ಎಷ್ಟು ಸಮಯ ಧ್ಯಾನ ಮಾಡಬೇಕು?

ಆರೋಗ್ಯ ಸಮಸ್ಯೆ ಇರುವಾಗ ಅಥವಾ ಮಾನಸಿಕ ಸಮಸ್ಯೆ ಇರುವಾಗ ಧ್ಯಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುವುದು ಎಂದು ಹೇಳುವುದನ್ನು ಕೇಳಿರುತ್ತೀರಿ. ಧ್ಯಾನಕ್ಕೆ ಮನಸ್ಸಿನಲ್ಲಿರುವ ಚಡಪಡಿಕೆ, ಗೊಂದಲ, ನೋವು ಎಲ್ಲವನ್ನೂ ಹೊರಹಾಕುವ ಶಕ್ತಿ ಇದೆ. ಧ್ಯಾನದಿಂದ ಏಕಾಗ್ರತೆ ಹೆಚ್ಚುವುದು. ಇನ್ನು ಮನಸ್ಸು ಶಾಂತವಾದಾಗ ರಕ್ತದೊತ್ತಡ ಸರಿಯಾದ ರೀತಿಯಲ್ಲಿರುತ್ತದೆ, ಇನ್ನಿತರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದು. ದೇಹವೂ ಚಟಿವಟಿಕೆಯಿಂದ ಕೂಡಿರುತ್ತದೆ.
ಎಷ್ಟು ಸಮಯ ಧ್ಯಾನ ಮಾಡಬೇಕು?
ನಿಮಗೆ ಹೇಗೆ ಸಾಧ್ಯವೋ ಹಾಗೆ ಧ್ಯಾನ ಮಾಡಬಹುದು. ಇಷ್ಟೇ ಸಮಯ ಎಂಬುವುದಾಗಿ ಇಲ್ಲ… ಪ್ರತಿದಿನ ಧ್ಯಾನ ಅಭ್ಯಾಸ ಮಾಡುವವರು 5 ನಿಮಿಷ ಮಾಡಿ ಹಾಗೂ ತಿಂಗಳಿಗೊಮ್ಮೆ 13 ನಿಮಿಷ ಧ್ಯಾನ ಮಾಡಿ.ಇನ್ನು ಧ್ಯಾನ ಮಾಡೋಕೆ ಇಷ್ಟೇ ಸಮಯ ಎಂಬುವುದಾಗಿ ಇಲ್ಲ.ಧ್ಯಾನ ಎಷ್ಟು ಸಮಯ ಮಾಡಬೇಕು ಎಂಬುವುದನ್ನು ನೀವು ಈ ಅಂಶಗಳಿಂದ ನಿರ್ಧರಿಸಬಹುದು:
* ಎಷ್ಟು ಸಮಯ ಧ್ಯಾನಕ್ಕೆ ಮೀಸಲಿಡಬಹುದು
ಮೊದಲಿಗೆ ಧ್ಯಾನ ಪ್ರಾರಂಭಿಸಿ:ಧ್ಯಾನ ಎಂದರೇನು, ಅದರ ಪ್ರಯೋಜನಗಳೇನು ಎಂಬುವುದು ತಿಳಿಯಬೇಕೆಂದರೆ ಮೊದಲಿಗೆ ನೀವು ಧ್ಯಾನವನ್ನು ಅಭ್ಯಾಸ ಮಾಡಬೇಕು. ಅಭ್ಯಾಸ ಮಾಡಿದವರಿಗಷ್ಟೇ ಅದರ ಮಹತ್ವ ತಿಳಿಯಲು ಸಾಧ್ಯ, ಅದರಿಂದ ಸಿಗುವ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಲು ಸಾಧ್ಯ.ಧ್ಯಾನವನ್ನು ಯಾರು ಬೇಕಾದರೂ ಮಾಡಬಹುದು… ಧರ್ಮ, ಜಾತಿಯ ನಿರ್ಬಂಧಗಳಿಲ್ಲ. ಮಾನಸಿಕ ಒತ್ತಡ ಕಡಿಮೆ ಮಾಡಿ ಆರೋಗ್ಯ ಹೆಚ್ಚಿಸುವಲ್ಲಿ ಧ್ಯಾನ ತುಂಬಾನೇ ಸಹಕಾರಿಯಾಗಿದೆ.