ಸೊಂಟದ ಕೊಬ್ಬು ಕರಗಿಸಲು ಸಹಾಯ ಮಾಡುವ ಆಸನಗಳು;

ಭುಜಂಗಾಸನ (ಹಾವಿನ ಭಂಗಿ)ಈ ಆಸನದಲ್ಲಿ ಹೊಟ್ಟೆಯ ಸ್ನಾಯುಗಳಿಗೆ ಹೆಚ್ಚು ಸೆಳೆತ ಬೀಳುವ ಮೂಲಕ ಇಲ್ಲಿ ಸಂಗ್ರಹವಾಗಿರುವ ಕೊಬ್ಬು ಅನಿವಾರ್ಯವಾಗಿ ಕರಗಲೇಬೇಕಾಗುತ್ತದೆ. ಅಲ್ಲದೇ ಈ ಆಸನದಿಂದ ದೇಹದ ಮೇಲ್ಭಾಗ ಹೆಚ್ಚು ಬಾಗುವಂತಹ ಶಕ್ತಿ ಪಡೆಯುತ್ತದೆ. ಥಟ್ ಅಂತ ಶಕ್ತಿ ಬರಬೇಕೇ? ಒಮ್ಮೆ ಭುಜಂಗಾಸನ ಪ್ರಯತ್ನಿಸಿ.

ವಿಧಾನ*ಮೊದಲು ಹೊಟ್ಟೆಯ ಮೇಲೆ ಮಲಗಿ ಕಾಲುಗಳನ್ನು ನೇರವಾಗಿಸಿ. ದೇಹದ ಭಾರ ಪಾದಗಳನ್ನು ನೇರವಾಗಿಸಿ ಕಾಲುಬೆರಳುಗಳ ಮೇಲೆ ಬರುವಂತಿರಲಿ.

*ನಿಮ್ಮ ಹಸ್ತಗಳು ಭುಜಗಳ ಕೆಳಗೆ ಇರಲಿ

ವಿಧಾನ:

*ಪ್ರಾರಂಭದಲ್ಲಿ ಗದ್ದವನ್ನು ನೆಲಕ್ಕೆ ತಾಗಿಸಿ. ಈಗ ಉಸಿರನ್ನು ಎಳೆದುಕೊಳ್ಳುತ್ತಾ ಎದೆಯನ್ನು ಮೇಲಕ್ಕೆತ್ತಿ ಎಷ್ಟು ಮೇಲಕ್ಕೆ ಸಾಧ್ಯವೋ ಅಷ್ಟು ಮೇಲೆ ನೋಡಿ*ಕೈಗಳನ್ನು ನೇರವಾಗಿಸಿ. ಈ ಹಂತದಲ್ಲಿ ಕೆಲವು ಸೆಕೆಂಡುಗಳಷ್ಟು ಕಾಲ ಉಸಿರು ಬಿಗಿಹಿಡಿದು ಬಳಿಕ ನಿಧಾನವಾಗಿ ಉಸಿರುಬಿಡುತ್ತಾ ಮೊದಲ ಹಂತಕ್ಕೆ ಬನ್ನಿ. ಈ ಕ್ರಮವನ್ನು ಕನಿಷ್ಠ ಐದು ಬಾರಿ ಅನುಸರಿಸಿ.

#ತಾಡಾಸನ (ಪರ್ವತ ಭಂಗಿ)

ಈ ಆಸನದಿಂದಲೂ ಹೊಟ್ಟೆಯ ಕೊಬ್ಬು ಸುಲಭವಾಗಿ ಕರಗುತ್ತದೆ. ಮಂಡಿ-ಪಾದಗಳನ್ನು ಸದೃಢಗೊಳಿಸಲು ತಾಡಾಸನ ಅನುಸರಿಸಿ.

#ವಿಧಾನ

*ಮೊದಲು ಎರಡೂ ಪಾದಗಳ ಹೆಬ್ಬೆರಳುಗಳು ತಾಕುವಂತೆ ನೆಟ್ಟಗೆ ನಿಂತುಕೊಳ್ಳಿ. ಹಿಮ್ಮಡಿಗಳು ಕೊಂಚ ದೂರವಾಗಿರಲಿ. ಬೆನ್ನು ನೆಟ್ಟಗಿರಲಿ, ಕೈಗಳು ತೊಡೆಗಳಿಗೆ ತಾಕಿರಲಿ.

*ಈ ಭಂಗಿಯಲ್ಲಿ ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ ಎರಡೂ ಕೈಬೆರಳುಗಳನ್ನು ಜೋಡಿಸಿ ಹಸ್ತ ನಿಮ್ಮ ಕಡೆಗಿರುವಂತೆ ಅಥವಾ ಇರದಂತೆ, ನಿಮಗೆ ಸೂಕ್ತವೆನಿಸಿದ ಆಯ್ಕೆಯಲ್ಲಿ ಹಸ್ತಗಳನ್ನು ತಲೆಯ ಮೇಲೆ ಕೊಂಡೊಯ್ಯಿರಿ.

#ವಿಧಾನ

*ಹಾಗೇ ನಿಧಾನವಾಗಿ ಕಾಲು ಬೆರಳುಗಳ ಮೇಲೆ ನಿಲ್ಲಿ. ಉಸಿರು ಪೂರ್ಣವಾದ ಬಳಿಕ ಈ ಭಂಗಿಯಲ್ಲಿ ಕೆಲವು ಸೆಕೆಂಡು ಹಾಗೇ ಇರಿ. ಬಳಿಕ ನಿಧಾನವಾಗಿ ಉಸಿರು ಕಟ್ಟುತ್ತಾ ಹಿಮ್ಮಡಿ ನೆಲದ ಮೇಲಿರಿಸಿ ನಿಧಾನವಾಗಿ ಮೊದಲ ಹಂತಕ್ಕೆ ಬನ್ನಿ. ಸುಮಾರು ಹತ್ತು ಬಾರಿ ಈ ಆಸನವನ್ನು ಅನುಸರಿಸಿ.

#ಉತ್ತನಾಸನ (ನಿಂತಲ್ಲೇ ಮುಂದೆ ಬಗ್ಗುವ ಭಂಗಿ)

ಈ ಭಂಗಿಯಲ್ಲಿ ಹೊಟ್ಟೆಯ ಸ್ನಾಯುಗಳು ಒಳಮುಖವಾಗಿ ಸೆಳೆಯಲ್ಪಡುವ ಕಾರಣ ಕೊಬ್ಬು ಶೀಘ್ರವಾಗಿ ಕರಗಲು ಸಾಧ್ಯವಾಗುತ್ತದೆ.

#ವಿಧಾನ

*ಮೊದಲು ಕಾಲುಗಳನ್ನು ಕೊಂಚವೇ ಅಗಲಿಸಿ ನಿಂತುಕೊಳ್ಳಿ. ಪೂರ್ಣ ಉಸಿರು ಎಳೆದುಕೊಂಡು ಕೈಗಳನ್ನು ಕೆಳಗಿರಿಸಿ ಮುಂದಕ್ಕೆ ಬಾಗಿ ಕೈಗಳಿಂದ ನೆಲವನ್ನು ಮುಟ್ಟಲು ಯತ್ನಿಸಿ. ಈ ಹಂತದಲ್ಲಿ ನಿಧಾನವಾಗಿ ಉಸಿರು ಒಳಗೆ ಎಳೆದುಕೊಳ್ಳಿ.

*ಈ ಹಂತದಲ್ಲಿ ನಿಮಗೆ ಸಾಧ್ಯವಾದಷ್ಟು ಹೊತ್ತು ಹಾಗೇ ಇದ್ದು ಕೈಬೆರಳುಗಳಿಂದ ಕಾಲುಬೆರಳು ಮತ್ತು ಹಿಮ್ಮಡಿಯ ಗಂಟನ್ನು ಹಿಡಿಯಲು ಯತ್ನಿಸಿ. ಬಳಿಕ ನಿಧಾನವಾಗಿ ಉಸಿರುಬಿಡುತ್ತಾ ಮೊದಲ ಹಂತಕ್ಕೆ ಬನ್ನಿ. ಸುಮಾರು ಹತ್ತು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group