ರೋಗಗಳನ್ನು ದೂರವಿಡುವ ಈ ಹಣ್ಣಿನ ಬಗ್ಗೆ ತಿಳಿಯಿರಿ!

90ರ ದಶಕದಲ್ಲಿ ಭಾರತದಲ್ಲಿ ಮೊದಲು ಪರಿಚಯಿಸಲಾದ ಡ್ರ್ಯಾಗನ್ ಹಣ್ಣಿನ ಜನಪ್ರಿಯತೆಯು ಪ್ರತಿ ವರ್ಷವೂ ಹೆಚ್ಚುತ್ತಿದೆ. ಡ್ರ್ಯಾಗನ್ ಹಣ್ಣು ಅಥವಾ ಸ್ಟ್ರಾಬೆರಿ ಪಿಯರ್ ಭಾರತದಲ್ಲಿ ಕಮಲಂ ಎಂದೂ ಕರೆಯಲ್ಪಡುತ್ತದೆ, ಇದು ಕಪ್ಪು ಬೀಜಗಳಿಂದ ಕೂಡಿದ ಬಿಳಿ ಅಥವಾ ಕೆಂಪು ಮಾಂಸವನ್ನು ಹೊಂದಿರುವ ಸಿಹಿ, ರಸಭರಿತವಾದ ಹಣ್ಣಾಗಿದೆ. ಅದ್ಭುತವಾದ ಪೌಷ್ಟಿಕಾಂಶ ಹಾಗೂ ಕಡಿಮೆ ಕ್ಯಾಲೋರಿ ಒಳಗೊಂಡ ಹಣ್ಣಾಗಿದ್ದು, ನಿಮ್ಮ ಬೇಸಿಗೆಯ ಆಹಾರ ಕ್ರಮಕ್ಕೆ ಒಂದು ಪರಿಪೂರ್ಣ ಸೇರ್ಪಡೆಯಾಗಿದೆ. ಇದು ಉಷ್ಣತೆ, ಶಾಖದಿಂದ ನಿಮ್ಮನ್ನು ತಡೆಯುತ್ತದೆ.

ಜೀರ್ಣ ಶಕ್ತಿ ಹೆಚ್ಚಿಸುತ್ತೆ ಈ ಹಣ್ಣಿನಲ್ಲಿ ಆಲಿಗೋಸ್ಯಾಕರೈಡ್ ಅಂಶವಿದೆ ಇದು ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಹೆಚ್ಚಿನ ಫೈಬರ್ ಸುಗಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕರುಳಿನ ಕ್ರಮಬದ್ಧತೆಗೆ ಸಹಕಾರಿಯಾಗುತ್ತದೆ. ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೃದಯಕ್ಕೆ ಒಳ್ಳೆಯದು:ಡ್ರ್ಯಾಗನ್ ಹಣ್ಣು ಜನರಲ್ಲಿ ಜನಪ್ರಿಯವಾಗಲು ಒಂದು ದೊಡ್ಡ ಕಾರಣವೆಂದರೆ ಅದು ಜನರಲ್ಲಿ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರರ್ಥ ಡ್ರ್ಯಾಗನ್ ಹಣ್ಣನ್ನು ತಿನ್ನುವುದರಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯಗಳನ್ನು ಕಡಿಮೆ ಮಾಡಬಹುದು. ಹಣ್ಣಿನ ಬೀಜಗಳು ದೇಹಕ್ಕೆ ಅಗತ್ಯವಾದ ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳನ್ನು ಒದಗಿಸುತ್ತವೆ, ಇದು ಹೃದಯರಕ್ತನಾಳದ ಆರೋಗ್ಯಕ್ಕೆ ಅವಶ್ಯಕವಾಗಿದೆ. ಇದು ಅಪಧಮನಿಗಳನ್ನು ಶುದ್ಧಗೊಳಿಸುತ್ತದೆ .ರಕ್ತವು ಸರಿಯಾಗಿ ಹರಿಯುವಂತೆ ಮಾಡುತ್ತದೆ.

ರೋಗಗಳನ್ನು ದೂರವಿಡುವ ಹಣ್ಣು:ಪ್ರಸ್ತುತ ಯುಗದಲ್ಲಿ ಮಾನವರು ಒಂದಿಲ್ಲಾ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ವಿವಿಧ ಸೋಂಕುಗಳು ಮತ್ತು ರೋಗಗಳಿಂದ ದೂರ ಇರಲು ಈ ಹಣ್ಣು ಸೇವಿಸಿ. ಡ್ರ್ಯಾಗನ್ ಹಣ್ಣು ತಿನ್ನುವುದು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಉತ್ಕರ್ಷಣ ನಿರೋಧಕಗಳು, ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿದೆ. ಡ್ರ್ಯಾಗನ್‌ನ ಹೆಚ್ಚಿನ ಫೈಬರ್ ಅಂಶವು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ತುಂಬಾ ಉಪಯುಕ್ತವಾಗಿದ್ದು, ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಡ್ರ್ಯಾಗನ್ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.

ಮಧುಮೇಹ ಇರುವವರಿಗೆ ಅದ್ಭುತವಾದ ಹಣ್ಣು:ಮಧುಮೇಹ ಇರುವವರು ಹಗಲಿನಲ್ಲಿ ತಿನ್ನುವ ಹಣ್ಣುಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಈ ನಿಟ್ಟಿನಲ್ಲಿ ಡ್ರ್ಯಾಗನ್ ಹಣ್ಣು ಅವರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇದು ಸ್ವಾಭಾವಿಕವಾಗಿ ಕಡಿಮೆ ಕೊಬ್ಬಿನಾಂಶ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ: ಡ್ರ್ಯಾಗನ್ ಹಣ್ಣು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಕಬ್ಬಿಣದ ಮಟ್ಟವನ್ನು ಸಹ ಹೆಚ್ಚಿಸುತ್ತದೆ. ನಿಮ್ಮ ದೇಹದ ಮೂಲಕ ಆಮ್ಲಜನಕವನ್ನು ಚಲಿಸಲು ಮತ್ತು ಶಕ್ತಿಯನ್ನು ಒದಗಿಸಲು ಕಬ್ಬಿಣವು ಅವಶ್ಯಕವಾಗಿದೆ ಮತ್ತು ಡ್ರ್ಯಾಗನ್ ಹಣ್ಣು ಕಬ್ಬಿಣವನ್ನು ಹೊಂದಿರುತ್ತದೆ. ಮತ್ತು ಡ್ರ್ಯಾಗನ್ ಹಣ್ಣಿನಲ್ಲಿರುವ ವಿಟಮಿನ್ ಸಿ ನಿಮ್ಮ ದೇಹವು ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಮತ್ತು ಅದನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ:ಈ ಹಣ್ಣು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಹೆಚ್ಚಿನ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಧುಮೇಹ, ಆಲ್ ಝೈಮರ್, ಪಾರ್ಕಿನ್ಸನ್ಸ್, ಕ್ಯಾನ್ಸರ್ ಇತ್ಯಾದಿ ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಯುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group