ವಾರಸಾ ಖಾತೆ? ಭೂಮಿಯ ಹಕ್ಕನ್ನು ವರ್ಗಾವಣೆ? ಈಗಲೇ ಅರ್ಜಿ ಸಲ್ಲಿಸಿ!

- ಭೂಮಿ ಹಕ್ಕನ್ನು ವರ್ಗಾವಣೆ ಮಾಡಲು ಬೇಕಾಗುವ ದಾಖಲೆಗಳು ಅಂದರೆ ವಾರಸ ಖಾತೆಗೆ ಬೇಕಾಗುವ ದಾಖಲೆಗಳು?
★ ಮೊದಲನೆಯದಾಗಿ ಪ್ರಮುಖ ದಾಖಲೆ ಆದಂತ ವಂಶಾವಳಿ ಪ್ರಮಾಣ ಪತ್ರವನ್ನು ಅಂದರೆ ಕುಟುಂಬದ ವಂಶಾವಳಿ ಪ್ರಮಾಣ ಪತ್ರ ಕೊಡುವುದು ಅವಶ್ಯಕವಾಗಿದೆ. ಈ ಪ್ರಮಾಣ ಪತ್ರವನ್ನು ನೀವು ಉಪತಶಿಲ್ದಾರ್ ಕಚೇರಿಯಲ್ಲಿ ಪಡೆದುಕೊಳ್ಳಬಹುದು.
★ ವಂಶಾವಳಿ ಪತ್ರದಲ್ಲಿ ಇರುವ ಪ್ರತಿಯೊಬ್ಬರ ಹೆಸರಿನಲ್ಲಿ ಇರುವ ಆಧಾರ್ ಕಾರ್ಡ್ ಅವಶ್ಯಕತೆ.
★ 20 ರೂಗಳ E-stamp paper, ತೆಗೆದುಕೊಂಡು ಇದರಲ್ಲಿ ಪ್ರತಿಯೊಬ್ಬರೂ ಸಹಿಯನ್ನು ಮಾಡಿಸಿ ನಂತರ ವಕೀಲರ ಸಹಾಯದಿಂದ ಅದಕ್ಕೆ ನೋಟರಿ ಮಾಡಿಸಬೇಕು.
★ ಚಾಲ್ತಿ ವರ್ಷದ ಪಹಣಿ ಅವಶ್ಯಕವಾಗಿ ಬೇಕಾಗುತ್ತದೆ ಅಂದರೆ, ಇದನ್ನು ಮಾಡಿಸುವ ಸಮಯದಲ್ಲಿ ನಿಮ್ಮ ಹೊಲದ ಪಹಣಿ ಬೇಕಾಗುತ್ತದೆ.
★ ಮರಣ ಹೊಂದಿದವರ ಮರಣ ಪ್ರಮಾಣ ಪತ್ರ ಬೇಕಾಗುತ್ತದೆ, ಇದನ್ನು ನೀವು ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು.
★ ಮೇಲಿನ ಎಲ್ಲಾ ದಾಖಲೆಗಳೊಂದಿಗೆ ಇನ್ನೊಂದು ನೀವು ಸ್ವತಹ ಅರ್ಜಿಯನ್ನು ಬರೆಯಬೇಕಾಗುತ್ತದೆ ಈ ಅರ್ಜಿಯಲ್ಲಿ ನೀವು ಭೂಮಿ ವರ್ಗಾವಣೆ ಮಾಡುತ್ತಿರುವುದು ಅಂದರೆ ಭೂಮಿ ವರ್ಗಾವಣೆ ವಾರಸುದಾರರಿಗೆ ಎಂಬ ವಿಷಯವನ್ನು ಅದು ಒಳಗೊಂಡಿರಬೇಕು.
- ಅರ್ಜಿಯನ್ನು ಎಲ್ಲಿ ಮತ್ತು ಯಾರಿಗೆ ಸಲ್ಲಿಸಬೇಕು?
ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳು ಒಂದು ಬಿಡದಂತೆ ಅರ್ಜಿಯೊಂದಿಗೆ ಲಗತ್ತಿಸಿ ನಿಮ್ಮ ತಹಶೀಲ್ದಾರ್ ಇಲಾಖೆಯಲ್ಲಿ ಭೂಮಿ ಶಾಖೆಗೆ ಸಲ್ಲಿಸಬೇಕು ಸಲ್ಲಿಸಿದ ನಂತರ ಒಂದು ರಸೀದಿಯನ್ನು ಪಡೆದುಕೊಳ್ಳಬೇಕು, ಅಂದರೆ ಮತ್ತೊಮ್ಮೆ ನಿಮ್ಮ ಅರ್ಜಿ ಎಲ್ಲಿ ಯಾವಾಗ ಯಾವ ಸ್ಥಿತಿಯಲ್ಲಿ ಇದೆ ಎಂದು ಸುಲಭವಾಗಿ ನೋಡಿಕೊಳ್ಳಬಹುದು.
ಅರ್ಜಿ ಸಲ್ಲಿಸಿದ ನಂತರ ಇದು ಹೇಗೆ ವರ್ಗಾವಣೆ ಆಗುತ್ತದೆ ಎಂಬುದರ ಬಗ್ಗೆ ತಿಳಿಯಿರಿ?
ಮೊದಲಿಗೆ ನೀವು ಸಲ್ಲಿಸಿರುವ ಅರ್ಜಿಗಳು ಮ್ಯೂಟೇಷನ್ ಸಲುವಾಗಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಲುಪುತ್ತವೆ. ನಂತರ ಮ್ಯುಟೇಶನ್ ಪ್ರಕ್ರಿಯೆ ಮುಗಿದ ನಂತರ ಗ್ರಾಮ್ ಈ ದಾಖಲೆಗಳನ್ನು ಪುನಹ ಭೂಮಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ನಂತರ ಈ ದಾಖಲೆಗಳನ್ನು revenue inspector ಪರಿಶೀಲನೆ ಮಾಡಿದ ನಂತರ ಬೆರಳಚ್ಚು ನೀಡಿದರೆ, ನಿಮ್ಮ ಕೆಲಸ ಆಗಿದೆ ಎಂದರ್ಥ, ಅಂದರೆ ನಿಮ್ಮ ಭೂಮಿಯು ಹಕ್ಕು ವರ್ಗಾವಣೆಯಾಗಿದೆ ಎಂದರ್ಥ.
ಈ ರೀತಿಯಾಗಿ ಭೂಮಿ ಹಕ್ಕನ್ನು ವರ್ಗಾವಣೆ ಮಾಡುವುದರಿಂದ ಹಲವಾರು ರೀತಿಯ ಸಾಲ ಸೌಲಭ್ಯಗಳು ಪಡೆದುಕೊಳ್ಳಬಹುದು, ಹಾಗೂ ಪ್ರಾಕೃತಿಕ ವಿಕೋಪಗಳಿಂದ ಆಗುವ ಬೆಳೆಯುಮೆಯನ್ನು ಸಹ ಮಾಡಿಸಿಕೊಳ್ಳಬಹುದು. ಹಾಗೂ ಇದನ್ನು ಪೌತಿ ಖಾತಯಂದು ಸಹ ಕರೆಯಲಾಗುತ್ತದೆ.