ಮುಕ್ತಾಯ ದಿನಾಂಕವಿಲ್ಲದ ಆಹಾರ ಪದಾರ್ಥಗಳು ಯಾವುವು..!

ಕೆಲವು ಆಹಾರ ಪದಾರ್ಥಗಳನ್ನು ಎಷ್ಟು ದಿನ ಇಟ್ಟರೂ ಕೆಡುವುದಿಲ್ಲ. ಅವುಗಳ ಬಳಕೆಯ ಅವಧಿ ವರ್ಷಗಳವರೆಗೂ ಹಾಗೆಯೇ ಉಳಿದಿರುತ್ತದೆ. ಅದು ಚಳಿಗಾಲವಾಗಲಿ ಅಥವಾ ಬೇಸಿಗೆಯಲ್ಲಾಗಲಿ ಎಂದಿಗೂ ಕೆಡುವುದಿಲ್ಲ. ಹಾಗಾದರೆ, ಅಂತಹ ವಸ್ತುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಸೋಯಾಸಾಸ್:ಸೋಯಾ ಸಾಸ್ ಕೂಡ ದೀರ್ಘಕಾಲದವರೆಗೆ ಕೆಡುವುದಿಲ್ಲ, ಏಕೆಂದರೆ ಇದನ್ನು ಹುದುಗುವಿಕೆಯಿಂದ ತಯಾರಿಸಲಾಗುತ್ತದೆ, ಆದ್ದರಿಂದ ಇದು ಎಂದಿಗೂ ಹಾಳಾಗುವುದಿಲ್ಲ. ಅದನ್ನು ತೆರೆದ ನಂತರವೂ ಅದನ್ನು ಬಳಸಿ ಆಹಾರವನ್ನು ತಯಾರಿಸಬಹುದು. ಸೋಯಾಸಾಸ್ ಹಲವಾರು ವರ್ಷಗಳವರೆಗೆ ತನ್ನ ಗುಣಮಟ್ಟವನ್ನು, ರುಚಿಯನ್ನು ಕಾಪಾಡಿಕೊಳ್ಳುತ್ತದೆ.

ಸಕ್ಕರೆ:ಸಕ್ಕರೆ ಕೂಡ ಮುಕ್ತಾಯ ದಿನಾಂಕವಿಲ್ಲದ ಆಹಾರ ಪದಾರ್ಥವಾಗಿದ್ದು ಅದು ಶಾಶ್ವತವಾಗಿ ಉಳಿಯುತ್ತದೆ. ಅದರ ಬಣ್ಣವು, ಸ್ವಲ್ಪ ಮಟ್ಟಿಗೆ ರುಚಿಯನ್ನು ಬದಲಾಯಿಸುತ್ತದೆ ಆದರೆ ಅದನ್ನು ತಿನ್ನಬಹುದು. ಇದರಿಂದ ಯಾವುದೇ ಹಾನಿಯಾಗುವುದಿಲ್ಲ.

ಉಪ್ಪು:ಉಪ್ಪು ಕೂಡ ಎಂದಿಗೂ ಕೆಡುವುದಿಲ್ಲ. ಅದಕ್ಕಾಗಿಯೇ ಉಪ್ಪು (ಸೋಡಿಯಂ ಕ್ಲೋರೈಡ್) ಅನ್ನು ಶತಮಾನಗಳಿಂದ ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ. ಏಕೆಂದರೆ, ಆಹಾರ ಮತ್ತು ಪಾನೀಯಗಳಲ್ಲಿ ಉಪ್ಪನ್ನು ಹಾಕಿಡುವುದರಿಂದ, ಅವುಗಳು ಬೇಗನೆ ಕೆಡುವುದಿಲ್ಲ. ಇದಕ್ಕೆ ಉದಾಹರಣೆಯೇ, ನಮ್ಮ ಹಿಂದಿನ ತಲೆಮಾರಿನವರು ಮಾವಿನಕಾಯಿ, ಹಲಸಿನ ಕಾಯಿಯನ್ನು ಮಳೆಗಾಲದ ಬಳಕೆಗಾಗಿ ಉಪ್ಪಿನಲ್ಲಿ ಸಂಗ್ರಹಿಸಿಡುತ್ತಿದ್ದಂತಹ ಸಂಗತಿ.

ಬಿಳಿ ಅಕ್ಕಿ:ಎಂದಿಗೂ ಹಾಳಾಗದ ವಸ್ತುಗಳಲ್ಲಿ ಒಂದು ಬಿಳಿ ಅಕ್ಕಿ. ಬಿಳಿ ಅಕ್ಕಿಯ ಪೌಷ್ಟಿಕಾಂಶವು 30 ವರ್ಷಗಳವರೆಗೆ ಮುಕ್ತಾಯಗೊಳ್ಳುವುದಿಲ್ಲ. ಅಲ್ಲಿವರೆಗೆ ತನ್ನ ಪೋಷಕಾಂಶವನ್ನು ಹಿಡಿದಿಟ್ಟುಕೊಂಡಿರುತ್ತದೆ. ಆದರೆ, ಅದನ್ನು ಸರಿಯಾದ ವಿಧಾನದಲ್ಲಿ ಸಂಗ್ರಹಿಸಿಡುವುದು ತುಂಬಾ ಮುಖ್ಯ. ಬಿಳಿ ಅಕ್ಕಿಯನ್ನು 40 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿದರೆ, ಅದು ವರ್ಷಗಳವರೆಗೆ ಹಾಳಾಗುವುದಿಲ್ಲ.

ಜೇನುತುಪ್ಪ:ಜೇನುತುಪ್ಪವು ಎಂದಿಗೂ ಕೆಡದ ಏಕೈಕ ಆಹಾರ ಎಂದು ಹೇಳಲಾಗುತ್ತದೆ. ಜೇನುತುಪ್ಪವು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಹೂವುಗಳ ಮಕರಂದದಿಂದ ಉತ್ಪತ್ತಿಯಾಗುವ ಜೇನುತುಪ್ಪವು ಉತ್ಪಾದನೆಯ ಸಮಯದಲ್ಲಿ ಜೇನುನೊಣದ ಕಿಣ್ವಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ರಸವನ್ನು ಸರಳ ಸಕ್ಕರೆಯಾಗಿ ಪರಿವರ್ತಿಸುತ್ತದೆ, ಈ ಕ್ರಿಯೆಯಿಂದ ಜೇನುತುಪ್ಪದ ಜೀವಿತಾವಧಿ ಹೆಚ್ಚಾಗುವುದು. ಆದ್ದರಿಂದ ಸಾವಯವ ಜೇನುತುಪ್ಪವನ್ನು ಎಷ್ಟು ವರ್ಷಗಳ ಕಾಲ ಇಟ್ಟರೂ, ಅದು ಕೆಡುವುದಿಲ್ಲ, ಆದರೆ ಮಾರುಕಟ್ಟೆಯಲ್ಲಿ ಸಿಗುವ ಕಲಬೆರೆಕೆ ಜೇನುತುಪ್ಪಕ್ಕೆ ಯಾವುದೇ ವ್ಯಾರಂಟಿಯಿಲ್ಲ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group