ಧ್ಯಾನದ ಕೆಲವೊಂದು ಪ್ರಯೋಜಗಳು;

ಒತ್ತಡ ನಿವಾರಣೆಗಾಗಿ ಧ್ಯಾನವನ್ನು ಅಭ್ಯಾಸ ಮಾಡುವುದು ಈ ದಿನಗಳಲ್ಲಿ ಆರೋಗ್ಯಕಾರಿ ಅಂಶಗಳಲ್ಲಿ ಒಂದು. ಪ್ರತಿಯೊಬ್ಬರೂ ತೂಕ ಇಳಿಸುವುದಕ್ಕಾಗಿ, ಒತ್ತಡ ನಿವಾರಣೆಗಾಗಿ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದಾರೆ. ಧ್ಯಾನವನ್ನು ಸರಿಯಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮಹತ್ವಪೂರ್ಣವಾಗಿದೆ. ನೀವು ಇದನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ಮಾತ್ರವೇ ಧ್ಯಾನ ನಿಮಗೆ ಪರಿಣಾಮಕಾರಿಯಾಗಿರುವುದು. ಇಲ್ಲದಿದ್ದರೆ ಇದು ಬರಿಯ ವ್ಯಾಯಾಮ ಎಂದೆನಿಸುತ್ತದೆ.
ನೀವು ಧ್ಯಾನವನ್ನು ಮಾಡುವಾಗ ಪೂರ್ಣ ಏಕಾಗ್ರತೆಯಲ್ಲಿರುವುದು ಅತೀ ಅಗತ್ಯವಾಗಿದೆ. ಫೋನ್ ಕರೆಗಳನ್ನು, ಇಮೇಲ್ ಸ್ವೀಕರಿಸಲು, ಸಂದೇಶ ರವಾನಿಸಲು ಹೀಗೆ ಪ್ರತೀ ಐದು ನಿಮಿಷಗಳಿಗೊಮ್ಮೆ ನಿಮ್ಮ ಫೋನ್ ಅನ್ನು ಪರಿಶೀಲಿಸುವ ಚಂಚಲ ಮನಸ್ಸು ನಿಮ್ಮದಾಗಿರಬಾರದು. ಪರಿಪೂರ್ಣ ಏಕಾಗ್ರತೆ ಧ್ಯಾನಕ್ಕೆ ಅತೀ ಅಗತ್ಯವಾದುದು. ಹಾಗಿದ್ದರೆ ಇಂದಿನ ಲೇಖನದಲ್ಲಿ ಧ್ಯಾನದ ಕೆಲವೊಂದು ಪ್ರಯೋಜನಗಳನ್ನು ಅರಿತುಕೊಳ್ಳೋಣ..
01.ಏಕಾಗ್ರತೆಯನ್ನು ಹೆಚ್ಚಿಸಲು:ಬಹುತೇಕ ವ್ಯಕ್ತಿಗಳು ತಮಗೆ ಯಾವುದೇ ಒಂದು ವಿಷಯದ ಕುರಿತು ದೀರ್ಘಕಾಲದವರೆಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಸಾದ್ಯವಾಗುವುದಿಲ್ಲವೆಂದು ಆಗಾಗ್ಗೆ ದೂರುತ್ತಿರುತ್ತಾರೆ. ಇಂತಹ ಜನರಿಗೆ ಖಂಡಿತವಾಗಿಯೂ ಕೂಡ ಧಾನ್ಯವೆಂದರೆ ಏನೆಂಬುದು ಗೊತ್ತಿಲ್ಲವೆಂದು ಇದರಿಂದ ತಿಳಿದುಬರುತ್ತದೆ. ಇಂತಹ ಜನರು ಧ್ಯಾನವನ್ನು ನಿಯಮಿತವಾಗಿ ಆಚರಿಸಿದಲ್ಲಿ, ಯಾವುದೇ ಒಂದು ವಿಚಾರದ ಕುರಿತೇ ಆಗಿರಲಿ, ಅವರಿಗೆ ಮನಸ್ಸನ್ನು ಕೇಂದ್ರೀಕರಿಸಲು ಕಷ್ಟವಾಗದು.
02.ಮನಶಾಂತಿಯನ್ನು ನೀಡುತ್ತದೆ:ಮನ ಶಾಂತಿಯನ್ನು ನೀಡುತ್ತದೆ ಧ್ಯಾನದ ಮೂಲಕ ನೀವು ಜೀವನದಲ್ಲಿ ಶಾಂತಿ ಮತ್ತು ಸಮಾಧಾನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇವೆಲ್ಲವೂ ಕೂಡ ಧ್ಯಾನವನ್ನು ಕೈಗೊಂಡಾಗ ಮಾತ್ರ ನಿಮಗೆ ವೇದ್ಯವಾಗುತ್ತದೆ.
03.ಚೈತನ್ಯ ತುಂಬುತ್ತದೆ: ನಿಮ್ಮ ದೇಹ ಹಾಗೂ ಮನಸ್ಸು ಧ್ಯಾನದ ಮೂಲಕ ನಿಯಮಿತವಾಗಿ ವಿಶ್ರಮಿಸಿದಾಗ, ಅವು ದಿನದ ಮುಂದಿನ ಮಹತ್ಕಾರ್ಯಗಳಿಗಾಗಿ ಚೈತನ್ಯವನ್ನು ಪಡೆದುಕೊಂಡು ಆ ಕಾರ್ಯಸಾಧನೆಗೆ ಸಿದ್ಧವಾಗುತ್ತವೆ. ಹೀಗೆ ಧ್ಯಾನಿಸುವುದರ ಮೂಲಕ, ನೀವು ಚೈತನ್ಯವನ್ನು ಉಳಿಸಿ ಕೊಂಡಿರಬಹುದು ಹಾಗೂ ಅದನ್ನು ಎಲ್ಲಾ ಸರಿಯಾದ ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದು.
05.ಒತ್ತಡ ನಿವಾರಣೆ :ಧ್ಯಾನದಿಂದ ಒತ್ತಡ ನಿವಾರಣೆಯಾಗುತ್ತದೆ. ನೀವು ಧ್ಯಾನ ಮಾಡಿದಾಗ ಮನದಲ್ಲಿರುವ ಒತ್ತಡ ನಿವಾರಣೆಯಾಗಿ ದೇಹ ಹಗುರವಾಗುತ್ತದೆ. ನಿಮ್ಮ ದೇಹದಲ್ಲಿರುವ ಒತ್ತಡವನ್ನುಂಟುಮಾಡುವ ಹಾರ್ಮೋನುಗಳು ಹೊರಹೋಗುತ್ತವೆ. ಧ್ಯಾನವನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ಮಾತ್ರವೇ ಈ ಅನುಭವ ನಿಮಗುಂಟಾಗುತ್ತದೆ.
06 ಮೊದಲಿಗೆ ಆಳವಾದ ವಿಶ್ರಾಂತಿಯು ದೊರೆತು ಒತ್ತಡಗಳಿಂದ ಮುಕ್ತನಾಗುತ್ತಾನೆ. ಆತನು 10 ನಿಮಿಷ ಧ್ಯಾನ ಮಾಡಲಿ ಅದು ಪರಿಣಾಮಕಾರಿಯಾಗಿರುತ್ತದೆ.
07. ಖಿನ್ನತೆ, ಚಿಂತೆ, ಭಯದಿಂದ ಮನಸ್ಸು ದೂರವಾಗುತ್ತದೆ. ಕೋಪ ನಿಯಂತ್ರಣಕ್ಕೆ ಬರುತ್ತದೆ.
08. ಧ್ಯಾನದ ವಿಶ್ರಾಂತಿಯುತ ಆನಂದ, ಶಾಂತತೆಯಿಂದಾಗಿ, ದೇಹದಲ್ಲಿ ಅಟ್ರಿನಾಲಿನ್ ಮತ್ತಿತರ ಸೆರೊಟೊನಿನ್ ಮತ್ತು ಎಂಡೊಪಿನ್ಗಳ ಸ್ರವಿಕೆಯಾಗುತ್ತದೆ. ಹಾಗು ಈ ರೀತಿಯ ರಾಸಾಯನಿಕ ಸ್ರವಿಕೆಯಿಂದಾಗಿ ಶರೀರವು ಪ್ರಪುಲ್ಲಿತವಾಗಿ, ರೋಗ ನಿರೋಧಕ ಶಕ್ತಿ ವೃದ್ಧಿಗೊಂಡು, ಹೃದಯಬಡಿತ ಆರೋಗ್ಯದ ಹಂತದಲ್ಲಿದ್ದು, ಆಮ್ಲಜನಕವು ಹೆಚ್ಚಾಗಿ ದೇಹಕ್ಕೆ ದೊರೆತು, ರಕ್ತಚಲನೆ ಬಾಧರಹಿತವಾಗಿ ಚಾಲನೆಗೊಂಡು ರಕ್ತ ಒತ್ತಡವು ಸಾಮಾನ್ಯ ಸ್ಥಿತಿಗೆ ಬರುತ್ತದೆ. ಮಾಂಸ ಖಂಡಗಳ ಬಿಗಿವು ಸಡಿಲವಾಗುತ್ತದೆ. ದೇಹವು ಸಮತೋಲನ ಸ್ಥಿತಿಗೆ ಬರುತ್ತದೆ.
09. ರಕ್ತದಲ್ಲಿನ ಲಾಕ್ಟೆಟ್ನ್ನು ಕಡಿಮೆ ಮಾಡುತ್ತದೆ.
10. ಮೈಗ್ರೆನ್ನಂತಹ ತಲೆನೋವು ವಾಸಿಯಾಗುತ್ತದೆ.
11. ನಿದ್ರಾರಹಿತತೆ ದೂರವಾಗಿ, ಸುಖನಿದ್ರೆ ಪ್ರಾಪ್ತಿಯಾಗುತ್ತದೆ ಮತ್ತು ಸುಂದರ ಸ್ವಪ್ನಗಳನ್ನು ಕಾಣುತ್ತಾರೆ.
12. ಹೃದಯ ರೋಗವನ್ನು ಕಡಿಮೆ ಮಾಡುತ್ತದೆ.
13. ದೇಹ ತೂಕವನ್ನು ಇಳಿಸುತ್ತದೆ.
14. ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸುತ್ತದೆ.
15. ಮಾನಸಿಕ ನಿಯಂತ್ರಣ ಹೆಚ್ಚಿಸುತ್ತದೆ.
16. ಬುದ್ಧಿಮಾಂಧ್ಯತೆ ಮತ್ತು ಮರೆವು ನಿವಾರಿಸುತ್ತದೆ.
17. ದುಶ್ಚಟಗಳಿಂದ ಮುಕ್ತಿ ದೊರಕಿಸುತ್ತದೆ.
18. ನಕರಾತ್ಮಕ ಯೋಚನೆಗಳಿಂದ ವಿಮುಕ್ತಿ ನೀಡಿಸುತ್ತದೆ.
19. ದೇಹದ ಕಾಂತಿ ಮತ್ತು ಮುಖದ ಪ್ರಸನ್ನತೆ ತೇಜಸ್ಸು ಹೆಚ್ಚಿಸುತ್ತದೆ.
20. ಕಣ್ಣಿನ ದೃಷ್ಟಿ ಸರಿಹೋಗುತ್ತದೆ.
21. ದೇಹ ನಿರೋಧಕ ಶಕ್ತಿ ವೃದ್ಧಿಯಾಗಿ ವೈರಸ್ನ ಚಟುವಟಿಕೆ ಕ್ಷೀಣವಾಗುತ್ತದೆ. ಇತ್ಯಾದಿ….