ಮೆಂತ್ಯಯ ಆರೋಗ್ಯ ಪ್ರಯೋಜನ ತಿಳಿಯಿರಿ!

ಅಡುಗೆ ಮನೆಯಲ್ಲಿ ಸಣ್ಣ ಡಬ್ಬದಲ್ಲಿರುವಂತಹ ಸಾಂಬಾರ ಪದಾರ್ಥಗಳಿಂದ ಹಲವಾರು ರೋಗಗಳನ್ನೇ ಗೆಲ್ಲಬಹುದು ಮತ್ತು ತಡೆಯಬಹುದು ಎಂದು ನಮ್ಮ ಹಿರಿಯರು ಹೇಳುತ್ತಲಿದ್ದರು. ಇದು ನಿಜ ಕೂಡ. ಆದರೆ ನಾವು ಆಸ್ಪತ್ರೆಯ ಔಷಧಿಗೆ ಒಗ್ಗಿಕೊಂಡಿರುವ ಕಾರಣದಿಂದಾಗಿ ನಮಗೆ ಇದರಲ್ಲಿರುವಂತಹ ಆರೋಗ್ಯಕಾರಿ ಗುಣಗಳು ಕಾಣುವುದೇ ಇಲ್ಲ. ನಾವು ಇದನ್ನು ಬಳಸಿದರೆ ಒಂದೆರಡು ದಿನಗಳು ಮಾತ್ರ.
ಇಷ್ಟು ವೇಗವಾಗಿ ಯಾವುದೇ ನೈಸರ್ಗಿಕ ಮದ್ದುಗಳು ಪರಿಣಾಮ ನೀಡಲ್ಲ. ಈ ಲೇಖನದಲ್ಲಿ ನಾವು ನೀರಿನಲ್ಲಿ ನೆನೆಸಿಟ್ಟ ಮೆಂತೆ ಕಾಳಿನ ಆರೋಗ್ಯ ಲಾಭಗಳ ಬಗ್ಗೆ ತಿಳಿಯುವ. ಇದು ಉರಿಯೂತ ಶಮನಕಾರಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಮೆಂತ್ಯೆಯಲ್ಲಿ ಆ್ಯಂಟಿಆಕ್ಸಿಡೆಂಟ್, ಸೂಕ್ಷ್ಮಾಣು ವಿರೋಧಿ ಗುಣಗಳು ತುಂಬಿವೆ. ಇದರಿಂದ ಹೆಚ್ಚಾಗಿ ಮೆಂತೆಯನ್ನು ಹಲವಾರು ರೋಗಗಳ ಶಮನಕ್ಕೆ ಬಳಸಿಕೊಳ್ಳುವರು. ಇದರ ಲಾಭಗಳ ಬಗ್ಗೆ ಮತ್ತಷ್ಟು ತಿಳಿಯುವ.
#ಮಧುಮೇಹ ನಿಯಂತ್ರಿಸುವುದು:ಮೆಂತೆ ಕಾಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಇದರಲ್ಲಿ ಇರುವಂತಹ ಅಮಿನೊ ಆಮ್ಲವು ಇನ್ಸುಲಿನ್ ಹೀರಿಕೊಳ್ಳಲು ನೆರವಾಗುವುದು ಮತ್ತು ಇದರಿಂದಾಗಿ ಸಕ್ಕರೆ ಮಟ್ಟವು ಕಡಿಮೆ ಆಗುವುದು. ಮೆಂತೆ ಕಾಳುಗಳ ಸೇವನೆ ಮಾಡಿದವರಲ್ಲಿ ಮಧುಮೇಹದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ.
#ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು:ಮೆಂತ್ಯೆಕಾಳಿನ ನೀರನ್ನು ಬಿಸಿಯಾಗಿ ಸೇವಿಸಿದರೆ ಆಗ ಅದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುವುದು. ಬೆಳಗ್ಗೆ ಎದ್ದ ಕೂಡಲೇ ಇದನ್ನು ಕುಡಿದರೆ ಅದು ವಿಷವನ್ನು ಹೊರಹಾಕುವುದು. ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ, ಕಿಡ್ನಿ ಕಲ್ಲನ್ನು ನಿವಾರಿಸುವುದು.
#ತೂಕ ಇಳಿಕೆ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದಿಷ್ಟು ಮೆಂತ್ಯ ಕಾಳನ್ನು ಜಗಿದು ತಿಂದರೆ ಹೆಚ್ಚುವರಿ ಕ್ಯಾಲೋರಿ ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತದೆ.
#ಜೀರ್ಣಕ್ರಿಯೆಗೆ ಸಹಕಾರಿ:ಮೆಂತೆ ಸೇವನೆ ಮಾಡಿದರೆ ಕರುಳಿನ ಕ್ರಿಯೆ ಸುಧಾರಣೆ ಆಗುವುದು ಮತ್ತು ಇದು ಜೀರ್ಣಕ್ರಿಯೆ ಮತ್ತು ಎದೆ ಉರಿ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರವಾಗಿದೆ. ಜೀರ್ಣಕ್ರಿಯೆ ಸಮಸ್ಯೆಗೆ ಮೆಂತೆ ಕಾಳಿನ ಪೇಸ್ಟ್ ಗೆ ತುರಿದ ಶುಂಠಿ ಹಾಕಿಕೊಳ್ಳಿ ಮತ್ತು ಊಟಕ್ಕೆ ಮೊದಲು ಇದರ ಒಂದು ಚಮಚ ಸೇವಿಸಿ.
#ಹೃದಯದ ಆರೋಗ್ಯ ಕಾಪಾಡುವುದು:ಮೆಂತೆನೀರನ್ನು ಕುಡಿಯುವ ಜತೆಗೆ ನೀವು ಅದನ್ನು ಬಾಯಿಗೆ ಹಾಕಿಕೊಂಡು ಜಗಿದು ತಿನ್ನಬೇಕು. ಇದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಕಾಯಿಲೆಗಳು ದೂರವಿರುವಂತೆ ಮಾಡುವುದು.
#ಬಾಣಂತಿಯ ಎದೆಹಾಲಿನ ಪ್ರಮಾಣ ಹೆಚ್ಚಿಸುತ್ತದೆ:ಪ್ರತಿಯೊಂದು ಮನೆಯಲ್ಲೂ ಬಾಣಂತಿಯರಿಗೆ ಹೆಚ್ಚಿನ ಮೆಂತೆ ಕಾಳಿನಿಂದ ಮಾಡಿರುವ ಆಹಾರವನ್ನು ಕೊಡುತ್ತಾರೆ ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ diesogen ಉಷಾ ಯಥೇಚ್ಛವಾಗಿದೆ ಇದು ಎದೆಹಾಲಿನ ಮಟ್ಟವನ್ನು ಹೆಚ್ಚಿಸಲು ನೆರವು ನೀಡುತ್ತದೆ.ಇನ್ನು ಹಲವರಿಗೆ ಮೆಂತ್ಯೆ ಸೇವಿಸುವುದು ಇಷ್ಟ ಆಗೋದಿಲ್ಲ ಅಂಥವರು ಈ ಕೆಳಕಂಡ ರೀತಿಯಲ್ಲಿ ಸೇವನೆ ಮಾಡಬಹುದು ಹಲವು ಗಂಡಸರು ಹೆಚ್ಚು ತೂಕವನ್ನು ಹೊಂದಿರುತ್ತಾರೆ ಈ ವಿಧಾನದಿಂದ ಟೀ ಮಾಡಿಕೊಂಡು ಕುಡಿದರೆ ತೂಕ ಇಳಿಯುತ್ತದೆ, ರಕ್ತದೊತ್ತಡ ಕಡಿಮೆಯಾಗುತ್ತದೆ ರಕ್ತದಲ್ಲಿರುವ ಕೆಟ್ಟ ವಸ್ತುಗಳು ದೂರಾಗುತ್ತವೆ ಹಾಗೂ ಹಲವಾರು ಪ್ರಯೋಜನಗಳು ಸಹ ನಿಮಗೆ ದೊರಕುತ್ತವೆ.
#ಮುಂಜಾನೆ ಮೆಂತ್ಯೆ ನೀರು ಕುಡಿಯಿರಿ:ದೇಹದ ತೂಕ, ಕೊಬ್ಬು ಕಡಿಮೆ ಮಾಡಲು ಮೆಂತ್ಯೆ ನೀರನ್ನು ಕುಡಿಯಬಹುದು. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ.. ಮೆಂತ್ಯೆಯನ್ನು ಮುನ್ನಾ ದಿನ ರಾತ್ರಿಯೇ ನೀರಿಗೆ ಹಾಕಿ ನೆನೆಸಿಡಿ. ಬಳಿಕ, ಮುಂಜಾನೆ ಮೆಂತ್ಯೆಯನ್ನು ನೀರಿನಲ್ಲಿ ಕುದಿಸಿ, ಆರಿಸಿ ಆ ನೀರು ಕುಡಿಯಬಹುದು. ಇದರಿಂದ ದೇಹದ ಟಾಕ್ಸಿಕ್ ಅಂಶಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಮಲಬದ್ಧತೆಯೂ ಉತ್ತಮವಾಗುತ್ತದೆ.