ಮರಸೇಬಿನ ಆರೋಗ್ಯಕರ ಉಪಯೋಗಳು !

ಮರಸೇಬಿನ ಆರೋಗ್ಯಕರ ಉಪಯೋಗಳು ಗೊತ್ತಾದರೆ ಅಸಡ್ಡೆ ಮಾಡದೆ ಸೇವಿಸುತ್ತಿರಿ. ಮರಸೇಬು ಅಥವಾ ಪಿಯರ್ಸ್ ಎಂದು ಕರೆಯಲಾಗುತ್ತದೆ. ಈ ಹಣ್ಣು ನೋಡುವುದಕ್ಕೆ ಸ್ವಲ್ಪ ಸೇಬು ಮತ್ತು ಪೇರಲೆ ಹಣ್ಣಿನ ಆಕಾರವನ್ನು ಹೊಂದಿದೆ. ಈ ಮರಸೇಬು ಗುಣದಲ್ಲಿ ವಿಭಿನ್ನವಾಗಿ ಇರುತ್ತದೆ. ಸಾವಿರಾರು ವರ್ಷಗಳ ಹಿಂದೆ ಇಂದಲೂ ಈ ಹಣ್ಣನ್ನು ಬಳಕೆ ಮಾಡುತ್ತಿದ್ದಾರೆ. ಈ ಹಣ್ಣಿನ ಮೂಲ ಯುರೋಪ್ ದೇಶವಾಗಿದೆ. ಇದನ್ನು ಕಡಿಮೆ ಉಷ್ಣವಲಯದಲ್ಲಿ ಬೆಳೆಯಲಾಗುತ್ತದೆ. ಹಸಿರು ಬಣ್ಣ ಇರುವ ಈ ಹಣ್ಣು ಕೊಂಚ ಗಟ್ಟಿಯಾಗಿರುತ್ತದೆ. ಆದ್ರೆ ಇದು ಹಣ್ಣಾಗಿ ಮೆತ್ತಗೆ ಆಗುವುದಿಲ್ಲ. ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ಇರುವುದರಿಂದ ಇದು ರುಚಿಯಲ್ಲಿ ವಗ್ರವಾಗಿ ಇರುತ್ತದೆ. ಈ ಹಣ್ಣಿನಲ್ಲಿ ಸೇಬು ಹಣ್ಣಿನಷ್ಟೇ ಪೌಷ್ಟಿಕಾಂಶ ಇರುವುದಲ್ಲದೇ ಉತ್ತಮವಾದ ನಾರಿನ ಅಂಶವನ್ನು ಹೊಂದಿರುತ್ತದೆ. ಒಂದು ಮಧ್ಯಮ ಗಾತ್ರದ ಮರ ಸೇಬು ಹಣ್ಣಿನಲ್ಲಿ ಆರು ಗ್ರಾಂ ನಷ್ಟು ನಾರಿನ ಅಂಶ ಇರುತ್ತದೆ. ಇದು ಶೇಕಡಾ ಇಪ್ಪತ್ನಾಲ್ಕುರಷ್ಟು ದಿನನಿತ್ಯಕ್ಕೆ ಬೇಕಾಗುವ ನಾರಿನ ಅಂಶವನ್ನು ಪೂರೈಸುತ್ತದೆ. ಈ ಹಣ್ಣಿನಲ್ಲಿ ನಾರಿನ ಅಂಶ ಇರುವುದರಿಂದ ಯಾರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ.
ಅವರಿಗೆ ಈ ಹಣ್ಣು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ ಎಂದರೆ ತಪ್ಪಾಗಲಾರದು. ಈ ಹಣ್ಣಿನಲ್ಲಿ ಇರುವ ನಾರಿನ ಅಂಶವೇ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ. ಮತ್ತು ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುವುದರಿಂದ ಇದು ಕ್ಯಾನ್ಸರ್ ಜನಕ ಜೀವಕೋಶಗಳನ್ನು ಬೆಳೆಯದಂತೆ ನೋಡಿಕೊಳ್ಳುತ್ತದೆ. ಮತ್ತು ಕರುಳಿನ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. ಅಷ್ಟೇ ಅಲ್ಲದೆ ಇದು ದೇಹದಲ್ಲಿ ಇರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಇದರಿಂದಾಗಿ ಹೃದಯ ಕಾಯಿಲೆ ಇಂದ ನಮ್ಮನ್ನು ಈ ಹಣ್ಣು ರಕ್ಷಿಸುತ್ತದೆ. ಮತ್ತು ಇದು ಸಿಹಿಯಾಗಿ ಇದ್ದರೂ ಕೂಡ ಕಡಿಮೆ ಗ್ಲಿಸರಿನ್ ಸೂಚ್ಯಂಕ ಮತ್ತು ಫೈಬರ್ ಅಂಶ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಇದು ಸಹಾಯ ಮಾಡುತ್ತದೆ. ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಆಂಟಿ ಆಕ್ಸಿಡೆಂಟ್ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ವಿವಿಧ ರೋಗಗಳ ವಿರುದ್ಧ ಹೋರಾಡಲು ಈ ಹಣ್ಣು ಪ್ರೇರೇಪಿಸುತ್ತದೆ.
ನೀರಿನಾಂಶವಿದೆ ಮರಸೇಬುವಿನಲ್ಲಿ ಶೇ. 84 ರಷ್ಟು ನೀರಿನ ಅಂಶವಿರುತ್ತದೆ. ಜತೆಗೆ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಹಾಗಾಗಿ ದೇಹದ ತೂಕ ನಿಯಂತ್ರಿಸುವಲ್ಲಿ ಇದು ಸಹಾಯಕ. ಜತೆಗೆ ಈ ಹಣ್ಣು ಸೇವನೆಯು ದೇಹವನ್ನು ತಂಪಾಗಿರಿಸುತ್ತದೆ
ಮರಸೇಬು ಹಣ್ಣು ಸೇವನೆ ಮಾಡುವುದರಿಂದ ಜ್ವರವನ್ನು ಗುಣಪಡಿಸಬಹುದು. ಈ ಹಣ್ಣನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಶಕ್ತಿ ಕೂಡ ವೃದ್ಧಿಸುತ್ತದೆ. ಈ ಹಣ್ಣಿನಲ್ಲಿ ವಿಶೇಷವಾದ ಗುಣ ಅಡಗಿದೆ. ಅದು ಏನೆಂದರೆ ಈ ಹಣ್ಣಿನಲ್ಲಿ ಹೆಚ್ಚಾಗಿ ಗ್ಲೂಕೋಸ್ ಇದೆ. ಇದು ತ್ವರಿತ ಶಕ್ತಿಯನ್ನು ದೇಹಕ್ಕೆ ಒದಗಿಸಿ ಕೊಡುತ್ತದೆ. ಇದು ದೇಹದಿಂದ ಬೇಗನೆ ಹೀರಲ್ಪಡುತ್ತದೆ. ಮತ್ತು ಶಕ್ತಿಯನ್ನಾಗಿ ಪರಿವರ್ತನೆ ಮಾಡುತ್ತದೆ. ಮರ ಸೇಬುವಿನಲ್ಲಿ ಇತರ ಹಣ್ಣುಗಳೊಂದಿಗೆ ಹೋಲಿಸಿದಾಗ ಅಲರ್ಜಿಯ ಪ್ರಕ್ರಿಯೆಗಳಿಗೆ ಕಡಿಮೆ ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಇದು ಶಿಶುಗಳಿಗೆ ನೀಡಬಹುದಾದ ಕೆಲವು ಹಣ್ಣುಗಳಲ್ಲಿ ಒಂದಾಗಿದೆ. ಪಿಯರ್ಸ್ ಹಣ್ಣನ್ನು ಮಧುಮೇಹಿಗಳು ನಿರಾಳವಾಗಿ ಸೇವನೆ ಮಾಡಬಹುದಾದಂತಹ ಹಣ್ಣುಗಳಲ್ಲಿ ಒಂದಾಗಿದೆ. ಮರ ಸೇಬು ಹಣ್ಣನ್ನು ರಸ ಮಾಡಿ ಸೇವನೆ ಮಾಡುವುದ ಕಿಂತ ಉಪ್ಪು ಖಾರದ ಜೊತೆಗೆ ಹಾಗೆ ಸೇವಿನೆ ಮಾಡಿದರೆ ಇನ್ನು ರುಚಿಯಾಗಿರುತ್ತದೆ. ಈ ಮರ ಸೇಬುವಿನ ಆರೋಗ್ಯಕರ ಪ್ರಯೋಜನಗಳು ಇಷ್ಟವಾದರೆ ಇದರ ಲಾಭಗಳನ್ನು ಪಡೆಯಲು ಇದರ ಸೇವನೆ ಮಾಡುವುದನ್ನು ದಿನವೂ ರೂಢಿಸಿಕೊಳ್ಳಿ. ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ.