ವಿಟಮಿನ್ ಕೆ ಯ ಅತ್ಯುತ್ತಮ ಹಣ್ಣುಗಳ ಪಟ್ಟಿ ..!

ಜೀವಸತ್ವಗಳು, ಖನಿಜಾಂಶಗಳು ಮತ್ತು ಮಿನರಲ್ಸ್ ಗಳು ನಮ್ಮ ದೇಹಕ್ಕೆ ಅತ್ಯಗತ್ಯ ಏಕೆಂದರೆ ಅವು ನಮ್ಮ ದೇಹದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಪ್ರತಿಯೊಂದು ಜೀವಸತ್ವವು ತನ್ನದೇ ಆದ ವಿಶೇಷ ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳಲ್ಲಿ ವಿಟಮಿನ್ ಕೆ ಸಹ ಒಂದು. ವಿಟಮಿನ್ ಕೆ ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಗಿದ್ದು ರಕ್ತ ಹೆಪ್ಪುಗಟ್ಟುವ ಕ್ರಿಯೆಯನ್ನು ಸಮತೋಲನ ಮಾಡುವ ಕೆಲಸ ಮಾಡುತ್ತದೆ.

  • ಮಿಟಮಿನ್ ಕೆ ಉಪಯೋಗವೇನು..?

ವಿಟಮಿನ್ ಕೆ ಒಂದು ಪೋಷಕಾಂಶವಾಗಿದ್ದು ಅದು ವಿವಿಧ ಪ್ರೋಟೀನ್‌ಗಳ ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ. ಪ್ರೋಥ್ರೊಂಬಿನ್ ವಿಟಮಿನ್ ಕೆ ನಿಂದ ತಯಾರಿಸಲ್ಪಟ್ಟ ಪ್ರೋಟೀನ್‌ಗಳಲ್ಲಿ ಒಂದಾಗಿದೆ. ಪ್ರೋಥ್ರೊಂಬಿನ್ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಆರೋಗ್ಯಕರ ಮೂಳೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಈ ವಿಟಮಿನ್ ಮತ್ತೊಂದು ಪ್ರೊಟೀನ್ ಅನ್ನು ಸಕ್ರಿಯಗೊಳಿಸುತ್ತದೆ – ಆಸ್ಟಿಯೋಕಾಲ್ಸಿನ್ ಇದು ಮೂಳೆ ಬಲವರ್ಧನೆಗೆ ಕಾರಣವಾಗಿದೆ ಮತ್ತು ರಕ್ತದ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುತ್ತದೆ.

  • ವಿಟಮಿನ್ ಕೆ ಆಹಾರಗಳು:

ವಿಟಮಿನ್ ಕೆ ಅನೇಕ ಆಹಾರಗಳಲ್ಲಿ ಲಭ್ಯವಿದೆ. ಇದನ್ನು ನಾವು ನಿಯಮಿತವಾಗಿ ನಮ್ಮ ಆಹಾರದಲ್ಲಿ ಸೇರಿಸಬೇಕು. ವಿವಿಧ ಹಣ್ಣುಗಳು, ಸೊಪ್ಪು, ತರಕಾರಿಗಳಲ್ಲಿ ಈ ವಿಟಮಿನ್‌ ಹೆಚ್ಚಾಗಿ ಕಂಡು ಬರುತ್ತದೆ. ಇದು ಮಾಂಸ ಮತ್ತು ಹುದುಗಿಸಿದ ಆಹಾರದಲ್ಲಿ ಕಂಡುಬರುತ್ತದೆ. ವಿಟಮಿನ್ ಕೆ ಯ ಅತ್ಯುತ್ತಮ ಹಣ್ಣುಗಳ ಪಟ್ಟಿ

01.ಆವಕಾಡೊ:ಆವಕಾಡೊದ ಒಂದು ತುಂಡು ಸುಮಾರು 20 ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದನ್ನು ಹಸಿಯಾಗಿ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆವಕಾಡೊದಲ್ಲಿ ಸುಮಾರು 35 mcg ಯಷ್ಟು ವಿಟಮಿನ್ ಕೆ ಸತ್ವ ಅಡಗಿದೆ. ಇದು ಸಂಪೂರ್ಣ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾದ ಹಣ್ಣಾಗಿದೆ.

02. ದಾಳಿಂಬೆ:ದಾಳಿಂಬೆ ಹಣ್ಣು ಆ್ಯಂಟಿ ಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿದೆ. ಹಲವಾರು ಖನಿಜಾಂಶಗಳು ಮತ್ತು ಮಿಟಮಿನ್‍ಗಳನ್ನು ಒಳಗೊಂಡಿದೆ. ಪ್ಯುನಿಕಾಲಾಜಿನ್ ಮತ್ತು ಪ್ಯುನಿಕ್ ಆಸಿಡ್ ಎಂಬ ಎರಡು ಸಂಯುಕ್ತಗಳಿಂದ ಕೂಡಿದೆ.ವಿಟಮಿನ್ ಕೆ ಮತ್ತು ಫೋಲೇಟ್ ಗಳು ಸಹ ಈ ಹಣ್ಣಿನಲ್ಲಿ ಇದೆ.

03.ಮಾವಿನ ಹಣ್ಣು:1 ಕಪ್ ಮಾವಿನ ಹಣ್ಣಿನಲ್ಲಿ 6.9ug ವಿಟಮಿನ್ ಕೆ ಸತ್ವ ಅಡಗಿದೆ. ಅಲ್ಲದೆ ಹಲವಾರು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣುನ್ನು ತಪ್ಪದೇ ಸೇವಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

04.ಅಂಜೂರ:ತಾಜಾ ಮತ್ತು ಒಣಗಿದ ಎರಡೂ ಅಂಜೂರದ ಹಣ್ಣುಗಳು ಹೆಚ್ಚಿನ ಮಟ್ಟದ ವಿಟಮಿನ್ ಕೆ ಅನ್ನು ಹೊಂದಿರುತ್ತವೆ. ಇದನ್ನು ನಿಮ್ಮ ಆಹಾರದಲ್ಲಿ ಮಿಟಮಿನ್ ಕೆ ಹೆಚ್ಷಿಸಲು ಬಳಸಬಹುದು.

05.ಕಪ್ಪು ಒಣದ್ರಾಕ್ಷಿ:ಈ ಕಪ್ಪು ಒಣದ್ರಾಕ್ಷಿಯಲ್ಲಿ ಸುಮಾರು 52mcg ನಷ್ಟು ವಿಟಮಿನ್ ಕೆ ಸತ್ವ ಅಡಗಿದೆ. ಅಲ್ಲದೆ ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ಮೂಳೆಗಳ ಆರೋಗ್ಯ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

06.ದ್ರಾಕ್ಷಿ:ಸುಮಾರು 15 ದ್ರಾಕ್ಷಿ ಹಣ್ಣುಗಳನ್ನು ಸೇವಿಸಿದರೆ 3.5mcg ಯಷ್ಟು ವಿಟಮಿನ್ ಕೆ ದೇಹಕ್ಕೆ ದೊರೆಯುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್ ಸಿ, ಎ ಸೇರಿದಂತೆ ಅನೇಕ ಪೋಷಕಾಂಶಗಳು ಇವೆ. ಈ ಹಣ್ಣನ್ನು ಸೇವಿಸುವಾಗ ಹೆಚ್ಚು ಸಲ ನೀರಿನಲ್ಲಿ ಚೆನ್ನಾಗಿ ತೊಳೆದು ಸೇವಿಸಿ.ಈ ಮೇಲಿನ ಹಣ್ಣುಗಳಲ್ಲಿ ಮಾತ್ರವಲ್ಲ ಕಂಬಳಿ ಹಣ್ಣು, ಬ್ಲೂಬೆರಿ, ಸ್ಟ್ರಾಬೆರಿ, ತರಬೂಜ, ಆ್ಯಪಲ್ ಸೇರಿದಂತೆ ಇನ್ನು ಅನೇಕ ಹಣ್ಣುಗಳಲ್ಲಿ ವಿಟಮಿನ ಕೆ ಸತ್ವ ದೊರೆಯುತ್ತದೆ. ಇವುಗಳನ್ನು ಮಿತವಾಗಿ ನಿಮ್ಮ ಆಹಾರದ ಕ್ರಮದಲ್ಲಿ ಸೇರಿಸಿ ಅದರ ಲಾಭಗಳನ್ನು ಪಡೆಯಿರಿ.

07.ಕಿವಿ ಹಣ್ಣು:ಕಿವಿಹಣ್ಣು ಫೈಬರ್, ವಿಟಮಿನ್ ಸಿ, ಫೋಲೇಟ್, ತಾಮ್ರ, ಪೊಟ್ಯಾಸಿಯಮ್, ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಇ ಮತ್ತು ವಿಟಮಿನ್ ಕೆ ಯಂತಹ ಸಂಪೂರ್ಣ ಶ್ರೇಣಿಯ ಪೋಷಕಾಂಶಗಳನ್ನು ಹೊಂದಿದೆ. ಆರೋಗ್ಯಕರ ಮೂಳೆಗಳು, ನರಗಳು ಮತ್ತು ರೋಗನಿರೋಧಕ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ 34 mcgಯಷ್ಟಯ ವಿಟಮಿನ್ ಕೆ ಸತ್ವ ಅಡಗಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group