ದಿನ ನಿತ್ಯ ಯೋಗ ಅಭ್ಯಾಸದಿಂದ ಆಗುವ ಉಪಯೋಗ!

01. ನೋವುಗಳನ್ನು ತಡೆಯುತ್ತದೆ : ಯೋಗ ಮಾಡುವುದರಿಂದ ಬಲಯುತವಾಗುವುದರ ಜೊತೆಗೆ ಇದು ಬೆನ್ನು ನೋವು ಮತ್ತು ಕೀಳು ನೋವುಗಳನ್ನು ತಡೆಯುತ್ತದೆ. ಕುಳಿತು ಕೆಲಸಮಾಡುವವರು ಮತ್ತು ಲಾಂಗ್ ಡ್ರೈವ್ ಮಾಡುವವರು ಪ್ರತಿದಿನ ಯೋಗ ಮಾಡಬೇಕು. ಇದರಿಂದ ಬೆನ್ನು ಮೂಳೆಯ ಸಂಕೋಚನ ಮತ್ತು ಬೆನ್ನು ಬಿಗಿತವನ್ನು ಹೋಗಲಾಡಿಸಬಹುದು. ಇದು ತಪ್ಪು ಭಂಗಿಯಿಂದಾಗಿ ನಂತರದ ದಿನಗಳಲ್ಲಿ ಕಾಡುವ ಎಲ್ಲಾ ನೋವುಗಳನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

02. ಒತ್ತಡ ಕಡಿಮೆ ಮಾಡುತ್ತದೆ : ಯೋಗ ಒತ್ತಡವನ್ನು ಕಡಿಮೆ ಮಾಡುತ್ತದೆ. ವಿರಾಮವಿಲ್ಲದ ಕೆಲಸದ ನಂತರ ನೀವು ಯೋಗ ಮಾಡಿದರೆ ಒತ್ತಡ ಕಡಿಮೆಯಾಗುವುದನ್ನು ಕಾಣಬಹುದು. ಅಂದಮಾತ್ರಕ್ಕೆ ಯೋಗ ಒಂದೇ ಒತ್ತಡವನ್ನು ನಿವಾರಿಸಲು ಇರುವ ಮಾರ್ಗ ಎಂದಲ್ಲ. ಯಾವುದೇ ರೀತಿಯ ವ್ಯಾಯಾಮವನ್ನು ಮನಸ್ಸಿಟ್ಟು ಶೃದ್ಧೆಯಿಂದ ಸರಿಯಾಗಿ ಮಾಡಿದರೆ ಅದರಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು

03. ಗರ್ಭಾವಸ್ಥೆಯಲ್ಲಿ ಯೋಗ : ನೀವು ಗರ್ಭಿಣಿಯಾಗಿದ್ದು ದೇಹರಚನೆ ಫಿಟ್ ಆಗಿರ ಬಯಸಿದರೆ ಯೋಗ ನಿಮಗೆ ಸಹಾಯ ಮಾಡಬಲ್ಲದು. ಗರ್ಭಾವಸ್ಥೆಯಲ್ಲಿ ಯೋಗ ಮಾಡುವುದರಿಂದ ದೇಹ ಹೆಚ್ಚು ಬಲಯುತವಾಗುವುದು. ಪ್ರತೀದಿನ ಯೋಗ ಮಾಡುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು, ಜೊತೆಗೆ ಆಂತರಿಕವಾಗಿ ಒಳ್ಳೆಯ ರಕ್ತ ಸಂಚಲನವಾಗುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ, ಉಸಿರಾಟ ಮತ್ತು ನರಗಳ ನಿಯಂತ್ರಣವನ್ನು ಹತೋಟಿಯಲ್ಲಿಡುತ್ತದೆ. ಅಷ್ಟೇ ಅಲ್ಲದೆ ಗರ್ಭಾವಸ್ಥೆಯಲ್ಲಿ ಕಂಡುಬರುವ ನಿದ್ರಾಹೀನತೆ, ಬೆನ್ನು ನೋವು, ಅಜೀರ್ಣ ಕ್ರಿಯೆ, ಕಾಲು ಊದಿಕೊಳ್ಳುವುದನ್ನು ತಡೆಯುತ್ತದೆ. ಆದರೂ ತೊಡಕುಗಳನ್ನು ತಡೆಯಲು ಯೋಗ ಮಾಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಕೇಳಿ ಸಲಹೆ ಪಡೆಯುವುದು ಒಳಿತು.

04. ಆರೋಗ್ಯಯುತವಾದ ಹೃದಯ : ಸ್ವಲ್ಪ ಕಾಲ ಉಸಿರನ್ನು ಬಿಗಿ ಹಿಡಿದು ಮಾಡುವ ಮತ್ತು ಇನ್ನಿತರ ಆಸನಗಳು ಹೃದಯ ಮತ್ತು ಅಪದಮನಿಯ ಆರೋಗ್ಯವನ್ನು ಕಾಪಾಡುತ್ತವೆ. ಯೋಗ ರಕ್ತಸಂಚಲನ ವನ್ನು ಸರಾಗವಾಗಿಸುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯಂತಹ ಕ್ರಿಯೆಯಿಂದ ರಕ್ಷಿಸಿ ಹೃದಯವನ್ನು ಆರೋಗ್ಯಯುತವಾಗಿರಿಸಿತ್ತದೆ.

05. ಉತ್ತಮ ಉಸಿರಾಟ : ಯೋಗದಲ್ಲಿ ಬರುವ ಧೀರ್ಘ ಉಸಿರಾಟ ಮತ್ತು ನಿಧಾನ ಉಸಿರಾಟದ ಆಸನಗಳಿಂದ ಶ್ವಾಸಕೋಶ ಮತ್ತು ಹೊಟ್ಟೆಯ ಸಾಮಥ್ರ್ಯವನ್ನು ಹೆಚ್ಚಿಸಬಹುದು . ಇದು ದೈನಂದಿನ ಕಾರ್ಯನಿರ್ವಹಣೆ ಸಾಮಥ್ರ್ಯ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಧೀರ್ಘ ಉಸಿರಾಟದ ಯೋಗವು ವಿಶ್ರಾಂತಿಯನ್ನು ನೀಡಿ ಮನಸ್ಸಿನ ಮತ್ತು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.

06. ಸಮತೋಲನವನ್ನು ಹೆಚ್ಚಿಸುತ್ತದೆ : ದಿನನಿತ್ಯದ ಜಂಜಾಟದಲ್ಲಿ ಕುಳಿತುಕೊಳ್ಳುವ ಬೇರೆಬೇರೆ ಭಂಗಿಯಿಂದಾಗಿ ವಯಸ್ಸಾಗುತ್ತಿದ್ದಂತೆ ನಾವು ನಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತೇವೆ.ಈ ಕಾರಣದಿಂದಾಗಿ ಬೆನ್ನು ನೋವು, ಮೂಳೆಯ ಒಡೆತ, ಸೆಳೆತ ಇವುಗಳೆಲ್ಲ ಕಾಣಿಸಿಕೊಳ್ಳುತ್ತವೆ. ಯೋಗ ಮಾಡುವುದರಿಂದ ಈ ನೋವನ್ನು ನಿವಾರಿಸಿ ಸಮತೋಲನವನ್ನು ಕಾಪಾಡಿಕೊಂಡು ಹಿಡಿತದಲ್ಲಿರಬಹುದು. ಯೋಗದ ಮೂಲಕ ಬಲವನ್ನು ಮತ್ತೆ ಪಡೆದುಕೊಳ್ಳಬಹುದು. ಇದು ನಿಮ್ಮ ಮೆದುಳನ್ನು ಚುರುಕಾಗಿಸುವುದಲ್ಲೂ ಕೂಡ ಸಹಕರಿಸುತ್ತದೆ.

07. ಆರೋಗ್ಯಕ್ಕೆ ಬಲ : ಒಳ್ಳೆಯ ಆರೋಗ್ಯ ಎಂದರೆ ಕೇವಲ ರೋಗದಿಂದ ದೂರವಿರುವುದು ಮಾತ್ರವಲ್ಲ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಯೋಗ ಮಾಡುವುದರಿಂದ ಹಲವಾರು ರೋಗಗಳಿಂದ ದೂರವಾಗಿ ಸಂತೋಷ ಉಲ್ಲಾಸದಿಂದ ಇರಲು ಸಹಾಯವಾಗುತ್ತದೆ.

08. ಸಮತಟ್ಟಾದ ಹೊಟ್ಟೆಗಾಗಿ ಯೋಗ : ಯೋಗ ಹೊಟ್ಟೆಯನ್ನು ಫ್ಲಾಟ್ ಆಗಿಸುವಲ್ಲಿ ಹೇಗೆ ಸಹಕರಿಸುತ್ತದೆ ಎಂಬುದನ್ನು ತಿಳಿಯುವ ಮೊದಲು ಬೇರೆ ಯಾವುದೇ ವ್ಯಾಯಾಮವು ಹೊಟ್ಟೆಯನ್ನು ಫ್ಲಾಟ್ ಅಗಿಸುವಲ್ಲಿ ಯಶಸ್ವಿಯಾಗಲಾರದೆಂಬುದನ್ನು ತಿಳಿಯಲೇ ಬೇಕು. ನಿಮಗೆ ಯಾರಾದರೂ ಕೆಲಸ, ಲೋ ಟೆಂಪೋ, ಮತ್ತು ವ್ಯಾಯಾಮಗಳಿಂದ ಹೊಟ್ಟೆಯನ್ನು ಫ್ಲಾಟ್ ಮಾಡಬಹುದು ಎಂದಲ್ಲಿ ನೀವು ಬೇರೆ ನುರಿತ ಸಲಹೆಗಾರರನ್ನು ಭೇಟಿ ಮಾಡುವುದು ಒಳಿತು. ಯೋಗಾದ ಆಸನಗಳಾದ ನೌಕಾಸನ, ಉಷ್ಟ್ರಾಸನ, ಮತ್ತು ಕೆಲವೊಂದು ಆಸನಗಳನ್ನು ಪ್ರತಿದಿನ ಮಾಡಿದರೆ ಇದು ಹೊಟ್ಟೆಯನ್ನು ನಿಧಾನವಾಗಿ ಒಳಹೊಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಯೋಗಾಭ್ಯಾಸ ಮತ್ತು ಸರಿಯಾದ ಆಹಾರ ಕ್ರಮದಿಂದ ಹೊಟ್ಟೆಯನ್ನು ಒಳಹಾಕಿ ಫ್ಲಾಟ್ ಆಗಿರುವಂತೆ ನೋಡಿಕೊಳ್ಳಬಹುದು

09. ಒಳ್ಳೆಯ ಪ್ರಸರಣ (ಸಂಚಲನ) : ಉಸಿರಾಟದ ಮತ್ತು ಇತರ ಆಸನಗಳಿಂದ ದೇಹದ ರಕ್ತ ಸಂಚಲನವನ್ನು ಸರಾಗವಾಗಿಸುವಲ್ಲಿ ಯೋಗ ಸಹಕರಿಸುತ್ತದೆ. ಈ ಸರಾಗ ರಕ್ತಸಂಚಲನದಿಂದ ಆಮ್ಲಜನಕ ಮತ್ತು ಜೀವಸತ್ವಗಳು ದೇಹದ ಎಲ್ಲ ಭಾಗಗಳಿಗೂ ಸರಿಯಾಗಿ ಸಂಚಲನವಾಗುವುದರಿಂದ ಆರೋಗ್ಯಯುತ ಅಂಗಗಳು ಮತ್ತು ಕಾಂತಿಯುತವಾದ ಚರ್ಮವನ್ನು ಪಡೆಯಬಹುದು.

10. ಮನಃಶಾಂತಿ : ಯೋಗದಲ್ಲಿ ಬರುವ ಉಸಿರಾಟ ಮತ್ತಿತರ ಸಮತೋಲನ ಆಸನಗಳು ಮೆದುಳಿನ ಎರಡೂ ಕಡೆಗಳಲ್ಲೂ ಸಮತೋಲನವನ್ನು ಕಾಪಾಡುತ್ತದೆ.ಯೋಗಾಭ್ಯಾಸ ಮಾಡುವುದರಿಂದ ನಮ್ಮ ಮೆದುಳಿನ ಯೋಚನಾ ಲಹರಿ ಮತ್ತು ಚಟುವಟಿಕೆ ಎರಡನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group