LPG ಸಬ್ಸಿಡಿ ಕುರಿತು ಬಿಗ್ ಅಪ್‌ಡೇಟ್ ನೀಡಿದ ಸರ್ಕಾರ!

ಸುದ್ದಿಯೊಂದು ಬಂದಿದೆ. LPG ಗ್ರಾಹಕರು ಸರ್ಕಾರದಿಂದ ದೊಡ್ಡ ಉಡುಗೊರೆಯನ್ನ ಇನ್ನು ಕೆಲವೇ ದಿನಗಳಲ್ಲಿ ಪಡೆಯುವುದು ಪಕ್ಕಾ ಎನ್ನಲಾಗಿದೆ. ಹೌದು ದ್ರವೀಕೃತ ಪೆಟ್ರೋಲಿಯಂ ಅನಿಲ(LPG) ಮೇಲಿನ ಸಬ್ಸಿಡಿಯನ್ನು ಮತ್ತೇ ಆರಂಭಿಸುವ ಕುರಿತು ಚರ್ಚೆ ನಡೆದಿದೆ ಎಂದು ವರದಿಯಾಗಿದೆ.
ಬಜೆಟ್ ಸಬ್ಸಿಡಿಯು 2022 ರ FY ನಲ್ಲಿ ಬಹುತೇಕ ಮುಗಿದ ನಂತರ, ಈಗ ಕೇಂದ್ರ ಸರ್ಕಾರವು FY 2003 ರಲ್ಲಿ ಅದನ್ನು ಮತ್ತೆ ಪ್ರಾರಂಭಿಸಬಹುದು. ಇದು ಸಾಧ್ಯವಾದಲ್ಲಿ ಸುಮಾರು 9 ಕೋಟಿ ಜನರು ದುಬಾರಿ LPG ಯಿಂದ ಕೊಂಚ ರೀಲ್ಯಾಕ್ಸ್ ಆಗಬಹುದು. ಇನ್ನು ಈ ಸಬ್ಸಿಡಿಯನ್ನು 2 ವರ್ಷಗಳ ಹಿಂದೆಯೆ ನಿಲ್ಲಿಸಲಾಗಿದೆ.
2020 ರಲ್ಲಿ ಕೊರೋನಾ ಬಿಕ್ಕಟ್ಟಿನ ಮೊದಲ ಅಲೆಯ ಅವಧಿಯಲ್ಲಿ ಸರ್ಕಾರವು ಜೂನ್ ತಿಂಗಳ ಅಂತ್ಯದಿಂದ ಗ್ಯಾಸ್ ಸಿಲಿಂಡರ್ ಗಳ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಿದೆ.
ಜೂನ್ 2020 ರಿಂದ LPG ಸಬ್ಸಿಡಿ ರೂಪದಲ್ಲಿ ಯಾವುದೇ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿಲ್ಲ. ಆದರೆ, ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ನೀಡಿದವರಿಗೆ ಮಾತ್ರ 200 ರೂ ಸಬ್ಸಿಡಿ ನೀಡಲಾಗುತ್ತಿದೆ.
FY 2023 ರ ಬಜೆಟ್ ನಲ್ಲಿ LPG ಸಬ್ಸಿಡಿಗಾಗಿ ಕೇಂದ್ರವು 5,800 ಕೋಟಿ ರೂಪಾಯಿ ಒದಗಿಸಿದೆ. ಇದರಲ್ಲಿ ಗೃಹ ಬಳಕೆಗಾಗಿ 4,000 ಕೋಟಿ ರೂ.ಗಳ ನೇರ ಲಾಭ ವರ್ಗಾವಣೆ ಮತ್ತು ಉಜ್ವಲ ಯೋಜನೆಯಡಿ ಬಡವರಿಗೆ 800 ಕೋಟಿ ರೂ. FY23 ರ ಬಜೆಟ್ ಹಂಚಿಕೆ ಅಸಮರ್ಪಕವಾಗಿದೆ ಎಂದು ಹೇಳಲಾಗಿದ್ದು, ಹೆಚ್ಚುವರಿ ಹಂಚಿಕೆ ಅಗತ್ಯವಿದೆ. ಆದರೆ ಇದು 40,000 ಕೋಟಿ ರೂ.ಗಿಂತ ಹೆಚ್ಚಿಲ್ಲದಿರಬಹುದು ಎನ್ನಲಾಗಿದೆ.