ನಿಮ್ಮ ವಾಟ್ಸಾಪ್ ಹ್ಯಾಕ್ ಮಾಡುವ ವಿಧಾನಗಳ ಬಗ್ಗೆ ಎಚ್ಚರ ವಹಿಸಿ!

ಫೇಸ್‌ಬುಕ್ ಒಡೆತನದ ವಾಟ್ಸಾಫ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈಗಾಗಲೇ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿ ನೆಚ್ಚಿನ ಅಪ್ಲಿಕೇಶನ್ ಎನಿಸಿಕೊಂಡಿದೆ. ಇನ್ನು ಬಳಕೆದಾರರ ಮಾಹಿತಿ ಗೌಪ್ಯತೆಗೆ ಸಂಬಂಧಿಸಿದಂತೆ ಅನೇಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಬಳಕೆದಾರರ ಸಂದೇಶಗಳನ್ನು ಖಾಸಗಿಯಾಗಿಡಲು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಬಳಸುವಂತಹ ಕೆಲವು ಭದ್ರತಾ ಫೀಚರ್ಸ್‌ಗಳನ್ನು ಇದು ಹೊಂದಿದೆ. ಆದಾಗ್ಯೂ, ವಾಟ್ಸಾಪ್ ಅನ್ನು ಕೆಲವೊಮ್ಮೆ ಹ್ಯಾಕ್ ಮಾಡುವ ಸಾದ್ಯತೆ ಕೂಡ ಇದೆ.
ಒಟ್ಟಾರೆ, ನನ್ನ ಚಾಟ್ ಯಾರು ಕದಿಯಬಾರದು, ಮೊಬೈಲ್ ಕಳೆದು ಹೋದರು ಸೇಫ್ ಇರಬೇಕು, ಇದು ಸಾಧ್ಯವೇ?ಸಾಧ್ಯ. ವಾಟ್ಸಪ್ ನಲ್ಲಿ ನಿಮಗೆ ಬೇಕಾದ ಸಂದೇಶವನ್ನು ನಿಮ್ಮ ಮೈಲ್ ಬಾಕ್ಸ್ ಗೆ ರವಾನಿಸಿಕೊಳ್ಳಿ, ಅಥವಾ settings>>Chat>>Chat backup ಒತ್ತಿ, ಜೊತೆಗೆ ಚಾಟ್ ಹಿಸ್ಟರಿ ಕೂಡಾ ಅಕ್ರೈವ್ ಮಾಡಿಕೊಳ್ಳಿ. [ಗೂಢಲಿಪಿ ಕಾಯ್ದೆಯಿಂದ ವಾಟ್ಸಪ್ ಗೆ ರಿಯಾಯಿತಿ]ಅಥವಾ ನನಗೆ ಯಾವ ಸಂದೇಶಗಳನ್ನು ಸೇವ್ ಮಾಡಿಟ್ಟುಕೊಳ್ಳಬೇಕಾಗಿಲ್ಲ ಎಂದೆನಿಸಿದರೆ ಎಲ್ಲವನ್ನು ಡಿಲೀಟ್ ಮಾಡಿ. ಅದರೆ, ಇದು ಒಂದು ಹಂತದ ಸುರಕ್ಷತೆ ಅಷ್ಟೆ.
ವಾಸ್ತವವಾಗಿ, ಇಂಟರ್ನೆಟ್ ಸಹಾಯದಿಂದ, ಯಾವುದೇ ಎಲೆಕ್ಟ್ರಾನಿಕ್ ಸಾಧನವನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಚಾಟಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಅನ್ನು ಸಹ ಬಹಳ ಸುಲಭವಾಗಿ ಹ್ಯಾಕ್ ಮಾಡಬಹುದು. ನಿಮ್ಮ ವಾಟ್ಸಾಪ್ ಖಾತೆಗೆ ಬೇರೊಬ್ಬರು ಪ್ರವೇಶವನ್ನು ಹೊಂದಿರಬಹುದು ಮತ್ತು ಅದರ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ವಾಟ್ಸಾಪ್ ಅಕೌಂಟ್ ಸುರಕ್ಷಿತವಾಗಿದೆಯೇ? ಎಂದು ಕಂಡು ಹಿಡಿಯುವುದು ಬಹಳ ಮುಖ್ಯ.
ಇದೀಗ ನಿಮ್ಮ ವಾಟ್ಸಾಪ್ ಖಾತೆ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುವುದು ಬಹಳ ಮುಖ್ಯ. ಅದನ್ನು ತಿಳಿಯಲು ಇಲ್ಲಿದೆ ಸುಲಭ ಟ್ರಿಕ್* ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ.