ಸಬ್ಬಸಿಗೆ ಸೊಪ್ಪಿನ ಔಷಧಿ ಗುಣಗಳು (Dill)

ಇದರ ವೈಜ್ಞಾನಿಕ ಹೆಸರು ಅನೆಥಮ್ ಗ್ರಾವೆಒಲೆನ್ಸ್ (Anethum Graveolens). ಹಸಿರು ತರಕಾರಿಗಳು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಅಂತಹ ಸಸ್ಯಗಳಲ್ಲಿ ಸಬ್ಬಸಿಗೆ ಸೊಪ್ಪು ಕೂಡ ಒಂದು. ಇದರ ಎಲೆಗಳು ಅಗಲವಾಗಿರದೆ, ಸಣ್ಣ ಸಣ್ಣ ಕಡ್ಡಿಗಳಂತೆ ನೀಳವಾಗಿರುತ್ತವೆ. ಇದರಿಂದ ಅನೇಕ ಲಾಭಗಳು ಇವೆ. ಸಬ್ಬಸಿಗೆ ಸೊಪ್ಪು ಅನೇಕ ಪೋಷಕಂಶಗಳನ್ನು ಹೊಂದಿರುವುದರಿಂದ ಇದು ಹತ್ತು ಹಲವಾರು ರೋಗಗಳನ್ನು ವಾಸಿಮಾಡುವ ಗುಣಗಳನ್ನು ಹೊಂದಿದೆ.

ಸಬ್ಬಸಿಗೆ ಸೊಪ್ಪಿನ ಔಷಧಿ ಗುಣಗಳು

ಸಬ್ಬಸಿಗೆ ಸೊಪ್ಪು ನಿದ್ರಾಹೀನತೆಯನ್ನು ನಿವಾರಿಸುತ್ತದೆ:ನಿದ್ರಾ ಹೀನತೆಯಿಂದ ಬಳಲುತ್ತಿದ್ದವರು ಪ್ರತಿನಿತ್ಯ ಆಹಾರದಲ್ಲಿ ಸಬ್ಬಸಿಗೆ ಸೊಪ್ಪಿನ ಉಪಯೋಗ ಮಾಡುವುದರಿಂದ ನಿದ್ರೆಯ ಸಮಸ್ಯೆ ಉಂಟಾಗುವುದಿಲ್ಲ.

ಸಬ್ಬಸಿಗೆ ಸೊಪ್ಪು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ:ಸಬ್ಬಸಿಗೆ ಸೊಪ್ಪಿನ ಜೊತೆ ಮೆಂತೆ ಸೇರಿಸಿ, ತುಪ್ಪದಲ್ಲಿ ಹುರಿದು, ಅದಕ್ಕೆ ಒಣ ಮೆಣಸು, ಕಾಯಿ ತುರಿ, ಉಪ್ಪು, ಸಾಸಿವೆ ಸೇರಿಸಿ ಚಟ್ನೆಪುಡಿ ಮಾಡಿಕೊಂಡು ಅನ್ನದ ಜೊತೆ, ಮಜ್ಜಿಗೆ ಮತ್ತು ಈ ಚಟ್ನಿಪುಡಿಯನ್ನು ಸೇರಿಸಿ, ಊಟ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಸಬ್ಬಸಿಗೆ ಸೊಪ್ಪು ;ಮಧುಮೇಹ ರೋಗಿಗಳು ಸಬ್ಬಸಿಗೆ ಸೊಪ್ಪನ್ನು ಬಳಸುವುದರಿಂದ, ಇದು ರಕ್ತದಲ್ಲಿ ಸಕ್ಕೆರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಹಾಗು ಇನ್ಸುಲಿನ್ ನು ನಿಯಮಿತವಾಗಿರಿಸುತ್ತದೆ.

ಋತುಚಕ್ರವನ್ನು ಸರಿಪಡಿಸುವಲ್ಲಿ ಸಬ್ಬಸಿಗೆ ಸೊಪ್ಪು ಸಹಕಾರಿಯಾಗಿದೆ:ಸಬ್ಬಸಿಗೆ ಸೊಪ್ಪನ್ನು ದಿನವೂ ಆಹಾರದ ರೂಪದಲ್ಲಿ ಸೇವಿಸುವುದರಿಂದ ಪ್ರೊಜೆಸ್ಟ್ರಾನ್ ಸ್ರವಿಸುವಿಕೆ ಹೆಚ್ಚಾಗಿ ಅನಿಯಮಿತವಾದ ಋತುಚಕ್ರ ನಿಯಮಿತವಾಗುತ್ತದೆ.

ಸಬ್ಬಸಿಗೆ ಸೊಪ್ಪು ಗಾಯಗಳನ್ನು ವಾಸಿ ಮಾಡುತ್ತದೆ:ಗಾಯಗಳಾದಾಗ ಸಬ್ಬಸಿಗೆ ಸೊಪ್ಪಿನ ರಸ ತೆಗೆದು ಹಚ್ಚುವುದರಿಂದ, ಗಾಯದಿಂದ ಬರುವ ರಕ್ತ ನಿಲ್ಲುತ್ತದೆ ಹಾಗು ಗಾಯವು ಬೇಗನೆ ವಾಸಿಯಾಗುತ್ತದೆ.

ಸಬ್ಬಸಿಗೆ ಸೊಪ್ಪು ಬಿಕ್ಕಳಿಕೆಯನ್ನು ತಡೆಯುತ್ತದೆ:ಕೆಲವರಿಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ನಮ್ಮ ದಿನ ನಿತ್ಯದ ಆಹಾರದಲ್ಲಿ ಸಬ್ಬಸಿಗೆ ಸೊಪ್ಪಿನ ಬಳಕೆಯನ್ನು ಹೆಚ್ಚಿಸಿದ್ದಲ್ಲಿ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದು.

ಪ್ಯಾಟಿಲಿವರ್ ನ ಸಮಸ್ಯೆಗೆ ಸಬ್ಬಸಿಗೆ ಸೊಪ್ಪು ಸಹಕಾರಿಯಾಗಿದೆ:ಸಬ್ಬಸಿಗೆ ಸೊಪ್ಪಿಗೆ ಒಂದು ಚಮಚ ಎಳ್ಳು ಮತ್ತು ಒಂದು ಚಮಚ ಅಗಸೆ ಬೀಜದ ಸೇರಿಸಿ, ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ ಸಮಸ್ಯೆಯು ಕಡಿಮೆಯಾಗುತ್ತದೆ.

ಸಬ್ಬಸಿಗೆ ಸೊಪ್ಪು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ:ಸಬ್ಬಸಿಗೆ ಸೊಪ್ಪನ್ನು ನಾವು ನಮ್ಮ ಆಹಾರ ಪದಾರ್ಥದಲ್ಲಿ ಅಳವಡಿಸಿಕೊಳ್ಳುವುದರಿಂದ ಅದರಲ್ಲಿರುವಂತಹ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸುವ ಕಾರ್ಯ ನಿರ್ವಹಿಸುತ್ತದೆ.

ಮಾನಸಿಕ ಒತ್ತಡಗಳ ನಿಯಂತ್ರಣಕ್ಕೆ ಸಬ್ಬಸಿಗೆ ಸೊಪ್ಪು:ಸಬ್ಬಸಿಗೆ ಸೊಪ್ಪಿನಲ್ಲಿ ಫೈವನೈಡ್ಸ್ ಹಾಗು ವಿಟಮಿನ್ ಬಿ ಕಾಂಪ್ಲೆಕ್ಸ್ ಪೋಷಕಾಂಶಗಳು ಇದ್ದು, ಇದು ದೇಹದಲ್ಲಿ ಎಂಜೈಮ್ ಗಳು ಹಾಗು ಹಾರ್ಮೋನು ಗಳ ಉತ್ಪತ್ತಿಯನ್ನು ಮಾಡುತ್ತದೆ. ಇದರಿಂದ ಮನಸಿಗ್ಗೆ ಹೊಸ ಚೈತನ್ಯ ಬರುತ್ತದೆ ಹಾಗು ಒತ್ತಡ ದೂರವಾಗುತ್ತದೆ.

ಹೊಟ್ಟೆ ನೋವು ನಿವಾರಣೆ ಗೆ ಸಬ್ಬಸಿಗೆ ಸೊಪ್ಪು:ಸಬ್ಬಸಿಗೆ ಸೊಪ್ಪಿನ ರಸವನ್ನು ತೆಗೆದುಕೊಂಡು, ಅದಕ್ಕೆ ಜೇನು ತುಪ್ಪ ಬೆರೆಸಿ, ಸೇವಿಸುವುದರಿಂದ ಅಜೀರ್ಣದಿಂದುಂಟಾದ ಹೊಟ್ಟೆನೋವು ನಿವಾರಣೆಯಾಗುತ್ತದೆ.

ಸಬ್ಬಸಿಗೆ ಸೊಪ್ಪಿನ ಆರೋಗ್ಯಕಾರಿ ಗುಣಗಳು:ಮಲಬದ್ಧತೆಯ ನಿವಾರಣೆ ಮಾಡುತ್ತದೆ.ವಾಯು (ಗ್ಯಾಸ್ಟ್ರಿಕ್) ತೊಂದರೆ ನಿವಾರಣೆ ಮಾಡುತ್ತದೆ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಆರ್ಥ್ರೈಟಿಸ್ ಸಮಸ್ಯೆಯನ್ನು ನಿಯಂತ್ರಿಸುತ್ತದೆ.ಶ್ವಾಶಕೋಶಕ್ಕೆ ಸಂಬಂದಿಸಿದ ತೊಂದರೆಗಳನ್ನು ಹತೋಟಿಗೆ ತರುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group