ಹುರಿದ ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು..!

ಬೆಳ್ಳುಳ್ಳು ಆ್ಯಂಟಿಆಕ್ಸಿಡೆಂಟ್ ಅಧಿಕವಿರುವ ಒಂದು ಅದ್ಭುತವಾದ ತರಕಾರಿಯಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಗುಣಗಳಿವೆ, ಅದರಲ್ಲೂ ಚಳಿಗಾಲದಲ್ಲಿ ತಿನ್ನುವುದರಿಂದ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಇವುಗಳನ್ನು ಸಮರ್ಥವಾಗಿ ಎದುರಿಸಬಹುದು.
ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಸಾಮಾನ್ಯ ಶೀತವಾದರೆ ಅದನ್ನು ಹೋಗಲಾಡಿಸಲು ಬೆಳ್ಳುಳ್ಳಿ ಬಳಸುತ್ತಾರೆ, ಇನ್ನು ತ್ವಚೆಯಲ್ಲಿ ಹುಳಕಡ್ಡಿಯಾದರೆ ಬೆಳ್ಳುಳ್ಳಿ ರಸ ಹಚ್ಚಿದರೆ ಮಾಯವಾಗುವುದು. ಹೀಗೆ ಒಂದಲ್ಲಾ ಎರಡಲ್ಲಾ ಬೆಳ್ಳುಳ್ಳಿ ಬಳಸಿ ಹತ್ತಾರು ಮನೆಮದ್ದುಗಳನ್ನು ಮಾಡಲಾಗುವುದು.
ಅದರಲ್ಲೂ ರೋಸ್ಟ್ ಮಾಡಿದ (ಹುರಿದ) ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಗ್ಯಾಸ್ ತುಂಬಿ ಹೊಟ್ಟೆ ಉಬ್ಬಿದಂತೆ ಭಾಸವಾದರೆ ಬೆಳ್ಳುಳ್ಳಿಯನ್ನು ರೋಸ್ಟ್ ಅಥವಾ ಸುಟ್ಟು ತಿಂದರೆ ಸಾಕು. ನಾವಿಲ್ಲಿ ರೋಸ್ಟಡ್ ಬೆಳ್ಳುಳ್ಳಿ ತಿನ್ನುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ಹೇಳಲಾಗಿದೆ ನೋಡಿ:
ಲೈಂಗಿಕ ಸಮಸ್ಯೆ: ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವ ಯಾವುದೇ ಪುರುಷ ಬೆಳ್ಳುಳ್ಳಿ ಯನ್ನು ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹುರಿದ ಬೆಳ್ಳುಳ್ಳಿಯು ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಹೆಚ್ಚಿಸುವ ಗುಣಲಕ್ಷಣವನ್ನು ಹೊಂದಿದೆ, ಇದು ಪುರುಷರ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಫಲವತ್ತತೆ ಹೆಚ್ಚಿಸಬಹುದು. ಇದರಿಂದ ಯಾವುದೇ ಸೈಡ್ಎಫೆಕ್ಟ್ ಗಳು ಸಹ ಕಾಡುವುದಿಲ್ಲ. ಧೈರ್ಯವಾಗಿ ಇದರ ಸೇವನೆ ಮಾಡಬಹುದು.
ಮೈ ಬೊಜ್ಜು ಕರಗುವುದು:ಚಳಿಗಾಲದಲ್ಲಿ ಹುರಿದ (ತವಾದಲ್ಲಿ ಹಾಕಿ ಎಣ್ಣೆ ಹಾಕದೆ ಹುರಿದ)ಅಥವಾ ಸುಟ್ಟ ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕಡಿಮೆಯಾಗುವುದು.ಕೊಲೆಸ್ಟ್ರಾಲ್ ಕಡಿಮೆಯಾದರೆ ತೂಕ ಇಳಿಕೆಗೆ ತುಂಬಾನೇ ಸಹಕಾರಿ.ಬೆಳ್ಳುಳ್ಳಿ ಬೊಜ್ಜು ಕರಗಿಸುವುದರಿಂದ ತೆಳ್ಳಗಾಗುವಿರಿ.ದಿನಾ 2 ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ರಕ್ತದೊತ್ತಡ:ನೀವು ರಕ್ತದೊತ್ತಡದ ರೋಗಿಯಾಗಿದ್ದರೆ ಬೆಳ್ಳುಳ್ಳಿ ನಿಮಗೆ ಪ್ರಯೋಜನಕಾರಿ. ಬೆಳ್ಳುಳ್ಳಿಯಲ್ಲಿರುವ ಬಯೋಆಕ್ಟಿವ್ ಸಲ್ಫರ್ ಸಂಯುಕ್ತ, ಎಸ್-ಅಲ್ಲೈಲ್ಸಿಸ್ಟೈನ್, ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು: ಪ್ರತಿ ದಿನ ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ಜಗಿಯುವುದರಿಂದ ಪಚನಕ್ರಿಯೆ ಚೆನ್ನಾಗಿ ನಡೆದು ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ, ಇದರಿಂದ ಹಸಿವು ಹೆಚ್ಚುತ್ತದೆ. ಹಸಿವು ಕಡಿಮೆ, ಆಗಾಗ ಅಜೀರ್ಣ ಸಮಸ್ಯೆ ಇರುವವರು ಬೆಳ್ಳುಳ್ಳಿ ತಿಂದರೆ ಸಮಸ್ಯೆ ಇಲ್ಲವಾಗುವುದು.
ಶೀತ-ಕೆಮ್ಮು ದೂರ ಮಾಡುವುದುಚಳಿಗಾಲದಲ್ಲಿ ಶೀತ-ಕೆಮ್ಮು ಈ ರೀತಿಯ ಸಮಸ್ಯೆ ಸರ್ವೇ ಸಾಮಾನ್ಯ. ದಿನಾ ಬೆಳ್ಳುಳ್ಳಿ ತಿನ್ನುವುದರಿಂದ ಈ ರೀತಿಯ ಸಮಸ್ಯೆ ಕಾಡಲ್ಲ, ಒಂದು ವೇಳೆ ಕೆಮ್ಮು-ಶೀತ ಇದ್ದರೆ ಬೆಳ್ಳುಳ್ಳಿ ಸುಟ್ಟು ಜಜ್ಜಿ ಅದರ ರಸ ತೆಗೆದು ಜೇನಿನ ಜೊತೆ ಮಿಶ್ರ ಮಾಡಿ ಬೆಳಗ್ಗೆ ಹಾಗೂ ಮಲಗುವ ಮುನ್ನ ಸೇವಿಸಿದರೆ ಬೇಗನೆ ಕಡಿಮೆಯಾಗುವುದು.
ಗಮನಿಸಿ ; ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿಯೂ ತಿನ್ನಬಹುದು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಎರಡು ಹುರಿದ ಬೆಳ್ಳುಳ್ಳಿ ಮೊಗ್ಗುಗಳನ್ನು ಸಹ ತಿನ್ನಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹುರಿದ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನೀವು ಸಕ್ರಿಯರಾಗಲು ಸಾಧ್ಯವಾಗುತ್ತದೆ ಮತ್ತು ಫಿಟ್ನೆಸ್ ಕೂಡ ದಿನದಿಂದ ದಿನಕ್ಕೆ ಬಲಗೊಳ್ಳುತ್ತದೆ. ಜೊತೆಗೆ ಉತ್ತಮ ಆರೋಗ್ಯ ಕಾಪಾಡಲು ಬೆಳ್ಳುಳ್ಳಿ ಪ್ರತಿದಿನ ಸೇವಿಸೋದ್ರಲ್ಲಿ ತಪ್ಪೇನು ಇಲ್ಲ ಬಿಡಿ.