ಅಂಗಾಲು ಅಂಗೈ ಉರಿ ಕಾಡುತ್ತಿದ್ದರೆ ಇಲ್ಲಿವೆ ಮನೆ ಮದ್ದು!

ಅಂಗಾಲು ಅಂಗೈ ಉರಿಗೆ ಕೆಲವು ಮನೆ ಔಷಧಿಗಳನ್ನು ಈ ಕೆಳಗೆ ನೀಡಲಾಗಿದೆ:
ಚೆನ್ನಾಗಿ ಹಣ್ಣಾಗಿರುವ ನಿಂಬೆ ಹಣ್ಣಿನ ರಸವನ್ನು ಶುಭ್ರವಾದ ನೀರಿಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ದೂರವಾಗುವುದು.
ಅಂಗೈ ಮತ್ತು ಅಂಗಾಲುಗಳಿಗೆ ತುಪ್ಪವನ್ನು ಹಚ್ಚಿ ಉಜ್ಜಬೇಕು ಆಗ ಒಳ್ಳೆಯ ಫಲಿತಾಂಶ ದೊರಕುವುದು.
ಬಾಳೆಹಣ್ಣನ್ನು ಮಜ್ಜಿಗೆಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ಕಡಿಮೆಯಾಗುವುದು.
ಎಳನೀರು ಮತ್ತು ಸುಣ್ಣದ ತಿಳಿನೀರು ಅರಿಶಿನಪುಡಿ ಬೆರೆಸಿ ಅಂಗೈ ಮತ್ತು ಅಂಗಾಲುಗಳಿಗೆ ತಿಕ್ಕುವುದರಿಂದ ರೋಗ ನಿವಾರಣೆಯಾಗುವುದು
ಒಂದು ಲೋಟ ತಣ್ಣೀರಿಗೆ ಒಂದು ಹಳದಿ ಬಣ್ಣದ ದಪ್ಪ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು ಒಂದು ವಾರದವರೆಗೆ ಕುಡಿದರೆ ಅಂಗೈ, ಅಂಗಾಲು ಉರಿ ಶಮನವಾಗುತ್ತದೆ
ಹಸಿ ಈರುಳ್ಳಿಯ ಸೇವನೆಯಿಂದ ಅಂಗೈ ಅಂಗಾಲು ಉರಿ ಯನ್ನು ತಪ್ಪಿಸಬಹುದು.
ಮಜ್ಜಿಗೆಗೆ ಬೆಟ್ಟದ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಯುವುದರಿಂದ ಅಂಗೈ ಅಂಗಾಲು ಉರಿಯನ್ನು ತಪ್ಪಿಸಬಹುದು.
ಸೌತೇಕಾಯಿ ತಿರುಳಿನಿಂದ ಅಂಗಾಲುಗಳನ್ನು ತಿಕ್ಕುವುದರಿಂದ ಉರಿ ಶಾಂತವಾಗುವುದು ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು.
ಶುಂಠಿ ಕಷಾಯ: ಶುಂಠಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಪಾದದ ನೋವನ್ನು ನಿವಾರಿಸಲು ಶುಂಠಿ ಸಹಾಯ ಮಾಡುತ್ತದೆ. ಶುಂಠಿ ಕಷಾಯವನ್ನು ಕುಡಿಯುವುದರಿಂದ ಪಾದದ ನೋವು ಮತ್ತು ಉರಿಯೂತವನ್ನು ನಿವಾರಿಸಬಹುದು.
ಅರಿಶಿನ: ಅರಿಶಿನವನ್ನು ತರಕಾರಿ ರುಚಿಯನ್ನು ಹೆಚ್ಚಿಸಲು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ . ಅದೇ ಅರಿಶಿನದಲ್ಲಿ ಉರಿಯೂತವನ್ನು ಕಡಿಮೆಗೊಳಿಸುವ ಗುಣಗಳಿದ್ದು, ಇದರ ಸೇವನೆಯು ಪಾದದ ನೋವು ಕಡಿಮೆ ಮಾಡುತ್ತದೆ. ಇದಕ್ಕಾಗಿ ನೀವು ಅರಿಶಿನ ಹಾಲು ಕುಡಿಯುವ ಮೂಲಕ ಪರಿಹಾರ ಕಾಣಬಹುದು.
ಅಂಗೈ, ಅಂಗಾಲು ಉರಿಯುತ್ತಿದ್ದರೆ ಊಟದಲ್ಲಿ ಹಸಿ ಈರುಳ್ಳಿಯನ್ನು ಹೆಚ್ಚು ಹೆಚ್ಚು ಸೇವಿಸಿ.
ಗಮನಿಸಿ: ಅಂಗೈ ಅಂಗಾಲು ಉರಿಗೆ ಕಾರಣ ದೇಹದಲ್ಲಿರುವ ಉಷ್ಣ ಹೀಗಾಗಿ ತಂಪಾದ ಪದಾರ್ಥಗಳನ್ನು ಸೇವಿಸಬೇಕು ನೀರಿನ ಅಂಶ ಹೆಚ್ಚಾಗಿರುವ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ರೋಗ ಜಾಸ್ತಿಯಾಗದು.
ಒಳ್ಳೆಯ ವಿಷಯ… ಬಹಳ ಚೆನ್ನಾಗಿದೆ….ಉತ್ತಮ ಸಮಾಜದ ಬೆಳಾಕಾಗಿ ಹೊರಹೊಮ್ಮಿದ್ದೀರಿ..