ಡ್ರ್ಯಾಗನ್ ಫ್ರೂಟ್ ಕೃಷಿ 50,000 ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧಾರ:

ಡ್ರಾಗನ್ ಹಣ್ಣನ್ನು ಬೆಳೆಯುವುದಕ್ಕೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ . ಅದರಲ್ಲೂ ಈ ಎರಡು ರಾಜ್ಯಗಳು ಸೂಪರ್ ಹಣ್ಣು ಎಂದು ಪ್ರಸಿದ್ಧಿ ಪಡೆದಿರುವ ಡ್ರಾಗನ್ ಫ್ರೂಟ್ ನ್ನು ಜಾಸ್ತಿ ಬೆಳೆಯುವಂತೆ ತಮ್ಮ ರಾಜ್ಯದ ರೈತರಿಗೆ ಪ್ರೋತ್ಸಾಹ ಧನ ನೀಡುತ್ತಿವೆ.
ಇದೇ ಕೆಲಸವನ್ನು ಕೇಂದ್ರವು ಮಾಡಲು ಹೊರಟಿದೆ. ದೇಶದ ಯಾವುದೇ ರಾಜ್ಯದ ರೈತನು ಈ ಹಣ್ಣನ್ನು ಬೆಳೆಯುವುದಕ್ಕೆ ನಿರ್ಧರಿಸಿದರೆ, ಆ ರೈತನಿಗೆ ಕೇಂದ್ರ ಸರ್ಕಾರವು ಪ್ರೋತ್ಸಾಹವನ್ನು ನೀಡುತ್ತದೆ.ಈ ಹಣ್ಣಿನಲ್ಲಿರುವ ಪೌಷ್ಠಿಕಾಂಶದ ಮೌಲ್ಯಗಳಿಂದಾಗಿ ಹಣ್ಣಿನ ವೆಚ್ಚದ ಪರಿಣಾಮ ಮತ್ತು ಈ ಹಣ್ಣಿಗೆ ಇರುವ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ, ಡ್ರ್ಯಾಗನ್ ಫ್ರೂಟ್ ನ(Dragon Fruit) ಕೃಷಿಯನ್ನು ಭಾರತದಲ್ಲಿ ವಿಸ್ತರಿಸಬಹುದು ಎಂದು ಕೇಂದ್ರವು ಯೋಚಿಸಿದೆ.
ಪ್ರಸ್ತುತವಾಗಿ, ಈ ವಿದೇಶಿ ಹಣ್ಣನ್ನು ಭಾರತದಲ್ಲಿ 3,000 ಹೆಕ್ಟೇರ್‌ಗಳಲ್ಲಿ ಬೆಳೆಸಲಾಗುತ್ತದೆ. ಐದು ವರ್ಷಗಳಲ್ಲಿ ಈ ಹಣ್ಣಿನ ಕೃಷಿಯನ್ನು 50,000 ಹೆಕ್ಟೇರ್‌ಗಳಿಗೆ ಹೆಚ್ಚಿಸುವ ಯೋಜನೆಯನ್ನು ಪ್ರಸ್ತುತ ಕೇಂದ್ರ ಸಾಕಾರಗೊಳಿಸಲು ನಿರ್ಧರಿಸಿದೆ.
ಗುಜರಾತ್ ಸರ್ಕಾರವು ಇತ್ತೀಚೆಗೆ ಡ್ರ್ಯಾಗನ್ ಫ್ರೂಟ್ ಅನ್ನು ಕಮಲಮ್ (ಕಮಲ) ಎಂದು ಮರುನಾಮಕರಣ ಮಾಡಿತು ಮತ್ತು ಅದನ್ನು ಬೆಳೆಸುವ ರೈತರಿಗೆ ಪ್ರೋತ್ಸಾಹವನ್ನು ಘೋಷಿಸಿತು.ಈ ಹಣ್ಣಿನ ತಳಿಯನ್ನು ನೆಡಲು ಸಿದ್ಧರಾಗಿರುವ ರೈತರಿಗೆ ಹರಿಯಾಣ ಸರ್ಕಾರವು ಅನುದಾನವನ್ನು ನೀಡುತ್ತಿದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಪೋಷಕಾಂಶಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಸತುವಿನಂಶಗಳು ಇರುವುದರಿಂದ ಈ ಹಣ್ಣು ಡಯಾಬಿಟಿಸ್ ರೋಗಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.ರೈತರಿಗೆ ಉತ್ತಮ ಗುಣಮಟ್ಟದ ನಾಟಿ ಸಾಮಗ್ರಿಗಳನ್ನು ಒದಗಿಸಲು ಕೇಂದ್ರವು ರಾಜ್ಯಗಳಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಸಮಾವೇಶದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (MIDH) ಅಡಿಯಲ್ಲಿ ರಾಜ್ಯಗಳು ಮತ್ತು ರೈತರಿಗೆ ನಿರ್ದಿಷ್ಟ ಗುರಿ ಆಧಾರಿತ ಸಹಾಯವನ್ನು ಕೇಂದ್ರವು ಒದಗಿಸಬಹುದು ಎಂದು ಹೇಳಿದರು.
ಕಡಿಮೆ ನೀರು ಹಾಗೂ ಒಣ ಭೂಮಿಯಲ್ಲಿಯೂ ಬೆಳೆಯಬಹುದಾದ ಹಣ್ಣು“ಆಹಾರ ಸಂಸ್ಕರಣಾ ಸಚಿವಾಲಯದ ಸಹಾಯದಿಂದ ಸಂಸ್ಕರಣಾ ಮೂಲಸೌಕರ್ಯವನ್ನು ಸಹ ಅಭಿವೃದ್ಧಿಪಡಿಸಬಹುದು.
ಇದರ ಕೃಷಿಯಿಂದ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ”ಎಂದು ಹೇಳಿದರು.ಅಧಿಕಾರಿಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಕಾರ, ಈ ಹಣ್ಣಿನ ಸಸ್ಯಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ ಮತ್ತು ಇದನ್ನು ಒಣ ಭೂಮಿಯಲ್ಲಿಯೂ ಸಹ ಬೆಳೆಸಬಹುದು.
ಇದೀಗ ಡ್ರ್ಯಾಗನ್ ಹಣ್ಣು ಕೆಜಿಗೆ ₹400 ದರದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ₹100ಕ್ಕೆ ಸಿಗುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಆಯುಕ್ತ ಪ್ರಭಾತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.