ಕೇಂದ್ರ ಕೃಷಿ ಸಚಿವರಿಂದ 30,000 ಕೋಟಿ ಕೃಷಿ ಸಾಲ ವಿತರಣೆಗೆ ಗುರಿ! ಯಾರು ಅರ್ಹರು ಗೊತ್ತೆ?

ಕೃಷಿ ಮೂಲಸೌಕರ್ಯ ನಿಧಿ” ಅಡಿ ಹಣಕಾಸು ಸೌಲಭ್ಯದ ಕೇಂದ್ರೀಯ ವಲಯದ ಯೋಜನೆಗೆ ಸಂಪುಟದ ಅನುಮೋದನೆ ನೀಡಿದೆ. ಈ ಅನುಮೋದನೆ ಪ್ರಕಾರ ರೈತರಿಗೆ ಕೃಷಿ ಸಾಲ ನೀಡುವ ಸಲುವಾಗಿ 30,000 ಕೋಟಿ ವಿತರಣೆಯ ಗುರಿ ಇದೆಯೆಂದು ಕೃಷಿ ಸಚಿವ ತೋಮರ್‌ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನೂತನ ದೇಶವ್ಯಾಪಿ ಕೇಂದ್ರ ವಲಯದ ಯೋಜನೆ – ಕೃಷಿ ಮೂಲಸೌಕರ್ಯ ನಿಧಿಗೆ ತನ್ನ ಅನುಮೋದನೆ ನೀಡಿದೆ.

ಈ ಯೋಜನೆಯು ಸುಗ್ಗಿಯ ನಂತರದ ನಿರ್ವಹಣೆಗೆ ಕಾರ್ಯಸಾಧ್ಯವಾದ ಯೋಜನೆಗಳಲ್ಲಿ ಮತ್ತು ಸಮುದಾಯ ಕೃಷಿಗೆ ಹೂಡಿಕೆ ಮಾಡಲು ಆರ್ಥಿಕ ಬೆಂಬಲ ಮತ್ತು ಬಡ್ಡಿ ಸಹಾಯಧನದ ಮೂಲಕ ಮಧ್ಯಮ-ರ್ಘಾವಧಿಯ ಸಾಲ ಸೌಲಭ್ಯವನ್ನು ಒದಗಿಸುತ್ತದೆ.

ಯೋಜನೆಯಡಿ 1 ಲಕ್ಷ ಕೋಟಿ ರೂಪಾಯಿಗಳನ್ನು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (ಪಿಎಸಿಎಸ್), ಮಾರುಕಟ್ಟೆ ಸಹಕಾರ ಸಂಸ್ಥೆಗಳಿಗೆ, ರೈತ ಬೆಳೆಗಾರರ ಸಂಘಟನೆಗಳಿಗೆ (ಎಫ್.ಪಿ.ಓ.ಗಳಿಗೆ), ಸ್ವಸಹಾಯ ಗುಂಪುಗಳಿಗೆ (ಎಸ್.ಎಚ್.ಜಿ.), ರೈತರಿಗೆ,

ಸಾಲವನ್ನು ಪ್ರಸಕ್ತ ವರ್ಷಧಲ್ಲಿ ಮಂಜೂರಾತಿಯೊಂದಿಗೆ 10,000 ಕೋಟಿ ರೂ. ಮತ್ತು 30 ಸಾವಿರ ಕೋಟಿ ಮುಂದಿನ ಮೂರು ಹಣಕಾಸು ವರ್ಷಗಳು ಸೇರಿ ಒಟ್ಟು ನಾಲ್ಕು ವರ್ಷಗಳಲ್ಲಿ ವಿತರಿಸಲಾಗುವುದು.ಈ ಆರ್ಥಿಕ ಸೌಲಭ್ಯದ ಅಡಿಯಲ್ಲಿರುವ ಎಲ್ಲಾ ಸಾಲಗಳು ವಾರ್ಷಿಕ ಶೇ.3ರಷ್ಟು ಬಡ್ಡಿ ಸಹಾಯಧನವನ್ನು 2 ಕೋಟಿ ರೂ.ವರೆಗಿನ ಮಿತಿಗೆ ಒಳಪಟ್ಟಂತೆ ಹೊಂದಿರುತ್ತವೆ. ಈ ಬಡ್ಡಿ ಸಹಾಯಧನ ಗರಿಷ್ಠ ಏಳು ವರ್ಷಗಳವರೆಗೆ ಲಭ್ಯವಿರುತ್ತದೆ.ಜೊತೆಗೆ, ಈ ಹಣಕಾಸು ಸೌಲಭ್ಯದಿಂದ ಅರ್ಹ ಸಾಲಗಾರರಿಗೆ ಸೂಕ್ಷ್ಮ, ಸಣ್ಣ ಉದ್ಯಮಗಳ ಸಾಲ ಖಾತ್ರಿ ನಿಧಿ ಟ್ರಸ್ಟ್ (ಸಿಜಿಟಿಎಂಎಸ್‌.ಇ) ಯೋಜನೆಯಡಿ 2 ಕೋಟಿ ರೂಪಾಯಿಗಳವರೆಗಿನ ಸಾಲಕ್ಕೆ ಲಭ್ಯವಿರುತ್ತದೆ. ಈ ವ್ಯಾಪ್ತಿಗೆ ಶುಲ್ಕವನ್ನು ಸರ್ಕಾರವೇ ಪಾವತಿಸುತ್ತದೆ.ಎಫ್.ಪಿ.ಓ.ಗಳ ವಿಚಾರದಲ್ಲಿ, ಸಾಲ ಖಾತ್ರಿಯನ್ನು ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎಸಿಎಫ್.ಡಬ್ಲ್ಯು) ಎಫ್.ಪಿ.ಓ. ಉತ್ತೇಜನ ಯೋಜನೆಯಡಿ ರೂಪಿಸಲಾದ ಸೌಲಭ್ಯದಿಂದ ಪಡೆಯಬಹುದು.

ಜಂಟಿ ಹೊಣೆಗಾರಿಕೆ ಗುಂಪುಗಳಿಗೆ (ಜೆ.ಎಲ್.ಜಿ.), ಬಹು ಉದ್ದೇಶದ ಸಹಕಾರಿ ಸಂಸ್ಥೆಗಳಿಗೆ, ಕೃಷಿ ಉದ್ದಿಮೆಗಳಿಗೆ, ನವೋದ್ಯಮಗಳಿಗೆ, ಕೃಷಿ ಮೂಲಸೌಕರ್ಯ ಒದಗಿಸುವವರಿಗೆ ಮತ್ತು ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳಿಗೆ ಅಥವಾ ಸಾರ್ವಜನಿಕ ಖಾಸಗಿ ಸಹಯೋಗದ ಯೋಜನೆಗಳ ಪ್ರಯೋಜಕತ್ವಕ್ಕಾಗಿ ಸ್ಥಳೀಯ ಕಾಯಗಳಿಗೆ ಸಾಲ ನೀಡಿಕೆಗಾಗಿ ನೀಡಲಾಗುವುದು.

ಸಾಲವನ್ನು ಪ್ರಸಕ್ತ ವರ್ಷಧಲ್ಲಿ ಮಂಜೂರಾತಿಯೊಂದಿಗೆ 10,000 ಕೋಟಿ ರೂ. ಮತ್ತು 30 ಸಾವಿರ ಕೋಟಿ ಮುಂದಿನ ಮೂರು ಹಣಕಾಸು ವರ್ಷಗಳು ಸೇರಿ ಒಟ್ಟು ನಾಲ್ಕು ವರ್ಷಗಳಲ್ಲಿ ವಿತರಿಸಲಾಗುವುದು.ಈ ಆರ್ಥಿಕ ಸೌಲಭ್ಯದ ಅಡಿಯಲ್ಲಿರುವ ಎಲ್ಲಾ ಸಾಲಗಳು ವಾರ್ಷಿಕ ಶೇ.3ರಷ್ಟು ಬಡ್ಡಿ ಸಹಾಯಧನವನ್ನು 2 ಕೋಟಿ ರೂ.ವರೆಗಿನ ಮಿತಿಗೆ ಒಳಪಟ್ಟಂತೆ ಹೊಂದಿರುತ್ತವೆ. ಈ ಬಡ್ಡಿ ಸಹಾಯಧನ ಗರಿಷ್ಠ ಏಳು ವರ್ಷಗಳವರೆಗೆ ಲಭ್ಯವಿರುತ್ತದೆ.

ಜೊತೆಗೆ, ಈ ಹಣಕಾಸು ಸೌಲಭ್ಯದಿಂದ ಅರ್ಹ ಸಾಲಗಾರರಿಗೆ ಸೂಕ್ಷ್ಮ, ಸಣ್ಣ ಉದ್ಯಮಗಳ ಸಾಲ ಖಾತ್ರಿ ನಿಧಿ ಟ್ರಸ್ಟ್ (ಸಿಜಿಟಿಎಂಎಸ್‌.ಇ) ಯೋಜನೆಯಡಿ 2 ಕೋಟಿ ರೂಪಾಯಿಗಳವರೆಗಿನ ಸಾಲಕ್ಕೆ ಲಭ್ಯವಿರುತ್ತದೆ. ಈ ವ್ಯಾಪ್ತಿಗೆ ಶುಲ್ಕವನ್ನು ಸರ್ಕಾರವೇ ಪಾವತಿಸುತ್ತದೆ.

ಎಫ್.ಪಿ.ಓ.ಗಳ ವಿಚಾರದಲ್ಲಿ, ಸಾಲ ಖಾತ್ರಿಯನ್ನು ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎಸಿಎಫ್.ಡಬ್ಲ್ಯು) ಎಫ್.ಪಿ.ಓ. ಉತ್ತೇಜನ ಯೋಜನೆಯಡಿ ರೂಪಿಸಲಾದ ಸೌಲಭ್ಯದಿಂದ ಪಡೆಯಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group