ಮಧುಮೇಹಕ್ಕೆ ಪರಿಹಾರ ಹೇಗೆ…?

ಡಯಾಬಿಟಿಸ್ ಮತ್ತು ಡಯಾಬಿಟಿಸ್ ಟೈಪ್ -2 ಇವೆರಡೂ ದೇಹವು ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಬಿಡುಗಡೆ ಮಾಡದಿದ್ದಾಗ ಸಂಭವಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವು ಅಸಹಜ ಮಟ್ಟವನ್ನು ತಲುಪಲು ಕಾರಣವಾಗುತ್ತದೆ. ಅಧಿಕ ತೂಕ, ಬೊಜ್ಜು, ಕುಟುಂಬದ ಇತಿಹಾಸ ಇವುಗಳ ಕಾರಣಗಳಿಂದಾಗಿ ಮಧುಮೇಹ ಸಂಭವಿಸುತ್ತದೆ. ಸಕ್ಕರೆ ಸೇವಿಸುವುದರಿಂದ ಮಧುಮೇಹ ಬರುವುದಿಲ್ಲ ಬದಲಾಗಿ ಮಧುಮೇಹ ಬಂದಮೇಲೆ ಸಕ್ಕರೆ ಸೇವನೆ ಬೇಡ. ಈ ರೋಗ ಹೆಚ್ಚಾಗದಂತೆ ತಡೆಗಟ್ಟಲು ಇರುವುದು ಇದೊಂದೇ ಸುಲಭ ಮಾರ್ಗವಾಗಿದೆ.
ಮಧುಮೇಹಕ್ಕೆ ಪರಿಹಾರ ಹೇಗೆ?
ಎರಡು ಬೆಂಡೆಕಾಯಿಯನ್ನು ಉದ್ದುದ್ದ ಕತ್ತರಿಸಿ ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಬೇಕು. ಮರುದಿನ ಬೆಳಿಗ್ಗೆ ನೆನೆಹಾಕಿದ ನೀರಿನಿಂದ ಬೆಂಡೆಕಾಯಿಯನ್ನು ತೆಗೆದು, ಲೋಳೆಯ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು ಪ್ರತಿದಿನ ಮಾಡಿಕೊಂಡು ಬಂದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಹಾಗಲಕಾಯಿ ಸಕ್ಕರೆ ಕಾಯಿಲೆಗೆ ರಾಮಭಾಣ. ಇದನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಹೆಚ್ಚಾಗಿ ಸೇವಿಸಿದರೆ ಸಕ್ಕರೆ ಅಂಶ ಬೇಗ ಕಡಿಮೆಯಾಗುತ್ತದೆ. ಅಂದರೆ ಹಾಗಲಕಾಯಿ ಪಲ್ಯ, ಜ್ಯೂಸ್ ಅಥವಾ ಹಾಗಲಕಾಯಿ ಸಾಂಬಾರ ಮಾಡಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ಕಡಿಮೆಯಾಗುತ್ತದೆ.
ಮೆಂತ್ಯೆ ಪುಡಿ, ಕರಿ ಜೀರಿಗೆ ಪುಡಿ ಹಾಗೂ ದನಿಯಾ ಪುಡಿ ಈ ಮೂರನ್ನು ಸರಿ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಪ್ರತಿ ನಿತ್ಯ ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಸಕ್ಕರೆ ಕಾಯಿಲೆ ಬಂದ ನಂತರ ಕಟ್ಟುನಿಟ್ಟಾಗಿ ಪಥ್ಯವನ್ನು ಪಾಲಿಸಿ, ನೈಸರ್ಗಿಕ ಚಿಕಿತ್ಸೆಯೆಡೆಗೆ ಸಾಗುವುದರಿಂದ ಸುಲಭವಾಗಿ ಈ ಸಕ್ಕರೆ ಕಾಯಿಲೆ ಎಂಬ ರೋಗಗಳ ಸರಪಳಿಯಿಂದ ಕಳಚಿಕೊಳ್ಳಬಹುದು.
ಆಯುರ್ವೇದ ಚಿಕಿತ್ಸೆಯನ್ನು ತೆಗೆದುಕೊಳ್ಳುವಾಗ, ತೆಗೆದುಕೊಳ್ಳುವ ಔಷಧದ ಮೇಲೆ ನಂಬಿಕೆ ಮತ್ತು ಗೌರವ ಇರಬೇಕು. ಅಲ್ಲದೆ ಪಥ್ಯವನ್ನು ಪಾಲಿಸಿ ಕ್ರಮವಾಗಿ ಔಷಧ ಪಾಲನೆ ಅವಶ್ಯಕವಾಗಿರುತ್ತದೆ.
ಜಂಕ್ ಫುಡ್, ಪಾಸ್ಟ್ ಫುಡ್ ಹಾಗು ರುಚಿಯಾಗಿದೆ ಎಂದು ಹೆಚ್ಚಾಗಿ ಹೊರಗಿನ ಆಹಾರ ತಿನ್ನುವುದು ಇವೆಲ್ಲವೂ ಕೂಡ ಸಕ್ಕರೆ ಖಾಯಿಲೆಗೆ ಕಾರಣವಾಗುತ್ತದೆ.