ತಲೆಹೊಟ್ಟಿನ ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದು;

ತಲೆಹೊಟ್ಟಿನ ನಿವಾರಣೆಗೆ ಕೆಮಿಕಲ್ ಇರುವ ಶ್ಯಾಂಪೂ ಬಳಸುವ ಬದಲು, ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಹೋಗಲಾಡಿಸಬಹುದು.ಅದಲ್ಲದೆ ತಲೆ ಹೊಟ್ಟು- ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ವಿಚಾರ ತಲೆಹೊಟ್ಟಿನಿಂದ ಬಳಲುತ್ತಿದ್ದೀರಾ? ಅಂಗಡಿಗೆ ಹೋಗಿ ಕಂಡ ಕಂಡ ಶ್ಯಾಂಪೂವನ್ನು ಪ್ರಯೋಗಿಸುವ ಬದಲು ಇಲ್ಲಿ ನೀಡಿರುವ ಮನೆ ಚಿಕಿತ್ಸೆಗಳನ್ನು ನಿಮಗೆ ಇಷ್ಟವಾದ ಒಂದನ್ನು ಒಮ್ಮೆ ಪ್ರಯತ್ನಿಸಿ.
01. ನಿಂಬೆ ಹಣ್ಣಿನ ರಸದ ಮಸಾಜ್- ಸ್ನಾನಕ್ಕೆ ಹೋಗುವ ಮೊದಲು ನಿಂಬೆಹಣ್ಣಿನ ರಸದಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಿ.- 15 – 20 ನಿಮಿಷಗಳ ನಂತರ ಸ್ನಾನ ಮಾಡಿ.- ಈ ಚಿಕಿತ್ಸೆಯಿಂದ ಸಿಕ್ಕು ಆಗುವುದಿಲ್ಲ, ತಲೆಹೊಟ್ಟು ಬರುವುದಿಲ್ಲ. ಅಲ್ಲದೆ ನಿಮ್ಮ ಕೂದಲು ಹೊಳಪಿನಿಂದ ಕಂಗೊಳಿಸುತ್ತದೆ.
02.ವಿನೇಗರ್ ಚಿಕಿತ್ಸೆ- ವಿನೇಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು ಒಂದು ಮಿಶ್ರಣವನ್ನು ಮಾಡಿಕೊಳ್ಳಿ.- ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, ರಾತ್ರಿ ಪೂರ್ತಿ ಬಿಡಿ.- ಮಾರನೆಯ ದಿನ ಇದನ್ನು ಒಂದು ಬೇಬಿ ಶ್ಯಾಂಪೂವನ್ನು ಬಳಸಿ ಚೆನ್ನಾಗಿ ತೊಳೆಯಿರಿ.
03.ಮೊಸರು- ಮೊಸರನ್ನು ನಿಮ್ಮ ಕೂದಲಿಗೆ ಹಚ್ಚಿ, ಕನಿಷ್ಠ ಒಂದು ಗಂಟೆ ನೆನೆಯಲು ಬಿಡಿ.- ನಂತರ ಇದನ್ನು ಒಂದು ಮೆದುವಾದ ಶ್ಯಾಂಪೂವನ್ನು ಬಳಸಿಕೊಂಡು ಚೆನ್ನಾಗಿ ತೊಳೆಯಿರಿ. ಹೀಗೆ ವಾರಕ್ಕೆ ಕನಿಷ್ಠ ಎರಡು ಬಾರಿಯಾದರು ಮಾಡಿ.
04.ಈರುಳ್ಳಿ ಪೇಸ್ಟ್- ನಿಮ್ಮ ಕೂದಲಿಗೆ ಈರುಳ್ಳಿ ಪೇಸ್ಟ್ ಹಚ್ಚಿ . ಒಂದು ಗಂಟೆ ಕಾಲ ಹಾಗೆಯೇ ಬಿಡಿ.- ನಂತರ ಅದನ್ನು ಪೂರ್ತಿಯಾಗಿ ತೊಳೆಯಿರಿ. ನಂತರ ಅದಕ್ಕೆ ತಾಜಾ ನಿಂಬೆಯ ರಸವನ್ನು ಹಚ್ಚಿ. ಇದರಿಂದ ನಿಮ್ಮ ಕೂದಲಿನಲ್ಲಿರುವ ಈರುಳ್ಳಿಯ ವಾಸನೆಯು ಹೊರಟು ಹೋಗುತ್ತದೆ.
05.ಕಡಲೆ ಹಿಟ್ಟಿನ ಚಿಕಿತ್ಸೆ- ಕಡಲೆ ಹಿಟ್ಟನ್ನು ಮೊಸರಿನೊಂದಿಗೆ ಬೆರೆಸಿ ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ.- 20 ರಿಂದ 30 ನಿಮಿಷಗಳ ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ.
06.ಬೇಕಿಂಗ್ ಸೋಡ ಚಿಕಿತ್ಸೆ.- ಸ್ನಾನ ಮಾಡುವಾಗ ಶಾಂಪೂವಿನ ಜೊತೆಗೆ ಸ್ವಲ್ಪ ಬೇಕಿಂಗ್ ಸೋಡವನ್ನು ನಿಮ್ಮ ಕೇಶಕ್ಕೆ ಹಚ್ಚಿ, ಕೂದಲಿನ ಬುಡವನ್ನು ಮಸಾಜ್ ಮಾಡಿ.- 15 ರಿಂದ 20 ನಿಮಿಷಗಳ ನಂತರ ಇದನ್ನು ತೊಳೆಯಿರಿ.
07.ತುಳಸಿ- ತುಳಸಿ ಮತ್ತು ನೆಲ್ಲಿ ಕಾಯಿಯ ಪುಡಿಯನ್ನು ನೀರಿನಲ್ಲಿ ಪೇಸ್ಟ್ ಮಾಡಿಕೊಳ್ಳಿ.- ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ. ಅರ್ಧ ಗಂಟೆಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ನಿಮ್ಮ ಕೂದಲನ್ನು ನೀರು ಮತ್ತು ಶ್ಯಾಂಪೂವನ್ನು ಬಳಸಿ ಚೆನ್ನಾಗಿ ತೊಳೆಯಿರಿ.
08.ನಿಂಬೆ ಹಣ್ಣಿನ ಸ್ನಾನ_ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅವುಗಳನ್ನು 4-5 ಕಪ್ ಬಿಸಿ ನೀರಿನಲ್ಲಿ 15-20 ನಿಮಿಷಗಳ ಕಾಲ ಬೇಯಿಸಿ.ಇದು ಆರಿದ ನಂತರ ಅದನ್ನು ನಿಮ್ಮ ಕೂದಲಿಗೆ ಹಚ್ಚಿ, ಇದನ್ನು ಒಂದು ವಾರ ಪುನರಾವರ್ತಿಸಿ.
09.ಮೆಂತ್ಯೆ ಚಿಕಿತ್ಸೆ- ಎರಡು ಚಮಚಗಳಷ್ಟು ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿ ರಾತ್ರಿ ಪೂರ್ತಿ ಬಿಡಿ. ಮಾರನೇ ದಿನ ಬೆಳಗ್ಗೆ ಇದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಿ.-ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷ ಬಿಡಿ.- ನಂತರ ತಲೆಗೆ ಸ್ನಾನ ಮಾಡಿ. ಈ ಚಿಕಿತ್ಸೆಯನ್ನು ನಾಲ್ಕು ವಾರಗಳ ತನಕ ಪುನಾರಾವರ್ತಿಸಿ.
10.ಬೇವು ಮತ್ತು ಮೊಸರು : ಮೊದಲು ಬೇವಿನ ಎಲೆಯನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಕಪ್ ಮೊಸರು ಸೇರಿಸಿ ನಂತರ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷದ ನಂತರ ಕೂದಲನ್ನು ತೊಳೆದುಕೊಳ್ಳಿ. ಮೊಸರಿನಲ್ಲಿ ತಂಪಾದ ಮತ್ತು ಬೇವಿನ ಎಲೆಯಲ್ಲಿ ಆಂಟಿ ಫಂಗಲ್ ಗುಣಲಕ್ಷಣ ಇರುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
11.ಬೆಳ್ಳುಳ್ಳಿ: ತಲೆಹೊಟ್ಟು ಚಿಕಿತ್ಸೆಗಾಗಿ ನೀವು ಬೆಳ್ಳುಳ್ಳಿ (Garlic) ಯನ್ನು ಸಹ ಬಳಸಬಹುದು. ಮೊದಲಿಗೆ, ಒಂದು ಅಥವಾ ಎರಡು ಬೆಳ್ಳುಳ್ಳಿಗಳನ್ನು ಪುಡಿಮಾಡಿ ನಂತರ ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಕೆಲ ಹೊತ್ತಿನ ಬಳಿಕ ತಲೆ ಸ್ನಾನ ಮಾಡಿ.
12.ತಲೆಹೊಟ್ಟು ನಿವಾರಣೆಗೆ ಕರಿಬೇವಿನ ಸೊಪ್ಪು ಮತ್ತು ಹಾಲಿನ ಮಿಶ್ರಣವು ಅತ್ಯುತ್ತಮ ಮನೆಮದ್ದಾಗಿದೆ_ಮೊದಲಿಗೆ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಹಾಲನ್ನು ಮಿಕ್ಸ್ ಮಾಡಿ, ಆ ಪೇಸ್ಟನ್ನು ತಲೆಯ ಚರ್ಮಕ್ಕೆ ತಾಗುವಂತೆ ಹಚ್ಚಿರಿ. ನಂತರ ಎರಡರಿಂದ ಮೂರು ಗಂಟೆಗಳು ಕಳೆದ ಮೇಲೆ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಈ ರೀತಿ ವಾರದಲ್ಲಿ 1 – 2 ಬಾರಿ ಮಾಡುವುದರಿಂದ ತಲೆ ಹೊಟ್ಟು ನಿವಾರಣೆ ಆಗುತ್ತದೆ.