ಹತ್ತಿಯಲ್ಲಿ ಕೀಟಗಳು ಹಾಗೂ ಅವುಗಳ ನಿರ್ವಹಣೆ ಹೇಗೆ!

• ಹತ್ತಿಯಲ್ಲಿ ರಸ ಹೀರುವ ಕೀಟಗಳು ಮತ್ತು ಅವುಗಳ ಹಾನಿಯ ಲಕ್ಷಣಗಳು –

1. ಥಿಪ್ಸ್ (Thrips) : ಸಸಿಗಳ ಎಲೆಗಳು ಸುಕ್ಕುಗಟ್ಟಿ ವಿಕಾರವಾಗುವುದಲ್ಲದೆ ಹೊಳೆಯುವ ಬಿಳಿ ತೇಪೆಗಳನ್ನು( white patch) ಹೊಂದಿರುತ್ತವೆ. ಬಲಿತ ಬೆಳೆ ದೂರದಿಂದ ತುಕ್ಕು ಹಿಡಿದಿರುವಂತೆ ಕಾಣುತ್ತದೆ.

2. ಜಾಸಿಡ್(Jassids) : ಹಾನಿಗೀಡಾದ ಎಲೆಗಳು ಕೆಳಗೇ ಮುಖಮಾಡಿ ಸುರುಳಿಯಾಗಿ ಅವು ಸಾಯುವ ಮುನ್ನ ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿ ಉದುರಿ ಹೋಗುತ್ತವೆ. ಸಸ್ಯಗಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ.

3. ವೈಟ್ ಫ್ಲೈ (ಬಿಳಿನೊಣ) (White fly) : ಎಲೆಗಳು ಮೇಲೇ ಮುಖಮಾಡಿ ಸುರುಳಿಯಾಗಿ ಎಲೆಗಳು ಚೈತನ್ಯಗುಂದುತ್ತವೆ, ಜೇನಿನಂತಹ ಸಿಹಿ ದ್ರವದ ಸ್ರಾವದಿಂದಾಗಿ ಹತ್ತಿಯು ಕಪ್ಪು ಬಣ್ಣಕ್ಕೆ ತಿರುಗಿ ಅಂಟಂಟಾಗುತ್ತದೆ. ಇವು ಎಲೆ ಸುರುಳಿ ವೈರಸ್ ರೋಗವನ್ನೂ ಕೂಡ ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

4. ಆಫಿಡ್ (ಸಸ್ಯಹೇನು) (Aphid) : ಎಲೆಗಳು ಒಡೆದು ಕೆಳ ಮುಖಮಾಡಿ ಸುರುಳಿಯಾಗುತ್ತವೆ, ಕಾಯಿಗಳ ಮೇಲೆ ಜೇನಿನಂತಹ ಸಿಹಿ ದ್ರವ ಸಂಗ್ರಹಣೆಯಾಗುವ ಕಾರಣದಿಂದ ಹತ್ತಿ ಅಂಟಂಟಾಗುತ್ತದೆ.

5. ರೆಡ್ ಕಾಟನ್ ಬಗ್ (ಕೆಂಪು ಹತ್ತಿ ತಿಗಣೆ (Red cotton bug) : ಎಳೆಯು, ಕಾಯಿಗಳ ಮೇಲೆ ತಿನ್ನುವುದರಿಂದ ಗಾಢವಾದ ಕಂದು ಚುಕ್ಕೆಗಳುಂಟಾಗುತ್ತವೆ. ಕಾಯಿಗಳು ಕೊಳೆಯುವುದಲ್ಲದೆ ದಾರವನ್ನು ಜಿನ್ನಿಂಗ್ (Ginning) ಮಾಡಿದ ನಂತರ ಕೆಂಪು ಕಲೆಗಳು ಕಂಡುಬರುತ್ತವೆ.

6. ಡಸ್ಕಿ ಕಾಟನ್ ಬಗ್ ( ಹೊಟ್ಟಿನ ಹತ್ತಿ ತಿಗಣೆ ) (Dusky cotton bug) : ಈ ಕೀಟವು ಎಳೆಯು, ಕಾಯಿಗಳಿಂದ ರಸ ಹೀರುತ್ತವೆ.7. ರೆಡ್ ಸೈಡರ್ ಮೈಟ್ (Red spider mite) : ಸಣ್ಣದಾಗಿರುವ ಮೈಟ್ ಎಲೆಗಳಿಂದ ರಸವನ್ನು ಹೀರುತ್ತವೆ. ಎಲೆಗಳು ಕೆಂಪು – ಕಂದು ಮತ್ತು ಕಂಚಿನ ಬಣ್ಣಕ್ಕೆ ತಿರುಗುತ್ತವೆ. ರಸ ಹೀರುವ ಕೀಟಗಳಿಂದ ಉಂಟಾದ ಹಾನಿಯಿಂದ ಎಳೆಗಳು, ಹೂವಿನ ಮೊಗ್ಗುಗಳು ಮತ್ತು ಕಾಯಿಗಳು ಉದುರಿ ಹೋಗಲು ಕಾರಣವಾಗುತ್ತದೆ.

• ಹತ್ತಿಯಲ್ಲಿ ರಸ ಹೀರುವ ಕೀಟಗಳನ್ನು ತಡೆಗಟ್ಟುವ ಕ್ರಮಗಳು –

1. ಶಿಫಾರಸು ಪ್ರಮಾಣದ ನೈಟ್ರೋಜನ್ ( Urea ) ರಸಗೊಬ್ಬರಗಳನ್ನು ಬಳಸಬೇಕು.

2. ಹೊಲದ ಸುತ್ತಮುತ್ತಲೂ ತಡೆ ಬೆಳೆಗಳಾದ (Border crops) ಜೋಳ (Sorghum) ಅಥವಾ ಮೆಕ್ಕೆಜೋಳಗಳನ್ನು(Maize) ಬೆಳೆಯಿರಿ ಮತ್ತು ಸಿಕ್ಕಿಬಿದ್ದ ಕೀಟಗಳನ್ನು ನಾಶಪಡಿಸಬೇಕು. ಹತ್ತಿ ಬಿತ್ತನೆಗೆ 15 ದಿನಗಳಿಗಿಂತ ಮೊದಲು ತಡೆ ಬೆಳೆಗಳನ್ನು ಬಿತ್ತನೆ ಮಾಡಬೇಕು.

3. ಹೊಲ, ಬದುಗಳು, ನೀರಾವರಿ ಕಾಲುವೆಗಳು ಮತ್ತು ಹೊಂಡಗಳ ಸುತ್ತಮುತ್ತ ಕಸವನ್ನು ಮುಕ್ತವಾಗಿರಿಸಿರಿ.

4. ಪರಾವಲಂಬಿ ಮೈಟ್ಸ್, ಲೇಡಿಬರ್ಡ್ ಜೀರುಂಡೆ, ಸಿರ್ಫಿಡ್ಸ್ ಮತ್ತು ಲೇಸ್ಟಿಂಗ್ ಗಳಂತಹ ನೈಸರ್ಗಿಕ ಶತೃಗಳನ್ನು (Natural enemies) ಪ್ರೋತ್ಸಾಹಿಸಿ.

• ಪ್ರತಿ ಎಕರೆಗೆ 8 ರಿಂದ 10 ಯಲ್ಲೋ ಸ್ಟಿಕ್ಕಿ ಟ್ರ್ಯಾಪ್ (Yellow sticky trap) ಗಳನ್ನು ಇರಿಸಿ.

• ಪ್ರತಿ ಎಕರೆಗೆ 8 ರಿಂದ 10 ಬ್ಯೂ ಸ್ಟಿಕಿಟ್ರ್ಯಾಪ್ (Blue sticky trap) ಗಳನ್ನು ಇರಿಸಿ 20 ದಿನಗಳ ಮಧ್ಯಂತರದಲ್ಲಿ ಗ್ರೀನ್ ಲೇನ್ವೆಂಟ್ ಮತ್ತು ಲೇಡಿಬರ್ಡ್ ಜೀರುಂಡಗಳನ್ನು ಬಿಡುಗಡೆ ಮಾಡಬೇಕು. ಬಿಡುಗಡೆ ಮಾಡುವ ಮೊದಲು ಮತ್ತು ನಂತರದ ಸಮಯದಲ್ಲಿ ಯಾವುದೇ ರಾಸಾಯನಿಕಗಳು ಅಥವಾ ಬೇವಿನ ಎಣ್ಣೆ (Neem oil) ಗಳನ್ನು ಸಿಂಪರಣೆ ಮಾಡಬಾರದು.

• ಎಕರೆಗೆ ಅಝಡಿರಕ್ಟಿನ್ 0.03 % EC1 ಲೀಟರ್ ಅನ್ನು 200 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು . ಅಥವಾ ಎಕರೆಗೆ ವರ್ಟಿಸಿಲಿಯಂ ಲೆಕ್ಯಾನಿ 0.03 % EC 1 ಲೀಟರ್ ಅನ್ನು 200 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

• ಈ ಕೆಳಗಿನ ಯಾವುದಾದರೂ ಒಂದು ರಾಸಾಯನಿಕಗಳನ್ನು ಪ್ರತಿ ಎಕರೆಗೆ 200 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಯಾಂಟ್ರನಿಲಿಪ್ರೋಲ್ 10.26 % OD – 360 ಮಿಲೀ ಅಥವಾ ಅಫಿಡಾಪೈರೋಪೆನ್ 50 ಗ್ರಾಂ. ಲೀ DC – 320 ಮಿಲೀ ಅಥವಾ ಫೋನಿಕಾಮಿಡ್ 50 % WG – 60 ಗ್ರಾಂ ಅಥವಾ ಡಯಾಫೆನಿಯುರಾನ್ 47 % + ಬೈಫೆಂತ್ರಿನ್ 9.4 % SC -250 ಮಿಲೀ ಅಥವಾ ಫಿಪ್ರೋನೀಲ್ 04 % + ಅಸಿಟಮೀಪ್ರಿಡ್ 04 % SC -400 ಮಿಲೀ ಅಥವಾ ಸೈರೊಮೆಸಿಫೆನ್ 22.9 % SC -240 ಮಿಲೀ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group