ಕೀಲು ನೋವಿನ ಪರಿಹಾರಕ್ಕಾಗಿ ಈ ಸಲಹೆಗಳು;

ಕೀಲೂರದಿಂದ ಕೀಲುಗಳಲ್ಲಿ ಹೆಚ್ಚು ಉರಿ ಕಾಣಿಸಿಕೊಂಡು ಸಹಿಸಲಾರದಷ್ಟು ನೋವು ನೀಡುತ್ತದೆ. ಅತಿಯಾದ ಮದ್ಯ ಸೇವನೆ ಮತ್ತು ಅನಾರೋಗ್ಯಕರ ಆಹಾರವೂ ಕೀಲು ನೋವಿಗೆ ಕಾರಣ. ಕೀಲಿನಲ್ಲಿ ಉರಿಯಾಗುವುದು ಮತ್ತು ಅತಿಯಾಗಿ ಬೆವರುವುದು ಈ ಸಮಸ್ಯೆಯ ಲಕ್ಷಣ.ಕೆಲವೊಂದು ಸಲಹೆಗಳು ಸಂಧಿವಾತ ಸಮಸ್ಯೆಯನ್ನು ಹೋಗಿಸಲು ಸಹಕಾರಿ. ಅದ್ಯಾವುವೆಂದು ಇಲ್ಲಿ ತಿಳಿಯಿರಿ:
1. ಸೇಬು: ಕೀಲು ನೋವಿಗೆ ಸೇಬು ಸೇವನೆ ತುಂಬಾ ಒಳ್ಳೆಯದು. ಪ್ರತಿ ದಿನವೂ ಸೇಬು ತಿನ್ನುವುದರಿಂದ ಕೀಲು ನೋವನ್ನು ಕಡಿಮೆಗೊಳಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಚೆರ್ರಿ ಜ್ಯೂಸ್ ನ ಅಂಶವೂ ಕೂಡ ಕೀಲು ನೋವಿಗೆ ಅತ್ಯುಪಕಾರಿ. ಚೆರಿಯಲ್ಲಿ ಆಂತೊಸಿಯಾನಿನ್ಸ್ ಎಂಬ ಆಂಟಿಯಾಕ್ಸಿಡಂಟ್ ಇರುವುದರಿಂದ ಕೀಲು ನೋವಿನ ಉರಿಯನ್ನು ಹೋಗಿಸಿ ಕ್ರಮೇಣ ನೋವನ್ನು ನಿವಾರಿಸುತ್ತದೆ.
2.ನಿಂಬೆ: ನಿಂಬೆ ಕೀಲು ನೋವಿಗೆ ಅತಿ ಪರಿಣಾಮಕಾರಿ. ದಿನವೂ ಮೂರು ಬಾರಿ ನಿಂಬೆ ಜ್ಯೂಸ್ ಸೇವಿಸುವುದರಿಂದ ಈ ನೋವನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.
3.ನೀರಿನ ಆರೈಕೆ: ಬೆಚ್ಚಗಿನ ನೀರಿನೊಂದಿಗೆ ಕಲ್ಲುಪ್ಪು ಮತ್ತು ಇದ್ದಿಲಿನ ಪುಡಿಯನ್ನು ಹಾಕಿ ಅದರಲ್ಲಿ ಕಾಲುಗಳನ್ನು ಅದ್ದಿದರೆ ನೋವಿಗೆ ರಿಲೀಫ್ ನೀಡುತ್ತೆ.
4.ಕ್ಯಾರೆಟ್: ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ, ಬೂದುಗುಂಬಳಕಾಯಿ ಮುಂತಾದ ತರಕಾರಿಗಳು ರಕ್ತವನ್ನು ಶುದ್ಧಗೊಳಿಸಿ ನೋವನ್ನು ಕ್ರಮೇಣ ಕಡಿಮೆ ಮಾಡುತ್ತದೆ.
5.ಮಸಾಜ್: ಶುಂಠಿ ಅರಿಶಿಣದ ಪೇಸ್ಟನ್ನು ನೋವಿರುವ ಜಾಗಕ್ಕೆ ಮಸಾಜ್ ಮಾಡಿದರೂ ಪರಿಣಾಮಕಾರಿಯಾಗಿ ತಕ್ಷಣವೇ ನೋವು ನಿವಾರಣೆಯಾಗುತ್ತದೆ.
6.ಗಿಡ ಮೂಲಿಕೆ: ಸಾಸಿವೆ, ನೀರು ಹಿಪ್ಪೆಯ ತೊಗಟೆ ಮುಂತಾದವೂ ಕೂಡ ಕೀಲು ನೋವಿಗೆ ಹೆಚ್ಚು ಪರಿಣಾಮಕಾರಿ.
7.ವ್ಯಾಯಾಮ: ಕೀಲಿನ ಸಮಸ್ಯೆಗಳಿರುವ ಅನೇಕ ಜನರು ನೋವನ್ನು ಮತ್ತಷ್ಟು ಉಲ್ಬಣಗೊಳಿಸಬಹುದೆಂಬ ಭಯದಿಂದ ವ್ಯಾಯಾಮ ಮಾಡಲು ಹೆದರುತ್ತಾರೆ. ಆದರೆ ನಿಯಮಿತವಾಗಿ ಕಡಿಮೆ-ಪರಿಣಾಮದ ವ್ಯಾಯಾಮಗಳು ಕೀಲುಗಳ ಆರೋಗ್ಯಕ್ಕೆ ಒಳ್ಳೆಯದು.
8.ಧೂಮಪಾನವನ್ನು ನಿಲ್ಲಿಸಿ: ಧೂಮಪಾನವು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ. ಇದು ನಿಮ್ಮನ್ನು ಸ್ನಾಯುರಜ್ಜು ಉರಿಯೂತಕ್ಕೆ ಗುರಿಯಾಗಿಸಬಹುದು. ನೀವು ಉತ್ತಮ ಕೀಲುಗಳನ್ನು ಪಡೆಯಲು ಬಯಸಿದರೆ, ನೀವು ಧೂಮಪಾನವನ್ನು ನಿಲ್ಲಿಸಬೇಕು.
9.ಹೆಚ್ಚುವರಿ ತೂಕವನ್ನು ಕಡಿಮೆ ಮಾಡುವುದು: ನೀವು ಅಧಿಕ ತೂಕ ಹೊಂದಿದ್ದರೆ, ನಿಮ್ಮ ಕೀಲುಗಳಿಗೆ ಹೆಚ್ಚುವರಿ ಒತ್ತಡವನ್ನು ಹಾಕುತ್ತೀರಿ. ಇದು ಮೊಣಕಾಲು ಮತ್ತು ಪಾದದ ನೋವಿಗೆ ಕಾರಣವಾಗುತ್ತದೆ. ನಿಮ್ಮ ಕೀಲುಗಳು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರಲು ತೂಕವನ್ನು ಕಳೆದುಕೊಳ್ಳಿ.