ಮಳೆಗಾಲದಲ್ಲಿ ಆರೋಗ್ಯ ಚೆನ್ನಾಗಿ ಇರಲು ಅತಿಯಾಗಿ ಸೇವಿಸಬೇಕಾದ ಆಹಾರ..!

ಮಳೆಗಾಲದಲ್ಲಿ ಯಾವ ಆಹಾರ ಸೇವಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹಣ್ಣುಗಳು : ಪೀಚ್, ಪ್ಲಮ್, ಚೆರ್ರಿ, ನೇರಳೆ, ದಾಳಿಂಬೆಯಂತಹ ಮಳೆಗಾಲದಲ್ಲಿ ಸಿಗುವ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಸಿ, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ತುಂಬಿರುತ್ತವೆ. ಆದರೆ ಮಳೆಗಾಲದಲ್ಲಿ ರಸ್ತೆ ಬದಿಯ ಮಾರಾಟಗಾರರು ಮೊದಲೇ ಕತ್ತರಿಸಿ ಇರಿಸಿದ ಹಣ್ಣುಗಳು ಮತ್ತು ತಿನ್ನುವುದನ್ನು ಬಿಡಿ. ಮನೆಯಲ್ಲಿ ಹಣ್ಣುಗಳನ್ನು ತಂದು ತಿನ್ನಿ. ಹಾಗೂ ಜ್ಯೂಸ್ಗಳನ್ನು ಸಹ ಮನೆಯಲ್ಲಿಯೇ ಮಾಡಿ ಸೇವಿಸಿ.

ಮಸಾಲ ಟೀ ಕುಡಿಯಿರಿ:ನಮ್ಮ ದೇಹವು ಮಳೆಗಾಲದಲ್ಲಿ ತೇವಾಂಶದ ಕಾರಣ ನೀರು ಕುಡಿಯಲು ಹೋಗುವುದೇ ಇಲ್ಲ. ಇದರಿಂದ ದೇಹದಲ್ಲಿನ ತೇವಾಂಶ ಕಡಿಮೆಯಾಗುವುದು. ಅದಕ್ಕಾಗಿ ನೀರು ಸಾಕಷ್ಟು ನೀರು ಮತ್ತು ಮಸಾಲೆ ಟೀ ಗಳನ್ನು ಕುಡಿಯಬೇಕು. ತುಳಸಿ, ಶುಂಠಿ, ಏಲಕ್ಕಿ ಮುಂತಾದ ಮಸಾಲೆಗಳೊಂದಿಗೆ ತಯಾರಿಸಿದ ಗಿಡಮೂಲಿಕೆಗಳ ಮಿಶ್ರಣ ಅಥವಾ ಮಸಾಲಾ ಟೀ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಎಲ್ಲಾ ರೀತಿಯ ಸೋಂಕನ್ನು ತಡೆಯುತ್ತದೆ.

ಶುದ್ಧ ನೀರು ಕುಡಿಯಿರಿ:ಕೆಲವು ಮನೆಗಳಲ್ಲಿ, ಜನರು ಟ್ಯಾಪ್ ಮತ್ತು ಬೋರ್‌ವೆಲ್ ಬಂದ ನೀರನ್ನು ನೇರವಾಗಿ ಕುಡಿಯುತ್ತಾರೆ. ಇದು ಒಳ್ಳೆಯದಲ್ಲ. ಮಳೆಗಾಲದಲ್ಲಿ ನೀರು ಸೂಕ್ಷ್ಮಜೀವಿಗಳಿಂದ ಸುಲಭವಾಗಿ ಕಲುಷಿತಗೊಳ್ಳಬಹುದು. ಈ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಸೋಂಕು, ಅತಿಸಾರ ಅಥವಾ ಟೈಫಾಯಿಡ್ ಉಂಟಾಗುತ್ತದೆ. ಆದ್ದರಿಂದ ಅಂತಹ ನೀರನ್ನು ಚೆನ್ನಾಗಿ ಕುದಿಸಿ ಕುಡಿಯಿರಿ.

ಬೆಚ್ಚಗಿನ ದ್ರವ ಆಹಾರಗಳು : ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಬೆಚ್ಚಗಿರುವ ಆಹಾರವನ್ನು ಸೇವಿಸುವುದು ಉತ್ತಮ. ಅದರಲ್ಲೂ ದ್ರವ ಆಹಾರಗಳು ಹಗುರವಾಗಿರುವುದರಿಂದ ಆರಾಮದಾಯಕ ಎನಿಸುತ್ತದೆ. ಹಾಗಾಗಿ ಸೂಪ್, ಮಸಾಲಾ ಟೀ, ಗ್ರೀನ್ ಟೀ, ಸಾರು, ದಾಲ್, ಮುಂತಾದ ಸಾಕಷ್ಟು ಬೆಚ್ಚಗಿನ ದ್ರವಗಳನ್ನು ಸೇವಿಸಿ. ಏಕೆಂದರೆ ಅವುಗಳು ಹೈಡ್ರೇಶನ್ ಮತ್ತು ರೋಗನಿರೋಧಕ ವ್ಯವಸ್ಥೆಗೆ ಉತ್ತಮಗೊಳಿಸುತ್ತದೆ.

ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ:ಸಲಾಡ್ ಗಳು ಆರೋಗ್ಯಕರ ಮತ್ತು ಪೌಷ್ಠಿಕಾಂಶವನ್ನು ಹೊಂದಿದ್ದರೂ, ಮಳೆಗಾಲದಲ್ಲಿ ಹಸಿ ತರಕಾರಿಗಳನ್ನು ಸೇವಿಸುವುದು ಆರೋಗ್ಯ ಸಮಸ್ಯೆಗಳಿಗೆ ಆಹ್ವಾನವಾಗಬಹುದು. ಕೆಲವು ತರಕಾರಿಗಳು ಧೂಳಿನಿಂದಾಗಿ ಹೆಚ್ಚಿನ ಪ್ರಮಾಣದ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ, ಇದು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಹಸಿ ಸಲಾಡ್ ಗಳಿಗೆ ಬದಲಾಗಿ, ಬೇಯಿಸಿದ ಆಹಾರ ಅಥವಾ ತರಕಾರಿಗಳನ್ನು ಸೇವಿಸಿ. ಈ ಕಾಲದಲ್ಲಿ ಸಮುದ್ರಾಹಾರವನ್ನು ಸಹ ತಪ್ಪಿಸಬೇಕು.

ಸೋರೆಕಾಯಿ: ಇರುವ ತರಕಾರಿಗಳಲ್ಲೇ ಅತಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ತರಕಾರಿ ಎಂದರೆ ಅದು ಸೋರೆಕಾಯಿ. ಎಲ್ಲಾ ಸಮಯದಲ್ಲೂ ಲಭ್ಯವಿದ್ದರೂ ಮಳೆಗಾಲದಲ್ಲಿ ಮಾರುಕಟ್ಟೆಗಳಲ್ಲಿ ಸಾಕಷ್ಟು ದೊರೆಯುತ್ತದೆ. ವೈದ್ಯರ ಪ್ರಕಾರ ಮಳೆಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಅತ್ಯಂತ ಸೂಕ್ತವಾದ ಮತ್ತು ಅಷ್ಟೇ ಆರೋಗ್ಯಕರವಾದ ತರಕಾರಿ ಇದು ಎಂದು ಹೇಳಬಹುದು.ಸೋರೆಕಾಯಿಯಲ್ಲಿ ಯಥೇಚ್ಛವಾದ ಕರಗುವ ಮತ್ತು ಕರಗದಿರುವ ನಾರಿನ ಅಂಶಗಳು ಲಭ್ಯವಿದ್ದು, ಆರೋಗ್ಯಕರ ಜೀರ್ಣ ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ಅದ್ಭುತ ಗುಣ ಲಕ್ಷಣ ಸೋರೆಕಾಯಿಯಲ್ಲಿದೆ. ಇದರ ಜೊತೆಗೆ ಸೋರೆಕಾಯಿಯಲ್ಲಿರುವ ಕಬ್ಬಿಣದ ಅಂಶ, ವಿಟಮಿನ್ ‘ ಬಿ ‘ ಮತ್ತು ವಿಟಮಿನ್ ‘ ಸಿ ‘ ಅಂಶ ನಮ್ಮ ದೇಹಕ್ಕೆ ಆಂಟಿ – ಆಕ್ಸಿಡೆಂಟ್ ಗಳ ರೀತಿ ಕೆಲಸ ಮಾಡುತ್ತವೆ.ನೋಡಲು ತುಂಬಾ ದಪ್ಪ ಹಾಗೂ ಉದ್ದವಿರುವ ಸೋರೆಕಾಯಿಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇದ್ದು, ಹೊಟ್ಟೆಗೆ ಇದೊಂದು ಲಘು ಆಹಾರ ಎನಿಸುತ್ತದೆ. ಇದರಿಂದ ಮಳೆಗಾಲದಲ್ಲಿ ಬಹಳ ಬೇಗನೆ ನಮಗೆ ಜೀರ್ಣವಾಗಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಶಕ್ತಿ ಮತ್ತು ಸದೃಢತೆಯನ್ನು ಸೋರೆಕಾಯಿ ಕೊಡಬಲ್ಲದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group