ತೆಂಗಿನ ಹಾಲಿನ ಹಲವು ಪ್ರಯೋಜನಗಳು..!

ನೀವೆಲ್ಲರೂ ಎಲ್ಲಾ ರೀತಿಯ ಚಹಾವನ್ನು ಕುಡಿದಿರಬೇಕು, ಆದರೆ ನೀವು ಎಂದಾದರೂ ತೆಂಗಿನ ಹಾಲಿನ ಚಹಾವನ್ನು ಸೇವಿಸಿದ್ದೀರಾ. ನೀವು ಕುಡಿಯದಿದ್ದರೆ, ಖಂಡಿತವಾಗಿಯೂ ಈ ಚಹಾವನ್ನು ಕುಡಿಯಿರಿ. ಸಾಮಾನ್ಯ ಹಾಲಿನ ಚಹಾಕ್ಕಿಂತ ತೆಂಗಿನ ಹಾಲಿನ ಚಹಾ ಹೆಚ್ಚು ಪ್ರಯೋಜನಕಾರಿಯಾಗಿದೆ. ತೆಂಗಿನ ಹಾಲಿನಿಂದ ತಯಾರಿಸಿದ ಚಹಾವನ್ನು ಕುಡಿಯುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ತೆಂಗಿನ ಹಾಲು ಅನೇಕ ಪೌಷ್ಟಿಕಾಂಶದ ಗುಣಗಳಿಂದ ಸಮೃದ್ಧವಾಗಿದೆ, ಇದು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ತೆಂಗಿನ ಹಾಲಿನ ಚಹಾವನ್ನು ಕುಡಿಯುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗಾದರೆ ತೆಂಗಿನ ಹಾಲಿನ ಟೀ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.
#ಬಾಯಿ ಹುಣ್ಣು: ಆಗಾಗ್ಗೆ ಕಾಣಿಸಿಕೊಳ್ಳುವ ಬಾಯಿ ಹುಣ್ಣಿಗೆ ಕಾರಣ ಹೊಟ್ಟೆಯ ಅಸ್ವಸ್ಥತೆ. ನೀವು ನಿಮ್ಮ ಹೊಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಬಾಯಿ ಹುಣ್ಣುಗಳ ಸಮಸ್ಯೆಯನ್ನು ತಪ್ಪಿಸಬಹುದು. ಅದಕ್ಕಾಗಿ ನೀವು ತೆಂಗಿನ ಹಾಲನ್ನು ಮನೆಮದ್ದಾಗಿ ತೆಗೆದುಕೊಳ್ಳಬಹುದು. ಇದು ಹುಣ್ಣುಗಳ ಸಮಸ್ಯೆಯನ್ನು ಕಡಿಮೆ ಮಾಡುವುದರ ಜೊತೆ ಹೊಟ್ಟೆಯ ಆರೋಗ್ಯವನ್ನು ಹೆಚ್ಚಿಸುತ್ತದೆ.
#ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುತ್ತದೆ : ಇತ್ತೀಚಿಗೆ ಸಕ್ಕರೆ ಕಾಯಿಲೆ ಹೊಂದಿರುವ ಜನರು ಎಲ್ಲಾ ಕಡೆ ಕಂಡು ಬರುತ್ತಾರೆ. ತಮ್ಮ ಆಹಾರ ಶೈಲಿಯಿಂದ ಅಥವಾ ಅನುವಂಶೀಯವಾಗಿ ಮಧುಮೇಹವನ್ನು ದತ್ತು ಪಡೆದು ಜೀವನ ನಡೆಸುತ್ತಿರುತ್ತಾರೆ.ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೂ ತೊಂದರೆಯೇ ಮತ್ತು ಕಡಿಮೆಯಾದರೂ ತೊಂದರೆಯೇ. ಹಾಗಾಗಿ ಸರಿಯಾದ ಇನ್ಸುಲಿನ್ ಉತ್ಪತ್ತಿ ನಿರ್ವಹಣೆ ಮಾಡಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣ ಮಾಡಿಕೊಳ್ಳಬಹುದು.ಮಧುಮೇಹ ಹೊಂದಿದ ವ್ಯಕ್ತಿಗಳಿಗೆ ತೆಂಗಿನ ಹಾಲು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಹರಿಯುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಮಧುಮೇಹ ಸಮಸ್ಯೆ ಏರುಪೇರಾಗದಂತೆ ನೋಡಿಕೊಳ್ಳುತ್ತದೆ.ಇನ್ನೊಂದು ಅಚ್ಚರಿ ವಿಷಯ ಎಂದರೆ ಹಾಲನ್ನು ಬಳಸಿ ತಯಾರು ಮಾಡುವ ಹಾಲಿನ ಉತ್ಪನ್ನಗಳಿಗೆ ಮತ್ತು ಸಿಹಿ ತಿಂಡಿಗಳಿಗೆ ಪರ್ಯಾಯವಾಗಿ ತೆಂಗಿನ ಹಾಲನ್ನು ಬಳಕೆ ಮಾಡಬಹುದು. ನೈಸರ್ಗಿಕವಾದ ಸಕ್ಕರೆ ಅಂಶ ಇದರಲ್ಲಿರುವ ಕಾರಣದಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ
#ಚರ್ಮ ಮೃದುವಾಗಿರುತ್ತದೆ : ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದರಿಂದ, ದೇಹದ ಮೇಲೆ ವಯಸ್ಸಿನ ರೇಖೆಗಳು ಕಡಿಮೆ ಗೋಚರಿಸುತ್ತದೆ. ತೆಂಗಿನಕಾಯಿ ಹಾಲನ್ನು ಬಳಸಿ ಚರ್ಮದ ಶುಷ್ಕತೆಯನ್ನು ತೊಡೆದುಹಾಕಬಹುದು. ತೆಂಗಿನ ಹಾಲು ಕುಡಿಯುವುದರಿಂದ ಚರ್ಮದ ಮೃದುತ್ವವನ್ನು ಕಾಪಾಡುತ್ತದೆ.
#ಬ್ಯಾಕ್ಟೀರಿಯಾ ಸೋಂಕಿನಿಂದ ರಕ್ಷಣೆ: ಬದಲಾಗುತ್ತಿರುವ ಸೀಸನ್ ಅಥವಾ ಕಲುಷಿತ ಆಹಾರದ ಕಾರಣದಿಂದಾಗಿ, ಬ್ಯಾಕ್ಟೀರಿಯಾದ ಸೋಂಕು ಯಾವಾಗಲೂ ನಿಮ್ಮನ್ನು ಬಲಿಪಶುವಾಗಿಸುತ್ತದೆ. ಆದ್ದರಿಂದ, ನಿಮ್ಮ ಆಹಾರಕ್ರಮದಲ್ಲಿ ವಿಶೇಷ ಗಮನ ಕೊಡಿ. ನಿಮ್ಮ ಆಹಾರದಲ್ಲಿ ಅ್ಯಂಟಿ ಬ್ಯಾಕ್ಟೀರಿಯಾ ಅಂಶ ಹೊಂದಿರುವ ಆಹಾರಗಳನ್ನು ಸೇರಿಸಿ. ತೆಂಗಿನ ಹಾಲಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆ್ಯಂಟಿವೈರಲ್ ಮತ್ತು ಆ್ಯಂಟಿಫಂಗಲ್ ಗುಣಗಳಿವೆ. ವಿವಿಧ ರೀತಿಯ ಸೋಂಕುಗಳು ಮತ್ತು ರೋಗಗಳಿಂದ ನಿಮ್ಮನ್ನು ರಕ್ಷಿಸುವಂತೆ ತೆಂಗಿನ ಹಾಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.
#ಮೂಳೆಗಳನ್ನು ಬಲಪಡಿಸಲು ಈ ಹಾಲು ಕುಡಿಯಿರಿ : ಎಲುಬುಗಳನ್ನು ಬಲಪಡಿಸಲು ತೆಂಗಿನ ಹಾಲು ತೆಗೆದುಕೊಳ್ಳಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ರಂಜಕವಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
#ಮೇಕಪ್ ನಿವಾರಣೆಗೆ:ಮೇಕಪ್ ನಿವಾರಣೆಗೆ ತೆಂಗಿನ ಹಾಲು ಅತ್ಯುತ್ತಮವಾದ ನೈಸರ್ಗಿಕ ಸಾಧನವಾಗಿದೆ. ಇದು ಮೇಕಪ್ ನ ಕಣಗಳನ್ನು ಬುಡದಿಂದ ನಿವಾರಿಸುವುದರ ಜೊತೆಗೇ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನೂ ನೀಡುತ್ತದೆ. ಇದಕ್ಕಾಗಿ ಒಂದು ದೊಡ್ಡ ಚಮಚ ತೆಂಗಿನ ಹಾಲು ಮತ್ತು ಒಂದು ಚಿಕ್ಕ ಚಮಚ ಆಲಿವ್ ಎಣ್ಣೆ ಬೆರೆಸಿ ಈ ದ್ರವದಲ್ಲಿ ಹತ್ತಿಯುಂಡೆಯನ್ನು ಬೆರೆಸಿ ಕೊಂಚವೇ ಒತ್ತಡದಿಂದ ಒರೆಸಿಕೊಳ್ಳುವ ಮೂಲಕ ಮೇಕಪ್ ನಿವಾರಿಸಲು ಸಾಧ್ಯ.