ಅಧಿಕ ಪ್ರೋಟಿನ್ ಇರುವ ಆಹಾರಗಳು..!

ಸಸ್ಯಹಾರಿ ಜನರು ತಮ್ಮ ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಪ್ರೋಟೀನ್ ಇರುವ ಆಹಾರಗಳು ಯಾವುದು ಎಂದು ಎಲ್ಲರಿಗೂ ತಿಳಿದಿರಬೇಕು. ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಶರೀರವು ಸದೃಢವಾಗಲು ಸಹಾಯವಾಗುತ್ತದೆ. ಅದು ಯಾವುವು ಎಂದರೆ,

ಬಾದಾಮಿ : ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಾದಾಮಿಯನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್ ಮತ್ತು ಪೌಷ್ಟಿಕತೆ ದೊರೆಯುತ್ತದೆ.ಇದರಿಂದ ದೇಹ ಸದೃಢವಾಗುತ್ತದೆ.

ಗ್ರೀಕ್ ಯೋಗರ್ಟ್ : ಇಂದು ಒಂದು ರೀತಿಯ ಮೋಸರಾಗಿದೆ.ಇದು ತಿನ್ನಲೂ ತುಂಬಾ ಸ್ವಾದಿಷ್ಟವಾಗಿದ್ದು ಶರೀರದಲ್ಲಿ ಪೌಷ್ಟಿಕತೆಯ ಕೊರತೆಯನ್ನು ಕಡಿಮೆ ಮಾಡಲು ಒಳ್ಳೆಯ ಆಹಾರವಾಗಿದೆ.ಫ್ಯಾಟ್ ಇರದ ಈ ಗ್ರೀಕ್ ಮೋಸರಿನಲ್ಲಿ 48% ಪ್ರೊಟೀನ್ ಇರುತ್ತದೆ.

ಒಟ್ಸ್ : ಕಳೆದ ಕೆಲವು ವರ್ಷಗಳಿಂದ ಒಟ್ಸ್ ಅನ್ನು ಆಹಾರದಲ್ಲಿ ಉಪಯೋಗ ಮಾಡುವ ಪದ್ಧತಿ ತುಂಬಾ ವೇಗವಾಗಿ ಪ್ರಚಲಿತವಾಗಿದೆ.ಇದರಲ್ಲಿ ಪ್ರೋಟೀನ್, ಫೈಬರ್, ಮೆಗ್ನೀಷಿಯಂ, ಮ್ಯಾಂಗನೀಸ್, ವಿಟಮಿನ್ -ಬಿ1 ಈ ರೀತಿಯ ಅನೇಕ ಪೋಷಕಾಂಶಗಳು ಇದರಲ್ಲಿ ದೊರೆಯುತ್ತದೆ.

ಕಡಲೆಕಾಯಿ : ಇದು ಪ್ರೋಟೀನ್ಸ್ ಗಳಿಂದ ಸಮೃದ್ಧವಾಗಿದೆ.100 ಕಡಲೆಕಾಯಿಯಲ್ಲಿ 24 ಗ್ರಾಂ ಪ್ರೋಟೀನ್ ಇರುತ್ತದೆ.ಇದನ್ನು ಒಂದು ವೇಳೆ ಚಿಕನ್ ಗೆ ಹೋಲಿಸಿದರೆ 100 ಗ್ರಾಂ ಚಿಕೆನ್ ಗೆ 15-16 ಗ್ರಾಂ ಪ್ರೊಟೀನ್ ಇರುತ್ತದೆ.

ಪನ್ನೀರ್ : ಪ್ರೊಟೀನ್ಸ್ ಇಂದ ಸಮೃದ್ಧವಾದ ಪದಾರ್ಥವೆಂದರೆ ಪನ್ನೀರ್. ಇದರಲ್ಲಿ ಫ್ಯಾಟ್ ಮತ್ತು ಕ್ಯಾಲೋರಿ ಅಂಶವು ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಫಾಸ್ಪರಸ್,ಸಲಿನಿಯನ್, ವಿಟಮಿನ್ ಬಿ12 ಅನೇಕ ರೀತಿಯ ಪೌಷ್ಟಿಕ ಪದಾರ್ಥಗಳನ್ನು ಹೊಂದಿದೆ.100 ಗ್ರಾಂ ಪನ್ನೀರ್ ನಲ್ಲಿ 10-12ಗ್ರಾಂ ಪ್ರೊಟೀನ್ ಇದ್ದು 90 ರಷ್ಟು ಕ್ಯಾಲೋರಿ ಇರುತ್ತದೆ.

ರಾಜ್ಮ ಬೀನ್ಸ್ : ಪ್ರೊಟೀನ್ ಇಂದ ಸಮೃದ್ಧವಾದ ಆಹಾರ ಪದಾರ್ಥವೆಂದರೆ ರಾಜ್ಮ ಬೀನ್ಸ್. ಇದರ ಪಲ್ಯ ಮತ್ತು ಸೂಪ್ ಕುಡಿಯುವುದರಿಂದ ದೇಹಕ್ಕೆ ಪ್ರೊಟೀನ್ ಸಿಗುತ್ತದೆ.

ಬ್ರೋಕಲಿ : ಜೀವಸತ್ವ, ವಿಟಮಿನ್ ಕೆ, ಫೈಬರ್ ಮತ್ತು ಪ್ರೋಟೀನ್ ವರ್ಧಕವಾಗಿದೆ. ಬ್ರೋಕಲಿ ಇದು ಬಯೋ ಆಕ್ಟಿವ್ ಪೋಷಕ ತತ್ವಗಳ ಸಂಗ್ರಹವಾಗಿದೆ.ಇದರ ಆಹಾರ ಸೇವನೆಯಿಂದ ಕಡಿತ ರೋಗದಿಂದ ಬಚಾವ್ ಮಾಡಲು ಸಹಾಯವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಅಂಶವಿದೆ.100 ಗ್ರಾಂ ನಲ್ಲಿ 4 ಗ್ರಾಂ ಪ್ರೋಟೀನ್ ಮತ್ತು ಕೇವಲ ಮೂವತ್ತೊಂದು ಕ್ಯಾಲೋರಿ ಇರುತ್ತದೆ.

ನೆನೆಸಿದ ಕಡಲೆ: 100 ಗ್ರಾಂ ನೆನೆಸಿದ ಕಡಲೆಯನ್ನು ತಿನ್ನುವುದರಿಂದ ದೇಹಕ್ಕೆ 50 ಗ್ರಾಂ ಪ್ರೋಟೀನ್ ದೊರೆಯುವುದು.ಇದು ಚಿಕನ್ ಗಿಂತಲೂ ಎರಡು ಪಟ್ಟಾಗಿದೆ. ಆದ್ದರಿಂದ ನೆನೆಸಿದ ಕಡಲೆ ಕಾಯಿಯನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

ವಿನುವ ಬೀಜಗಳು : ಸದ್ಯಕ್ಕೆ ಜಗತ್ತಿನಾದ್ಯಂತ ಸೂಪರ್ ಫೂಡ್ ಆಗಿದೆ. ಇದು ಅನೇಕ ರೀತಿಯ ಜೀವಸತ್ವಗಳನ್ನು ಖನಿಜ ಮತ್ತು ಫೈಬರ್ ಗಳಿಂದ ಸಮೃದ್ಧವಾಗಿದೆ.ಇದರಲ್ಲಿ ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿರುತ್ತದೆ.ಒಂದು ಕಪ್ ಬೇಯಿಸಿದ ವಿನುವನಲ್ಲಿ 22 ಗ್ರಾಂ ಕ್ಯಾಲೋರಿ ಇದ್ದು 8 ಗ್ರಾಂ ಪ್ರೊಟೀನ್ ಇರುತ್ತದೆ.

  • ಅತಿ ಹೆಚ್ಚು ಶಕ್ತಿವರ್ಧಕ ಆಹಾರಗಳು ಯಾವುದೆಂದರೆ ಮೀನು, ಮೊಟ್ಟೆ, ಮಾಂಸ. ಇವುಗಳ ಸಾಕಷ್ಟು ಪ್ರೋಟೀನ್ ಗಳಿಂದ ತುಂಬಿಕೊಂಡಿರುತ್ತದೆ.
Share this Article
Subscribe
Notify of
guest
0 Comments
Inline Feedbacks
View all comments
error:

Join Our

Group