ಬಸಳೆ ಸೊಪ್ಪಿನ ಆರೋಗ್ಯ ಪ್ರಯೋಜನ!

ಬಸಳೆ ಸೊಪ್ಪಿನಲ್ಲಿ ಎಷ್ಟು ವಿಧ?

ಕೆಂಪು ವಿಧ:(Basella rubra )ಇದು ನೇರಳೆ ಅಥವಾ ಕಡು ಗುಲಾಬಿ ಬಣ್ಣದ ಕಾಂಡಗಳು ಹಸಿರು ಎಲೆಗಳನ್ನು ಹೊಂದಿರುತ್ತದೆ.

ಹಸಿರು ವಿಧ: (Basella alba)ಇದು ಹಸಿರು ಕಾಂಡಗಳು ಮತ್ತು ಹಸಿರು ಎಲೆಗಳಿಂದ ಕೂಡಿರುತ್ತದೆ.

ಬಸಳೆ ಸೊಪ್ಪಿನ ಉಪಯೋಗ:

01.ಗರ್ಭಧಾರಣೆ ಮತ್ತು ಹಾಲುಣಿಸುವ ತಾಯಂದಿರಿಗೆ ಪ್ರಯೋಜನಕಾರಿ; ಮಕ್ಕಳನ್ನು ಹೊಂದಲು ಬಯಸುವ ಮಹಿಳೆಯರು ತಮ್ಮ ದೈನಂದಿನ ಆಹಾರದಲ್ಲಿ ಬಸಳೆ ಸೊಪ್ಪನ್ನು ಸೇರಿಸಿಕೊಳ್ಳಬಹುದು. ಇದು ಗರ್ಭಪಾತವನ್ನು ತಡೆಯಲು ನೆರವಾಗುತ್ತದೆ. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಹಾಲು ಉತ್ಪಾದನೆಗೆ ಹೆಚ್ಚಿಸಿಕೊಳ್ಳಲು ಬಸಳೆ ಎಲೆಗಳನ್ನು ಸೇವಿಸಬೇಕು. ಇದು ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಕಾಡುವ ಮಲಬದ್ಧತೆಯನ್ನು ತಡೆಯುತ್ತದೆ.

02.ಬಲವಾದ ಮೂಳೆ ಮತ್ತು ಹಲ್ಲುಗಳು;ಬಸಳೆ ಸೊಪ್ಪು ಕ್ಯಾಲ್ಸಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವುದರಿಂದ ಮೂಳೆ ಮತ್ತು ಹಲ್ಲಿನ ಆರೋಗ್ಯ ಸುಧಾರಿಸುತ್ತದೆ. ಆಸ್ಟಿಯೊಪೊರೋಸಿಸ್ ನಿಂದ ಬಳಲುತ್ತಿರುವ ವೃದ್ಧರು ಮೂಳೆ ಬಲವನ್ನು ಸುಧಾರಿಸಲು ಬಸಳೆ ಎಲೆಗಳನ್ನು ಸೇವಿಸಬಹುದು.

03.ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ; ಇದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಕೂಡ ಸಮೃದ್ಧವಾಗಿದೆ. ಈ ಖನಿಜಗಳು ಹೃದಯದ ತೊಂದರೆಗಳನ್ನು ಕಡಿಮೆ ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಹೃದಯ ಸ್ನಾಯುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತದೊತ್ತಡವನ್ನು ನಿರ್ವಹಿಸುತ್ತದೆ. ಇದು ಪಾರ್ಶ್ವವಾಯು ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

04.ದೇಹದ ತೂಕವನ್ನು ಹೆಚ್ಚಿಸಲು ಬಸಳೆಯು ಸಹಕಾರಿ;ಬಸಳೆ ಸೊಪ್ಪನ್ನು ವಾರದಲ್ಲಿ 3 ದಿನವಾದರೂ ಬಳಸುವುದರಿಂದ ಸರಾಗವಾಗಿ ಜೀರ್ಣಕ್ರಿಯೆಯಾಗಿ, ದೇಹವನ್ನು ಆರೋಗ್ಯವಾಗಿಡುವುದಲ್ಲದೆ, ದೇಹದ ತೂಕ ಕೂಡ ಹೆಚ್ಚುತ್ತದೆ.

05.ಬಸಳೆಯಿಂದ ಮಲಬದ್ಧತೆಯ ನಿವಾರಣೆ;ಮಲಬದ್ಧತೆಯಿಂದ ಬಳಲುತ್ತಿದ್ದವರು ಬಸಳೆ ಸೊಪ್ಪಿನ ಕಷಾಯವನ್ನು ಮಾಡಿ, ಕುಡಿಯುವುದರಿಂದ ಅಥವಾ ಬಸಳೆ ಸೊಪ್ಪನ್ನು ದಿನ ನಿತ್ಯದ ಆಹಾರದಲ್ಲಿ ಬಳಸುವುದರಿಂದ, ಚಿಕ್ಕ ಮಕ್ಕಳಲ್ಲಿ ಮತ್ತು ಗರ್ಭಿಣಿಯರಲ್ಲಿನ ಮಲಬದ್ಧತೆಯ ಸಮಸ್ಯೆಯು ಕಡಿಮೆಯಾಗುತ್ತದೆ.

06.ಬಾಯಿಯ ಹುಣ್ಣು ಕಡಿಮೆ ಮಾಡಲು ಬಸಳೆಯು ಉಪಯುಕ್ತ;ಬಸಳೆ ಸೊಪ್ಪು ಬಾಯಿಯ ಹುಣ್ಣಿಗೆ ಸುಲಭದ ಮನೆಮದ್ದು. ಬಸಳೆಯ ಎಲೆಯನ್ನು ಚೆನ್ನಾಗಿ ತೊಳೆದು, ಬಾಯಿಯಲ್ಲಿ ನಿಧಾನವಾಗಿ ಜಗಿದರೆ, ಅದರಲ್ಲಿರುವ ಲೋಳೆಯ ಅಂಶವು, ಬಾಯಿಯ ಹುಣ್ಣುಗಳನ್ನು ನಿವಾರಿಸುತ್ತದೆ.

07.ಬಸಳೆ ಸೊಪ್ಪು ಕುರುವಿನ ಕೀವು ತೆಗೆಯಲು ಸಹಕಾರಿಯಾಗಿದೆ;ಬಸಳೆ ಸೊಪ್ಪನ್ನು ಅರೆದು, ಕುರುವಿನ ಮೇಲೆ ಹಚ್ಚುವುದರಿಂದ ಕುರುವಿನಲ್ಲಿನ ಕೀವು (ಕೆಟ್ಟ ರಕ್ತ) ಹೊರಗೆ ಬರುತ್ತದೆ. ಮತ್ತು ಉರಿಯೂತ ಕೂಡ ಕಡಿಮೆಯಾಗುತ್ತದೆ.

08.ವಯಸ್ಸಾಗುವಿಕೆಯನ್ನು ತಡೆಯುತ್ತದೆ; ಬಸಳೆ ಬಹಳಷ್ಟು ವಿಟಮಿನ್ ಸಿ ಅನ್ನು ಹೊಂದಿರುತ್ತದೆ ಮತ್ತು ಇದು ಎಲ್ಲಾ ಆಕ್ರಮಣಕಾರಿ ಸೂಕ್ಷ್ಮಜೀವಿಗಳನ್ನು ಹೊರಹಾಕುತ್ತದೆ ಮತ್ತು ಸೋಂಕುಗಳನ್ನು ತಡೆಯುತ್ತದೆ. ಇದು ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ.

09.ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ಬಸಳೆ ಸೊಪ್ಪಿನಲ್ಲಿರುವ ಲೋಳೆಸರ ಸರಿಯಾದ ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಇದು ಆಮ್ಲೀಯತೆಯ ಸಮಸ್ಯೆಗಳನ್ನು ತಟಸ್ಥಗೊಳಿಸುತ್ತದೆ. ಹೊಟ್ಟೆ ಉಬ್ಬರ, ಉಗ್ರಾಮ್ಲ, ಉಳಿತೇಗು ಮುಂತಾದ ಸಮಸ್ಯೆಗಳನ್ನು ದೀರ್ಘವಾದಿಯಲ್ಲಿ ನಿವಾರಿಸುತ್ತದೆ. ಅಲ್ಲದೆ ಹೊಟ್ಟೆ ಉಣ್ಣು(ಅಲ್ಸರ್) ಚಿಕಿತ್ಸೆಗೆ ಇದು ಬಲು ಸಹಕಾರಿಯಾದ ಸೊಪ್ಪಾಗಿದೆ.

10.ಕಣ್ಣುಗಳ ಆರೋಗ್ಯ; ಬಸಳೆ ವಿಟಮಿನ್ ಎ ಯಿಂದ ಸಮೃದ್ಧವಾಗಿದೆ. ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ. ಕಣ್ಣಿನ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಕಣ್ಣಿನಲ್ಲಿ ಪೊರೆ ಏರ್ಪಡದಂತೆ ತಡೆಯಲು ನೆರವಾಗುತ್ತದೆ.

11.ಕ್ಯಾನ್ಸರ್ ತಡೆಗಟ್ಟುತ್ತದೆ; ನಮ್ಮ ದೇಹದಲ್ಲಿ ಫೋಲೇಟ್ ಅಂಶ ಕಡಿಮೆಯಾಗುವುದರಿಂದ ಕೊಲೊನ್, ಸರ್ವಿಕಲ್, ಸ್ತನ, ಶ್ವಾಸಕೋಶ ಮತ್ತು ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.ಫೋಲೇಟ್ ಸಮೃದ್ಧವಾಗಿರುವ ಆಹಾರವು ಕ್ಯಾನ್ಸರ್ ಬೆಳವಣಿಗೆಯಿಂದ ರಕ್ಷಿಸುತ್ತದೆ ಎಂದು ಪುರಾವೆಗಳು ತೋರಿಸಿವೆ. ಬಸಳೆ ಸೊಪ್ಪಿನಲ್ಲಿ ಪೋಲೇಟ್ ಅಂಶ ಹೆಚ್ಚಾಗಿದ್ದು ಕ್ಯಾನ್ಸರ್ ತಡೆಗಟ್ಟಲು ನೆರವಾಗುತ್ತದೆ.

12.ಕಾಮಾಸಕ್ತಿ ಹೆಚ್ಚಿಸುತ್ತದೆ;ಬಸಳೆ ಸೊಪ್ಪು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಸುಧಾರಿಸುತ್ತದೆ ಎಂದು ವರದಿಯಾಗಿದೆ ಹೀಗಾಗಿ ಇದು ಕಾಮಾಸಕ್ತಿಯನ್ನು ಉತ್ತೇಜಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group