ಬೀಜ ಬಿತ್ತುವ ಬೈಕ್ ಕೂರಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ತಯಾರಿ! ಎಲ್ಲಿ ಸಿಗುತ್ತೆ ಹೇಗಿದೆ?

ಆತ್ಮೀಯ ರೈತ ಬಾಂಧವರೇ ಕರ್ನಾಟಕದಲ್ಲಿ ಈಗಾಗಲೇ ಮುಂಗಾರುಮಳೆಯ ಬಿತ್ತನೆ ಮಾಡಿದ್ದಾರೆ, ಅದಕ್ಕಾಗಿ ಕೆಲವೊಬ್ಬರು ಎತ್ತುಗಳನ್ನು ಬಳಸುತ್ತಾರೆ ಇನ್ನೂ ಕೆಲವೊಬ್ಬರು ಟ್ಯಾಕ್ಟರ್ ಆಧಾರಿತ ಬಿತ್ತುವ ಯಂತ್ರದ ಸಹಾಯದಿಂದ ಬಿತ್ತನೆ ಮಾಡುತ್ತಾರೆ. ಹಾಗೂ ಈಗಾಗಲೇ ಸ್ವಲ್ಪ ಪ್ರದೇಶಗಳಲ್ಲಿ ಅಂದರೆ 60% ಪ್ರತಿಶತದಷ್ಟು ಜನರು ಬಿತ್ತನೆಯನ್ನು ಮಾಡಿದ್ದಾರೆ. ಅದಕ್ಕಾಗಿ ರೈತರು ಈಗಾಗಲೇ ಹೆಚ್ಚು ಪ್ರಮಾಣದಲ್ಲಿ ಯಾಂತ್ರಿಕರಣವನ್ನು ಬಳಸುತ್ತಿದ್ದಾರೆ ಹಾಗೂ ಎತ್ತುಗಳ ಬಗ್ಗೆ ನಿರ್ಲಕ್ಷವನ್ನು ಮಾಡುತ್ತಿದ್ದಾರೆ.

ಹೀಗಾಗಿ ಈ ತಂತ್ರಜ್ಞಾನ ಯುಗದಲ್ಲಿ ಕೆಲವೊಂದು ಹೊಸ ಟೆಕ್ನಾಲಜಿ ಮೂಲಕ ಬಿತ್ತುವ ಯಂತ್ರವನ್ನು ಬೈಸೈಕಲ್ ಗೆ ಅಳವಡಿಸಿ ಬಿತ್ತುವ ಕೆಲಸವನ್ನು ಕೇವಲ ಬೈಕ್ ಮೂಲಕ ಮಾಡಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದಕ್ಕಾಗಿ ಯಂತ್ರವು ಸಾಮಾನ್ಯವಾಗಿ ಎಲ್ಲಾ ರೀತಿಯ ಧಾನ್ಯಗಳನ್ನು ಬಿತ್ತನೆ ಮಾಡಲು ಸಹಕರಿಸುತ್ತದೆ ಇದರೊಂದಿಗೆ ಗೊಬ್ಬರ ಹಾಗೂ ಬೀಜಗಳನ್ನು ಏಕಕಾಲಕ್ಕೆ ಬಿತ್ತನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬಿತ್ತನೆಯನ್ನು ಮಾಡಿದ ನಂತರ ಸಾಲನ್ನು ಕೂಡಿಸುವುದು ಸಹ ಇದರ ಸಹಾಯದಿಂದ ಮಾಡಿಕೊಳ್ಳಬಹುದು. ಇದಾದ ನಂತರ ಬೇರೆ ಬೇರೆ ಸಮಯದಲ್ಲಿ ಅಂದರೆ ಎಡೆಕುಂಟೆ ಹೊಡಿಯೋ ಸಂದರ್ಭದಲ್ಲಿಯೂ ಸಹ ಅದನ್ನು ತಮ್ಮ ಬೈಸೈಕಲ್ ಅಳವಡಿಸುವಂತೆ ಅವಕಾಶವನ್ನು ಮಾಡಲಾಗಿದೆ. ಅದಕ್ಕಾಗಿ ಈ ಸಾಧನವನ್ನು ನಿಮಗೆ ಬೇಕಾಗಿದ್ದಾರೆ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.

ಬೈಸೈಕಲ್ ಆಧಾರಿತ ಬಿತ್ತುವ ಯಂತ್ರ ಸಿಗುವ ವಿಳಾಸಕ್ಕೆ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9844931163 ಯಂತ್ರವನ್ನು ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಬೈಕ್ ಅಳವಡಿಸಿರುವುದು. ಅದಕ್ಕಾಗಿ ಯಂತ್ರವನ್ನು ಪಡೆಯಬೇಕಾದರೆ ಸ್ವಲ್ಪ ದಿನಗಳು ಹೋಗಬಹುದು.ನಿಮಗೆ ಬೇಕಾಗಿದ್ದಲ್ಲಿ ಮೇಲೆ ತಿಳಿಸಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಮತ್ತು ಅದರ ಬೆಲೆಯ ಬಗ್ಗೆ ತಿಳಿದುಕೊಳ್ಳಿ.

ರೈತರ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಬೆಳೆಯುತ್ತಲಿವೆ ಹಾಗೂ ಕೃಷಿಯ ಮುಖ್ಯ ಗುರಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಡಿಮೆ ಖರ್ಚನ್ನು ಮಾಡಿ ಹೆಚ್ಚಿನ ಲಾಭವನ್ನು ಪಡೆಯುವ ಉದ್ದೇಶವಾಗಿದೆ. ಅದಕ್ಕಾಗಿ ಇಂತಹ ತಂತ್ರಜ್ಞಾನಗಳನ್ನು ಬಳಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಬಹುದಿನಗಳ ಲಾಭವನ್ನು ಪಡೆಯಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group