ಜುಲೈ ತಿಂಗಳಲ್ಲಿ ಬಿತ್ತನೆ ಮಾಡಬಹುದಾದ ಬೆಳೆ!..

ನಾವೀಗ ಜುಲೈ ತಿಂಗಳ ಆರಂಭದಲ್ಲಿದ್ದೇವೆ. ಸಾಮಾನ್ಯವಾಗಿ ಇದು ಉತ್ತಮ ಮಳೆ ಬೀಳುವ ಸಮಯ. ಜೂನ್ ಅಂತ್ಯ ಮತ್ತು ಜುಲೈ ಆರಂಭದ ಎರಡು ವಾರಗಳ ಕಾಲ ದೊಡ್ಡ ಮಳೆಗಳು ಬಿದ್ದು, ಕೃಷಿಗೆ ಅನುಕುಲಕರ ವಾತಾವರಣ ನಿರ್ಮಿಸಿಕೊಡುತ್ತವೆ.
ಹೀಗಾಗಿ ಈ ಅವಧಿಯಲ್ಲಿ ಮಳೆಗೆ ಹೊಂದಿಕೊಂಡು, ಹೆಚ್ಚು ನೀರುಂಡರೂ ಸಹಿಸಿಕೊಂಡು ಬೆಳೆಯುವ ಸಾಮರ್ಥ್ಯವಿರುವ ತರಕಾರಿ ಬೆಳೆಗಳನ್ನು ಬೆಳೆಯಬೇಕು.ಕರ್ನಾಟಕದಲ್ಲಿ ಜೂನ್ ಮತ್ತು ಜುಲೈ ಮಾಸಗಳಲ್ಲಿ ಸಾಮಾನ್ಯವಾಗಿ ಟೊಮೇಟೊ, ಬದನೆ, ಬೆಂಡೆಕಾಯಿ, ಹಸಿ ಮೆಣಸಿನಕಾಯಿ, ಕುಂಬಳಕಾಯಿ, ಸೋರೆಕಾಯಿ, ಸೌತೆಕಾಯಿ, ಈರುಳ್ಳಿ, ವಿವಿಧ ಸೊಪ್ಪು ಹಾಗೂ ಆಹಾರ ಧಾನ್ಯಗಳ ಪೈಕಿ ನವಣೆ ಮತ್ತು ಹಲಸಂದಿ ಬೆಳೆ ಬಿತ್ತನೆ ಮಾಡಲು ಸೂಕ್ತ ಸಮಯವಾಗಿದೆ ಇದೀಗ ಬದನೆ ಕಾಯಿ ಬೆಳೆಯ ಬಗ್ಗೆ ತಿಳಿಯೋಣ.
- ಬದನೆ ಕಾಯಿ ಬೆಳೆಯುವ ಬಗ್ಗೆಗೆ
ಉತ್ತಮ ವಾತಾವರಣ: ಬದನೆ ಉಷ್ಣವಲಯದ ಬೆಳೆ. ಹೆಚ್ಚು ಉಷ್ಣತೆಯಿರುವ ದೀರ್ಘಾವಧಿಯ ಅವಶ್ಯಕತೆಯಿದೆ.ಇದು ಶೀತವನ್ನು ಸಹಿಸುವುದಿಲ್ಲ.
- ತಾಪಮಾನ
ಹಗಲು 35°C ಗಿಂತ ಕಡಿಮೆ ತಾಪಮಾನ ಮತ್ತು ರಾತ್ರಿ 16°C ಗಿಂತ ಹೆಚ್ಚಿನ ತಾಪಮಾನವನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ.
15°C ಗಿಂತ ಕಡಿಮೆ ತಾಪಮಾನವಿದ್ದರೆ,ಬೆಳೆ ಬೆಳವಣಿಗೆ ಮತ್ತು ಕಾಯಿಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
13-21°C ವರೆಗಿನ ತಾಪಮಾನವು ಬದನೆಕಾಯಿ ಬೆಳೆಗೆ ಸೂಕ್ತವಾಗಿದೆ.
ಕಡಿಮೆ ಆರ್ದ್ರತೆ ಮತ್ತು ಹೆಚ್ಚಿನ ಉಷ್ಣತೆಯು ಸಾಕಷ್ಟು ಹೂ ಉದುರುವಿಕೆ ಮತ್ತು ಕಾಯಿಯ ಕಡಿಮೆ ಉತ್ಪಾದನೆಗೆ ಕಾರಣವಾಗಬಹುದು.
- ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ ಸರಾಸರಿ 600-1000 ಮಿಲಿ.ಮೀ ಮಳೆಬೇಕುವಿಶೇಷವಾಗಿ ಹೂಬಿಡುವ ಮತ್ತು ಕಾಯಿಯಾಗುವ ಸಮಯದಲ್ಲಿ ಅತಿಯಾದ ಮಳೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ.ಅತಿಯಾದ ಮಳೆಯು ಎಲೆ ಉದರುವ, ಬಾಡುವ ಮತ್ತು ಸಸ್ಯ ಕೊಳೆಯುವುದಕ್ಕೆ ಕಾರಣವಾಗುತ್ತದೆ
- ಉತ್ತಮ ಮಣ್ಣು ವಿಧ
ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಮರಳು ಮಿಶ್ರಿತ ಮಣ್ಣು ಮತ್ತು ಜೇಡಿ ಮಣ್ಣು ಉತ್ತಮ .ಉತ್ತಮ ನೀರು ಹಿಂಗುವ ವ್ಯವಸ್ಥೆ, ಕಾಲುವೆ ಮತ್ತು ಫಲವತ್ತಾದ ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತವಾಗಿದೆ.
- ಜಮೀನಿನ ತಯಾರಿ:
ಜಮೀನಿನ ತಯಾರಿ ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ
- ಸಾಲು-ಬದು ತಯಾರಿ:
ಮಡಿ ತಯಾರಿಕೆ- ಟ್ರಾಕ್ಟರ್ ಸಹಾಯದಿಂದ 2 ಅಡಿ ಅಥವಾ 3 ಅಡಿ ಅಗಲ ಮತ್ತು ಅಂತರದಲ್ಲಿ ಬದುಗಳನ್ನು ನಿರ್ಮಿಸಿ