ನಿದ್ರೆ ಆಗುವುದಿಲ್ಲ.. ಜವಾಬ್ದಾರಿಗಳು ಹೆಚ್ಚಿದಷ್ಟು ಮನಸ್ಸಿನ ಮೇಲೆ ಭಾರ ಬೀಳುತ್ತದೆ.. ಹೀಗಾಗಿ ಆದಷ್ಟು ಮನಸ್ಸನ್ನು ಸಂತೋಷ ಹಾಗೂ ಉಲ್ಲಾಸದಿಂದ ಇಟ್ಟುಕೊಳ್ಳಬೇಕು.. ಒಂದು ವೇಳೆ ಮಾನಸಿಕ ಒತ್ತಡ ಹೆಚ್ಚಾದರೆ ಕೂದಲುದುರುವ ಸಮಸ್ಯೆಯೂ ಅಧಿಕವಾಗಲಿದೆ.. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಕೂದಲು ಉದುರುವುದನ್ನು ತಡೆಯಬಹುದು

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group