ತೂಕ ಇಳಿಸಿಕೊಳ್ಳಲು ನಿತ್ಯ ಈ ಸಿಂಪಲ್ ಟಿಪ್ಸ್!

ತೂಕವನ್ನು ಕಳೆದುಕೊಳ್ಳಲು ಬೆಳಿಗ್ಗೆ ನಿಮ್ಮ ಜೀವನಶೈಲಿಯಲ್ಲಿ ನೀವು ಯಾವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿದು ಅನುಸರಿಸಿ, ಸುಲಭವಾಗಿ ತೂಕ ಇಳಿಸಿಕೊಳ್ಳಬಹುದುಹೆಚ್ಚಾಗಿ ನೀರು ಕುಡಿಯಿರಿ. ನೀರು ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ, ಆದರೆ ಇದು ನಿಮ್ಮ ಹಸಿವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ನಿಮಗೆ ಬೆಳಿಗ್ಗೆ ವ್ಯಾಯಾಮ ಮಾಡಲು ಮನಸ್ಸಿಲ್ಲದಿದ್ದರೆ, ಹೊರಗೆ ಸ್ವಲ್ಪ ಹೊತ್ತು ನಡೆಯಿರಿ. ವಾಕಿಂಗ್ ಮಾಡುತ್ತಾ ನಂತರ ಜಾಗಿಂಗ್ ಮಾಡಲು ಶುರು ಮಾಡಿ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಅತ್ಯುತ್ತಮ ವ್ಯಾಯಾಮ.

ಸರಿಯಾದ ಸಮಯಕ್ಕೆ ಊಟ ಮಾಡದಿದ್ರೆ ಹೊಟ್ಟೆ ಉರಿಯುತ್ತದೆ. ತೂಕ ಇಳಿಸಲು ಅತಿಯಾಗಿ ತಿನ್ನುವ ಅಭ್ಯಾಸ ಬಿಡಿ. ಕೆಲವರಿಗೆ ಅದು ಅಸಾಧ್ಯವಾಗಿದೆ. ಆಹಾರದ ವಿಚಾರದಲ್ಲಿ ಸ್ವಲ್ಪ ಕಂಟ್ರೋಲ್ ಮಾಡಿದ್ರೆ ತೂಕ ಬೇಗ ಇಳಿಯುತ್ತೆ.

ಸೋಮಾರಿಯಾದಾಗ ಯಾವುದೇ ಕೆಲಸದತ್ತ ಗಮನಹರಿಸಲು ಸಾಧ್ಯವಿಲ್ಲ. ಸಣ್ಣ ವಿಷಯಗಳು ಕಿರಿಕಿರಿಯನ್ನು ಉಂಟುಮಾಡಬಹುದು. ಮನಸ್ಸು, ದೇಹ ಮತ್ತು ಆತ್ಮವನ್ನು ಉತ್ತೇಜಿಸಲು ಧ್ಯಾನ ಅತ್ಯಗತ್ಯ.

ಬೆಳಗ್ಗೆ , ಮಧ್ಯಾಹ್ನ ಮತ್ತು ರಾತ್ರಿ ಊಟದ ನಡುವೆ ದೀರ್ಘ ಅಂತರವಾಗುತ್ತದೆ. ಹೀಗಾಗಿ ಚಯಾಪಚಯ ಕ್ರಿಯೆ ಉತ್ತಮವಾಗಿರಲು ಆಹಾರ ಸೇವನೆಯನ್ನು ಬಿಡಬೇಡಿ. ಊಟವನ್ನು ಬಿಡುವುದರಿಂದ ಸುಮಾರು 500 ಕ್ಯಾಲೋರಿಗಳನ್ನು ಹೆಚ್ಚು ಪಡೆಯುತ್ತೀರಿ.

ಇನ್ನು ರಾತ್ರಿ ಊಟ ಆದಷ್ಟು ಕಡಿಮೆಯಿರಲಿ. ರಾತ್ರಿ 7 ರಿಂದ 9 ಗಂಟೆಯೊಳಗೆ ಊಟವನ್ನು ಮುಗಿಸಿಬಿಡಿ. 10 ಗಂಟೆಯ ನಂತರ ಊಟ ಸಲ್ಲದು. ಅಲ್ಲದೆ ಆದಷ್ಟು ಮೊಸರು ಅಥವಾ ಹೆಚ್ಚು ಖಾರ, ಮಸಾಲೆಯುಕ್ತ ಪದಾರ್ಥಗಳನ್ನು ಸೇವನೆ ಮಾಡಬೇಡಿ. ಇದರಿಂದ ದೇಹದಲ್ಲಿ ಚಯಾಪಚಯ ಸರಿಯಾಗಿದ್ದು, ಕೊಬ್ಬು ಶೇಖರಣೆಯಾಗುವುದು ತಪ್ಪುತ್ತದೆ.

ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡಿ:ಆರೋಗ್ಯಕರ ಜೀವನಕ್ಕಾಗಿ ನಿದ್ದೆ ಬಹಳ ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ನಿತ್ಯ 8 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಎಲ್ಲರಿಗೂ ತಿಳಿದಿದೆ. ಅಂತೆಯೇ, ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡುವುದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹ ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ನಿತ್ಯ ನಿಮ್ಮ ವಯಸ್ಸಿಗೆ ಅನುಗುಣವಾಗಿ ಸಾಕಷ್ಟು ನಿದ್ದೆ ಮಾಡುವುದರಿಂದ ತೂಕ ಕಡಿಮೆ ಮಾಡಬಹುದು. ಮಾತ್ರವಲ್ಲ, ಇದರಿಂದ ಮಾನಸಿಕವಾಗಿಯೂ ನೀವು ಶಾಂತಿಯನ್ನು ಪಡೆಯಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group