ಅಗತ್ಯಕ್ಕಿಂತ ಹೆಚ್ಚು ಪ್ರೋಟೀನ್ ಆಹಾರ ದಿನನಿತ್ಯ ಸೇವಿಸಬಾರದು!

ದಿನಕ್ಕೆ ಒಬ್ಬ ಪುರುಷನಿಗೆ ಸರಾಸರಿ 56 ಗ್ರಾಂ ನಷ್ಟು ಮತ್ತು ಮಹಿಳೆಗೆ ಸರಾಸರಿ 46 ಗ್ರಾಂ ನಷ್ಟು ಪ್ರೋಟೀನ್ ಬೇಕು. ಇದಕ್ಕಿಂತ ಅಧಿಕ ಮಟ್ಟದಲ್ಲಿ ಪ್ರೋಟೀನ್ ತೆಗೆದುಕೊಂಡರೆ ಅದು ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಅಗತ್ಯಕ್ಕಿಂತ ಹೆಚ್ಚು ಪ್ರೋಟೀನ್ ದಿನನಿತ್ಯ ಸೇವಿಸುವುದರಿಂದ ದೇಹಕ್ಕಾಗುವ ತೊಂದರೆಯನ್ನು ಇಲ್ಲಿ ನೀಡಲಾಗಿದೆ…
#.ಜಠರ ಸಂಬಂಧಿ ರೋಗಗಳಿಗೆ ಪ್ರಚೋದಕ:ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚು ಪ್ರೋಟೀನ್ ಅಂಶವಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರಿಸುವಿಕೆ ಕಾಣಿಸಿಕೊಳ್ಳುತ್ತದೆ.ಇದಕ್ಕೆ ಕಾರಣ ಅಗತ್ಯವಿರುವ ನಾರಿನಂಶ ತೆಗೆದುಕೊಳ್ಳದಿರುವುದು,ಇದರಿಂದ ಜಠರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು.
#.ದೇಹದ ತೂಕದ ಹೆಚ್ಚಳಕ್ಕೆ ಕಾರಣವಾಗಬಹುದು:ಪ್ರೋಟೀನ್ ಅಂಶ ಹೇರಳವಾಗಿರುವ ಆಹಾರವನ್ನು ಸೇವಿಸುವುದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು ನಿಜ.ಆದರೆ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಆಹಾರ ತೆಗೆದುಕೊಳ್ಳುವುದು ಕೂಡ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.ಪ್ರೋಟೀನ್ ಹೇರಳ ಆಹಾರ ಅತಿ ಬೇಗ ದೇಹದ ತೂಕ ಇಳಿಕೆಗೆ ಸಹಾಯಕವಾಗುತ್ತದೆ ಆದರೆ ಮೊಟ್ಟೆಯ ಬಿಳಿಭಾಗ ಮತ್ತು ಪ್ರೋಟೀನ್ ಡ್ರಿಂಕ್ಸ್ ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚುತ್ತದೆ.
#.ಮೂಡ್ ನ ಮೇಲೆ ಪರಿಣಾಮ ಬೀರಬಹುದು:ನಾವು ಸೇವಿಸುವ ಆಹಾರ ನಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.ನಮ್ಮ ಮನಸ್ಸನ್ನು ನಿಯಂತ್ರಿಸಲು ಮೆದುಳಿಗೆ ಸೆರೋಟೋನಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡಲು ಕಾರ್ಬೋಹೈಡ್ರೇಟ್ ನ ಅವಶ್ಯಕತೆ ಇರುತ್ತದೆ.ಆದರೆ ನಾವು ಈ ಆಹಾರವನ್ನು ಸೇವಿಸದಿದ್ದಲ್ಲಿ ಮನಸ್ಸಿಗೆ ಕಿರಿಕಿರಿ ಅಥವಾ ಖಿನ್ನತೆ ಕೂಡ ಆವರಿಸಬಹುದು.
#.ನಿರ್ಜಲೀಕರಣವಾಗಬಹುದು:ಪ್ರೋಟೀನ್ ಅಧಿಕವಾಗಿರುವ ಆಹಾರವು ನೀರಡಿಕೆಯನ್ನು ಹೆಚ್ಚಿಸುತ್ತದೆ.ಆದರೆ ಅಧ್ಯಯನದ ಪ್ರಕಾರ ಅತಿಯಾಗಿ ಪ್ರೋಟೀನ್ ಅಂಶ ದೇಹಕ್ಕೆ ಸೇರುವುದರಿಂದ ದೇಹದಲ್ಲಿ ನಿರ್ಜಲೀಕರಣ(ಡಿ ಹೈಡ್ರೇಶನ್)ಉಂಟಾಗಬಹುದು.ದೇಹದಲ್ಲಿ ಪ್ರೋಟೀನ್ ಅಧಿಕವಾದಾಗ ಹೆಚ್ಚಿನ ನೈಟ್ರೋಜೆನ್ ಅನ್ನು ಹೊರಹಾಕಲು ಕಿಡ್ನಿ ಹೆಚ್ಚು ಪ್ರಯತ್ನಿಸುವುದರಿಂದ ಪದೇ ಪದೇ ಮೂತ್ರ ವಿಸರ್ಜನೆ ಮತ್ತು ಹೆಚ್ಚು ನೀರಿನ ಬಯಕೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
#.ಬಾಯಿ ದುರ್ವಾಸನೆ:ಹೌದು,ಕಾರ್ಬೋಹೈಡ್ರೇಟ್ ಆಹಾರವನ್ನು ಕಡಿಮೆ ಸೇವಿಸಿ ಪ್ರೋಟೀನ್ ಹೇರಳ ಆಹಾರವನ್ನು ಹೆಚ್ಚು ಸೇವಿಸುವುದರಿಂದ,ದೇಹವು ಕೆಟೊಸಿಸ್ ಎಂಬ ಹಂತವನ್ನು ತಲುಪುತ್ತದೆ.ಅಂದರೆ ಇದು ದೇಹ ಶಕ್ತಿಗೋಸ್ಕರ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಬಳಸಿಕೊಳ್ಳುವ ಸ್ಥಿತಿ.ಈ ಸ್ಥಿತಿಯು ದೇಹದ ತೂಕ ಇಳಿಸಿಕೊಳ್ಳುವಲ್ಲಿ ಸಹಾಯಕವಾಗಬಹುದು ಆದರೆ ಬಾಯಿ ದುರ್ವಾಸನೆಗೆ ಕಾರಣವಾಗುತ್ತದೆ.ದೇಹದ ತೂಕ ಅತಿ ಬೇಗ ಕಳೆದುಕೊಳ್ಳುವುದರಿಂದ ಕೆಟೊನಸ್ ಉತ್ಪತ್ತಿಯಾಗಿ ಬಾಯಿ ವಾಸನೆ ಪ್ರಾರಂಭವಾಗುತ್ತದೆ.ನೀವು ಬ್ರಷ್ ಮಾಡಿ,ಪ್ಲಾಸ್ ಬಳಸಿ ಎಷ್ಟೇ ಸ್ವಚ್ಛಗೊಳಿಸಿದರೂ ಬಾಯಿ ದುರ್ವಾಸನೆ ಹೋಗಲಾಡಿಸುವುದು ಕಷ್ಟ.
#.ಕಿಡ್ನಿಗೆ ತೊಂದರೆ:ಪ್ರೋಟೀನ್ ದೇಹಕ್ಕೆ ಹೋಗುವುದರ ಜೊತೆಗೆ ದೇಹಕ್ಕೆ ಸೇರುತ್ತದೆ. ನಂತರ ಇದನ್ನು ಕಿಡ್ನಿಯು ರಕ್ತದಿಂದ ಫಿಲ್ಟರ್ ಮಾಡುತ್ತದೆ.ಅಗತ್ಯವಿರುವಷ್ಟು ಪ್ರೋಟೀನ್ ದೇಹಕ್ಕೆ ಸೇರುವುದಾಗ ಕಿಡ್ನಿಯು ಹೆಚ್ಚಿನ ನೈಟ್ರೋಜನ್ ಅನ್ನು ಮೂತ್ರದ ಮೂಲಕ ಹೊರಹಾಕುತ್ತದೆ.ಆದರೆ ಪ್ರೋಟೀನ್ ಅಂಶವಿರುವ ಆಹಾರ ಅಗತ್ಯಕ್ಕಿಂತ ಹೆಚ್ಚು ದೇಹಕ್ಕೆ ಸೇರಿದಾಗ ನೈಟ್ರೋಜೆನ್ ಅನ್ನು ಹೊರಹಾಕಲು ಕಿಡ್ನಿಯ ಮೇಲೆ ಒತ್ತಡ ಬೀರುತ್ತದೆ.ಇದನ್ನು ತಡೆಯದಿದ್ದಲ್ಲಿ ಕಿಡ್ನಿಗೆ ಹಾನಿಯಾಗುತ್ತದೆ.