ಮಿನಿ ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

2022-23ನೇ ಸಾಲಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್ ಹಾಗೂ ಪಾವರ್ ಟಿಲ್ಲರ್ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ತೋಟಗಾರಿಕೆಯಲ್ಲಿ ಯಾಂತ್ರೀಕರಣಕ್ಕಾಗಿ 20 ಪಿಟಿಓ ಹೆಚ್.ಪಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಹಾಗೂ 8 ಪಿಟಿ ಓಹೆಚ್.ಪಿ ಗಿಂತ ಕಡಿಮೆ ಸಾಮರ್ಥ್ಯದ ಟಿಲ್ಲರ್ ಖರೀದಿಗೆ ಶೇ. 25 ರಿಂದ 50 ರವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

2022-23ನೇ ಸಾಲಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ ತೋಟಗಾರಿಕೆ ಬೆಳೆ ಹೊಂದಿರುವ ಅರ್ಹ ರೈತರು ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಸಣ್ಮ ನರ್ಸರಿ ಸ್ಥಾಪನೆ, ಬಾಳೆ, ಮಾವು, ಅಂಜೂರು, ಪೇರಳೆ, ಡ್ರ್ಯಾಗನ್ ಫ್ರೂಟ್ಸ್, ಜಂಬು ನೇರಳೆ, ಹುಣಸೆ ಸೇರಿದಂತೆ ಇನ್ನಿತರ ಹಣ್ಣಿನ ಬೆಳೆಗಳಿಗೆ ಗುಲಾಬಿ, ಸುಗಂಧರಾಜ, ಸೇವಂತಿಗೆ, ಮಲ್ಲಿಗೆ ಮುಂತಾದ ಹೂವಿನ ಬೆಳೆಗಳಿಗೆ ಮತ್ತು ಟೊಮ್ಯಾಟೊದಂತಹ ಹೈಬ್ರಿಡ್ ತರಕಾರಿ ಬೆಳೆಗಳಿಗೆ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು.

ಅಣಬೆ ಬೀಜೋತ್ಪಾದನೆ ಘಟಕ ಸ್ಥಾಪನೆ, ಕೃಷಿ ಹೊಂಡ ನಿರ್ಮಾಣ, ಪಾಲಿಹೌಸ್ ನಿರ್ಮಾಣ, ನೆರಳು ಪರದೆ ನಿರ್ಮಾಣ, ತರಕಾರಿ ಬೆಳೆಗಳಿಗೆ ನೆಲಹಾಸು ನಿರ್ಮಾಣ, ರೋಗ ಕೀಟನಾಶಕ ಔಷಧಗಳಿಗೆ ಸಹಾಯಧನ ನೀಡಲು ಅವಕಾಶವಿದೆ.ಪ್ಯಾಕ್ ಹೌಸ್ ನಿರ್ಮಾಣ, ಸೋಲಾರ್ ಟನಲ್ ಡ್ರೈಯರಗಳಿಗೆ, ಈರುಳ್ಳಿ ಸಂಗ್ರಹಣಾ ಘಟಕ ನಿರ್ಮಾಣ, ತಳ್ಳುವ ಗಾಡಿಗಳಿಗೆ ನಿಯಮಾನುಸಾರ ಸಹಾಯಧನ ನೀಡಲಾಗುವುದು

  • ರೈತರು ಯಾವ ಯಾವ ದಾಖಲಾತಿ ಸಲ್ಲಿಸಬೇಕು?

ಅರ್ಹ ರೈತರು ನಿಗದಿತ ಅರ್ಜಿ ನಮೂನೆ ಜೊತೆಗೆ ಪಹಣಿ, ಇತ್ತೀಚಿನ ಭಾವಚಿತ್ರ, ಖಾತೆ ಉತಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಪ್ರಮಾಣ ಪತ್ರ ನೀಡಬೇಕು. ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಮಣ್ಣು ನೀರು ಪರೀಕ್ಷಾ ಪ್ರಮಾಣ ಪತ್ರ ಹಾಗೂ ಅಗತ್ಯ ದಾಖಲಾತಿಗಳು ಸಲ್ಲಿಸಬೇಕು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group