ಪೋಷಕರೇ ಮಳೆಗಾಲದಲ್ಲಿ ನಿಮ್ಮ ಮಕ್ಕಳತ್ತ ಸ್ವಲ್ಪ ಗಮನವಿರಲಿ.!

ಮಳೆಗಾಲ ಶುರುವಾಗಿ ಎರಡು ತಿಂಗಳೇ ಕಳೆದಿದೆ. ಆರಂಭದಲ್ಲಿ ಬೇಸಿಗೆಯ ಬೇಗೆಗೆ ತಂಪೆರೆದ ಮಳೆ ದೇಹಕ್ಕೆ, ಮನಸ್ಸಿಗೆ ಮುದ ನೀಡಿದ್ದಲ್ಲದೇ ಬಿಸಿಬಿಸಿ ಕರಿದ ತಿನಿಸು, ಟೀ ಜೊತೆಗೆ ನಾಲಗೆಯ ರುಚಿಯನ್ನೂ ತಣಿಸುತ್ತಿದೆ. ಮಕ್ಕಳಂತೂ ಮಳೆಯಲ್ಲಿ ನೆನೆಯುತ್ತ, ನಿಂತ ನೀರಿನಲ್ಲಿ ಕಾಲನ್ನು ತೋಯಿಸುತ್ತ, ಕಾಗದದ ದೋಣಿ ಮಾಡುತ್ತ ಸಂಭ್ರಮಿಸುತ್ತಿದ್ದಾರೆ.

ಆದರೆ ಈ ಖುಷಿಯ ಮಧ್ಯೆ ಆತಂಕ ಹುಟ್ಟಿಸುವಂತಹ ಅಂಶವೆಂದರೆ ಮಳೆಯ ಖುಷಿಯನ್ನು ಸಂಭ್ರಮಿಸಲು ಹೋಗುವ ಮಕ್ಕಳೂ ನೀರು ತುಂಬಿರುವ ಗುಂಡಿ ಅಥವಾ ಚರಂಡಿಯೊಳಗೆ ಬಿದ್ದು ಸಾವನ್ನಪ್ಪಿರುವ ಇಂತಹ ದುರ್ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇದ್ದು, ಪೋಷಕರು ಇಂತಹ ವಿಚಾರದಲ್ಲಿ ಗಮನಹರಿಸಬೇಕಿದೆ.

ಮಳೆಗೆ ಆಚೆ ಹೋಗದಂತೆ ನಿಮ್ಮ ಮಕ್ಕಳಿಗೆ ಏಚ್ಚರವಹಿಸಿ ಅವರ ಆಟಗಳನ್ನು ಮನೆಯ ಒಳಗೆಯೇ ಸೀಮಿತವಾಗಿ ಇರಿಸಿ. ನಿಮ್ಮ ಬೇಜಾವಬ್ದರಿ ತನವೇ ನಿಮ್ಮ ಮಕ್ಕಳ ಜೀವದ ಮೇಲೆ ಹಾನಿ ಉಂಟು ಮಾಡುವ ಸಾಧ್ಯತೆಗಳಿವೆ ಮನೆ ಆಚೆ ಹೆಚ್ಚೂ ನೀರೂ ಸಂಗ್ರಹವಾಗುತ್ತಿವೆ ಎಂದಾದರೆ ನಿಮ್ಮ ನೆರೆಯ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ.

ಯಾವ ಮಕ್ಕಳಿಗೂ ಈ ಮಳೆಗಾಲದಲ್ಲಿ ಯಾವುದೇ ರೀತಿಯ ದುರ್ಘಟನೆಗಳು ಆಗದೆ ಇರದಂತೆ ಕಾಪಾಡಿಕೊಳ್ಳಿ ನೀವೂ ಮನೆಯಲ್ಲಿ ಇರದ ಸಮಯದಲ್ಲಿ ನಿಮ್ಮ ಮಕ್ಕಳು ಮನೆಯಲ್ಲೇ ಇರುವರು ಎಂದು ಪಕ್ಕದ ಮನೆಯವರಿಗೂ ಆದರು ತಿಳಿಸಿ ಹೋಗಿ. ನೀವೂ ಮನೆಯಿಂದ ಆಚೆ ಹೊರಟಗೆಲ್ಲ ಆದಷ್ಟು ಹಿರಿಯವರನ್ನು ಮನೆಯಲ್ಲಿಯೆ ಇರಿಸಿ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಹೇಳಿ

ನಿಮ್ಮ ಮನೆಯ ಮಕ್ಕಳೇ ಎಂದಲ್ಲ ನೆರೆಹೊರೆಯ ಮನೆಗಳಲ್ಲಿ ಸಣ್ಣ ಸಣ್ಣ ಮಕ್ಕಳು ಇದ್ದರೆ ಅವರ ಪೋಷಕರಿಗೂ ತಿಳಿಸಿ ಹೇಳಿ.

ಅಪಾಯದಂತಹ ಗುಂಡಿಗಳು ಕಂಡರೆ ಅಂತಹ ಜಾಗಗಳತ್ತ ಮಕ್ಕಳನ್ನು ಹೋಗದೆ ಇರದಂತೆ ತಡೆಯಿರಿ ಸಾಧ್ಯವಾದರೆ ಅಂತಹ ಗುಂಡಿಗಳನ್ನು ಮುಚ್ಚಲು ಮುಂದಾಗಿ ಅತಿಯಾದ ಮಳೆ ಆಗಮನದ ನಿರೀಕ್ಷೆ ಇದೆ ಎಂದಾದರೆ ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಮನೆಯಿಂದ ಆಚೆ ಬಿಡಲೇ ಬೇಡಿ

ಮಕ್ಕಳ ಬಗ್ಗೆ ಆದಷ್ಟೂ ಜಾಗ್ರತೆವಹಿಸಿ ಮಳೆಗಾಲ ಮುಗಿಯುವವರೆಗೂ ನೀವು ಅವರನ್ನು ಎಲ್ಲಿಯೂ ಸಹ ಮನೆಯಿಂದ ಆಚೆ ಆಟವಾಡಲು ಬಿಡದಿರಿ. ಮಳೆಗೆ ಹೆಚ್ಚು ಹೆಚ್ಚು ನೀರು ಸಂಗ್ರಹವಾಗುತ್ತಿದೆ ಎಂದಾಗ ನೀರು ಹರಿದು ಹೋಗುವಂತೆ ಒಳ ಚರಂಡಿಗಳನ್ನು ನಿರ್ಮಿಸಿ. ಅಪಾಯಕ್ಕೆ ಆಹ್ವಾನ ನೀಡುವ ಯಾವುದೇ ಗುಂಡಿಗಳು ಇದ್ದರು ಅವುಗಳನ್ನು ಮುಚ್ಚಿಸಿ ಇನ್ನು ಮುಂದಿನ ದಿನಗಳಲ್ಲಿ ಆದರೂ ಇಂತಹ ದುರ್ಘಟನೆಗಳು ಆಗದೆ ಇರದಂತೆ ನೋಡಿಕೊಳ್ಳಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group