ಗ್ರೀನ್ ಟೀ ಯ ಔಷಧಿ ಗುಣಗಳು:

ಗ್ರೀನ್ ಟೀ ಯು ಒಂದು ರೀತಿಯ ಚಹಾವಾಗಿದ್ದು, ಇದನ್ನು ಕ್ಯಾಮೆಲಿಯಾ ಸೈನೆನ್ಸಿಸ್ ಎಂಬ ಜಾತಿಯ ಗಿಡದ ಎಲೆಗಳು ಹಾಗು ಮೊಗ್ಗುಗಳಿಂದ ತಯಾರಿಸುತ್ತಾರೆ. ಗ್ರೀನ್ ಟೀಯು ಈಗೀಗ ಕಾಫಿ, ಟೀ ಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ. ಏಕೆಂದರೆ ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಪೂರಕವಾದ ಅಂಶಗಳು ನಮಗೆ ದೊರಕುತ್ತವೆ. ಇದರ ಸೇವನೆಯಿಂದ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸಿಕೊಳ್ಳಬಹುದು. ಇದರಲ್ಲಿ ಕಾಫಿ ಮತ್ತು ಚಹಾ ಗಳಲ್ಲಿರುವಂತಹ ದುಷ್ಪರಿಣಾಮಕಾರಿಯಾದ ಅಂಶಗಳು ಕಡಿಮೆ.
ಗ್ರೀನ್ ಟೀ ಯ ಔಷಧಿ ಗುಣಗಳು:
1.ಗ್ರೀನ್ ಟೀ ಯು ಕ್ಯಾನ್ಸರ್ ಬರದಂತೆ ತಡೆಯುತ್ತದೆ:ಗ್ರೀನ್ ಟೀ ಯ ಸೇವನೆಯಿಂದ, ಇದರಲ್ಲಿರುವ ಪಾಲಿಫೆನಾಲ್ ಗಳು ಕ್ಯಾನ್ಸರ್ ಬರುವಂತಹ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ. ಜೊತೆಗೆ ಇದು ಕ್ಯಾನ್ಸರ್ ಕಣಗಳನ್ನು ನಿರ್ನಾಮ ಮಾಡಲು ಸಹಾಯ ಮಾಡುತ್ತದೆ. ಹಾಗು ಇದು ಜೀವಕೋಶಗಳು ಹಾಗು ಅಣುಗಳು ಹಾನಿಯಾಗುವುದನ್ನು ತಡೆಯುತ್ತದೆ.
2.ಗ್ರೀನ್ ಟೀಯು ಹೃದಯಾಘಾತವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ:ಗ್ರೀನ್ ಟೀ ಯು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಆದ್ದರಿಂದ ಗ್ರೀನ್ ಟೀ ಸೇವನೆಯು ಹೃದಯಾಘಾತವಾಗುವ ಸಂಭವನ್ನು ಕಡಿಮೆ ಮಾಡುತ್ತದೆ.
3.ಗ್ರೀನ್ ಟೀ ಇಂದ ದೇಹದ ತೂಕವನ್ನು ಕಡಿಮೆ ಮಾಡಬಹುದು:ಗ್ರೀನ್ ಟೀ ಯನ್ನು ಆಹಾರದ ಮೊದಲು ಕುಡಿಯುವುದರಿಂದ, ಇದು ದೇಹದಲ್ಲಿನ ಕೆಟ್ಟ ಕೊಬ್ಬನ್ನು ಹೊರ ಹಾಕಿ, ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬನ್ನು ನೀಡುವುದರ ಜೊತೆಗೆ ದೇಹದ ತೂಕವನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತದೆ.
4.ಗ್ರೀನ್ ಟೀ ಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು: ಗ್ರೀನ್ ಟೀ ಯ ಬಳಕೆಯಿಂದ ಆರೋಗ್ಯವನ್ನು ಮಾತ್ರವಲ್ಲದೆ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದು ಮುಖದ ಚರ್ಮವು ಸುಕ್ಕುಗಟ್ಟುವುದನ್ನು ಅಥವಾ ವಯಸ್ಸಾದಂತೆ ಕಂಡುಬರುವ ನೆರಿಗೆಯನ್ನು ಕಡಿಮೆಗೊಳಿಸುತ್ತದೆ. ಇದರಿಂದ ಮುಖದ ಕಾಂತಿಯು ಹೆಚ್ಚುತ್ತದೆ.
5.ಮಧುಮೇಹ ನಿಯಂತ್ರಣಕ್ಕೆ ಗ್ರೀನ್ ಟೀ:ಮಧುಮೇಹ ರೋಗಿಗಳು ಗ್ರೀನ್ ಟೀಯನ್ನು ಕುಡಿಯುವುದರಿಂದ ಇದು, ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದರಿಂದ ಮದುಮೇಹವು ನಿಯಂತ್ರಣಕ್ಕೆ ಬರುತ್ತದೆ.
6.ಗ್ರೀನ್ ಟೀ ಇಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ:ಪ್ರತಿ ದಿನ ಗ್ರೀನ್ ಟೀ ಯನ್ನು ಕುಡಿಯುವುದರಿಂದ, ಅದರಲ್ಲಿರುವ ಆಂಟಿಓಕ್ಸಿಡೆಂಟ್ ಗಳು ದೇಹದಲ್ಲಿನ ಸೋಂಕುಗಳು ಹಾಗು ಬ್ಯಾಕ್ಟೀರಿಯಾ ಗಳ ವಿರುದ್ಧ ಹೊರಡುತ್ತವೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
#ಗ್ರೀನ್ ಟೀ ಮಾಡುವ ವಿಧಾನ:ಗ್ರೀನ್ ಟೀ ಯನ್ನು ನೇರವಾಗಿ ನೀರಿಗೆ ಹಾಕಿ ಕುದಿಸಬಾರದು, ಮೊದಲು ನೀರನ್ನು ಚೆನ್ನಾಗಿ ಕುದಿಸಿಕೊಂಡು, ನಂತರ ಆ ಬಿಸಿ ನೀರಿಗೆ ಗ್ರೀನ್ ಟಿ ಎಲೆಗಳನ್ನು ಹಾಕಿ, ಸ್ವಲ್ಪ ಹೊತ್ತು ಆ ಎಳೆಗಳು ಅರಳುವ ವರೆಗೂ ಬಿಟ್ಟು, ಆ ನೀರು ತಿಳಿ ಹಸಿರು ಬಣ್ಣಕ್ಕೆ ಬಂದ ನಂತರ ಬಿಸಿ ಇರುವಾಗಲೇ ಚಹದಂತೆ ಕುಡಿಯಬೇಕು. ಅದಕ್ಕೆ ಸಕ್ಕರೆಯನ್ನು ಸೇರಿಸಬಾರದು, ಹಾಗೆಯೆ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಗ್ರೀನ್ ಟೀ ಗೆ ನಿಂಬೆ ರಸವನ್ನು ಸೇರಿಸಿ ಕುಡಿಯಬಹುದು. ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮತ್ತು ಗ್ರೀನ್ ಟಿ ಗೆ ನಿಂಬೆ ರಸ ಸೇವಿಸಿ ಕುಡಿಯುವುದರಿಂದ ನಿಂಬೆಯು ಗ್ರೀನ್ ಟೀ ಯಲ್ಲಿರುವ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳಲು ಸಹಾಯಮಾಡುತ್ತದೆ. ಹಾಗು ನಿಂಬೆರಸವು ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು 5 ಪಟ್ಟು ಹೆಚ್ಚು ನಮ್ಮ ದೇಹವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಗ್ರೀನ್ ಟಿ ಕುಡಿಯುವಾಗ ತಾಜಾ ನಿಂಬೆರಸ ಬೆರೆಸಿ ಕುಡಿಯುವುದು ಒಳ್ಳೆಯದು.