ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಟಿಪ್ಸ್..!

ಕಲಿಯುವ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಇಲ್ಲ ಅಂದರೆ ಅದರ ಕೆಟ್ಟ ಪರಿಣಾಮ ಕಾಣುವುದು ಪರೀಕ್ಷೆ ಪೇಪರ್ ನಲ್ಲಿ. ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಅನೇಕ ಪ್ರೊಟೀನ್ ಪುಡಿಗಳ ಜಾಹೀರಾತನ್ನು ನೋಡಿರಬಹುದು. ಆದರೆ ಕೆಲವು ಆಹಾರಗಳ ಸೇವನೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲದೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಆ ಆಹಾರಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.
1.ಜನರೊಂದಿಗೆ ಬೆರೆಯಿರಿ:ಹೊಸ ಹೊಸ ಜನರೊಂದಿಗೆ ಬೆರೆಯುವುದು ನಮ್ಮ ಮನಸ್ಸಿಗೆ ಖುಷಿ ಕೊಡುವುದಷ್ಟೇ ಅಲ್ಲ, ಅದು ನಮ್ಮ ಮೆದುಳಿನ ಆರೋಗ್ಯಕ್ಕೂ ಮುಖ್ಯ. ಸಾಮಾಜಿಕವಾಗಿ ಬೆರೆಯುವುದರಿಂದ ಒತ್ತಡ ಮತ್ತು ಖಿನ್ನತೆ ದೂರಾಗುತ್ತವೆ. ಅಷ್ಟೇ ಅಲ್ಲ, ಮೆದುಳು ಚುರುಕಾಗಿದ್ದು, ಮರೆವಿನ ಸಮಸ್ಯೆಯಿಂದ ದೂರವುಳಿಯುತ್ತದೆ. ಹಾಗಾಗಿ, ಸಾಧ್ಯವಾದದಷ್ಟು ಹೊಸಬರ ಜೊತೆ ಬೆರೆಯಿರಿ, ಗೆಳೆತನ ಮಾಡಿಕೊಳ್ಳಿ, ಅವಕಾಶ ಸಿಕ್ಕಾಗಲೆಲ್ಲ ಗೆಳೆಯರು, ಸಂಬಂಧಿಕರು ಇತರರನ್ನು ಭೇಟಿಯಾಗಿ.
2. ರೋಸ್ ಮೆರಿ: ರೋಸ್ ಮೆರಿ ಜ್ಞಾಪಕ ಶಕ್ತಿ ಕಳೆದು ಹೋದವರಿಗೆ ಪುನಃ ನೆನಪು ಬರುವಂತೆ ಮಾಡಲು ಹರ್ಬಲ್ ಔಷಧಿಯಲ್ಲಿ ಬಳಸಲಾಗುವುದು. ಇದರಲ್ಲಿರುವ ಕಾರ್ನೋಸೈಕ್ ಆಸಿಡ್ ಎಂಬ ರಾಸಾಯನಿಕವು ರೋಸ್ ಮೆರಿಯಲ್ಲಿ ಇದ್ದು ಅದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
3. ಹಣ್ಣುಗಳು: ಸೇಬು ಮತ್ತು ಕಪ್ಪು ದ್ರಾಕ್ಷಿ ಜ್ಞಾಪಕಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರಲ್ಲಿರುವ ಆಂತೊಸೈನಾನ್ ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
4.ಮೀನು: ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶವು ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಈ ಅಂಶವು ಆಹಾರದಿಂದ ಮಾತ್ರ ನಮ್ಮ ದೇಹ ಸೇರುವುದು.
5.ತರಕಾರಿ: ನೀಲಿ, ಕೆಂಪು ಮತ್ತು ಹಸಿರು ಬಣ್ಣದಲ್ಲಿರುವ ತರಕಾರಿಗಳು ಮೆದುಳಿಗೆ ಒಳ್ಳೆಯದು. ಬದನೆಕಾಯಿ, ಬೀಟ್ ರೂಟ್ಸ್, ಈರುಳ್ಳಿ, ಸೊಪ್ಪುಗಳು ಮೆದುಳಿನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.
6.ಟೀ: ಟೀಯಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದರಲ್ಲಿ anti oxidants ಅಂಶ ಉಳಿದೆಲ್ಲಾ ತರಕಾರಿ ಮತ್ತು ಹಣ್ಣುಗಳಲ್ಲಿ ಇರುವುದಕ್ಕಿಂತ ಹೆಚ್ಚಾಗಿರುತ್ತದೆ. ಈ ಅಂಶವನ್ನು ಪಾಲಿಫಿನೊಲ್ಸ್ಎಂದು ಕರೆಯಲಾಗುವುದು, ಇದು ಮೆದುಳಿನ ಚಟುವಟಿಕೆಗಳನ್ನು ಹೆಚ್ಚು ಮಾಡುತ್ತದೆ. ಇದರಲ್ಲಿರುವ ಅಮೈನೊ ಆಸಿಡ್ ವಿಷಯವನ್ನು ಸರಿಯಾದ ರೀತಿಯಲ್ಲಿ ಯೋಚಿಸಲು ಸಹಾಯ ಮಾಡುತ್ತದೆ. ಹಿಂದೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಚೀನಾದಲ್ಲಿ ಕಾಡು ಎಲೆಯನ್ನು ಸಂಗ್ರಹಿಸಿ ಅದನ್ನು ಸೇವಿಸುತ್ತಿದ್ದರು. ಆಗ ಸಂಗ್ರಹಿಸುತ್ತಿದ್ದ ಎಲೆ ಯಾವುದು ಎಂದು ಗೊತ್ತೆ? ಅದು ಬೇರಾವುದು ಅಲ್ಲ ಇದೇ ಟೀ ಎಲೆ