ಭೃಂಗರಾಜ ಗಿಡದ ಔಷಧಿ ಗುಣಗಳು..!

ಭೃಂಗರಾಜ ಗಿಡವನ್ನು ಆಹಾರೌಷಧವಾಗಿಯೂ ಬಳಸುತ್ತಾರೆ. ಇದು ಕಹಿ ರುಚಿಯನ್ನು ಹೊಂದಿರುತ್ತದೆ. ಹಾಗು ಭೃಂಗರಾಜ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಬಲ್ಲದ್ದಾಗಿದೆ. ಇದರಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಅದು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಭೃಂಗರಾಜ ಎಲೆಗಳನ್ನು ಸೂಪ್ ಮಾಡಿಕೊಂಡು ಆಹಾರೌಷಧವಾಗಿ ಉಪಯೋಗಿಸುವುದರಿಂದ, ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ, ಹೃದಯ ರೋಗ ಸಮಸ್ಯೆ ನಿವಾರಣೆಯಾಗುತ್ತದೆ, ರಕ್ತನಾಳಗಳ ಅರೋಗ್ಯದಿಂದಿರುತ್ತವೆ, ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ.

ಭೃಂಗರಾಜ ಗಿಡದ ಔಷಧಿ ಗುಣಗಳು.

01.ಭೃಂಗರಾಜವು ಅಜೀರ್ಣವನ್ನು ಹೋಗಲಾಡಿಸುತ್ತದೆ.ಅಜೀರ್ಣವಾದಾಗ ಭೃಂಗರಾಜದ ಎಲೆಯನ್ನು ಸಣ್ಣಗೆ ಹೆಚ್ಚಿಕೊಂಡು, ಸ್ವಲ್ಪ ತುಪ್ಪದಲ್ಲಿ ಹುರಿದು, ಅದಕ್ಕೆ ಮೊಸರು, ಜೀರಿಗೆ, ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.

02.ತಲೆನೋವು ನಿವಾರಣೆಗೆ ಭೃಂಗರಾಜ:ಭೃಂಗರಾಜ ಎಲೆಯ ರಸವನ್ನು ತೆಗೆದುಕೊಂಡು ಎಳ್ಳೆಣ್ಣೆ ಜೊತೆ ಸೇರಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ವಾಸಿಯಾಗುತ್ತದೆ.

03.ಭೃಂಗರಾಜ ಚಳಿಗಾಲದಲ್ಲಿ ಮೈ ಒಡೆಯುವುದನ್ನು ತಡೆಯುತ್ತದೆ:ಕೆಲವರಿಗೆ ಚಳಿಗಾಲದಲ್ಲಿ ಮೈ- ಕೈ, ಕಾಲು ಒಡೆಯುವುದು ಸಾಮಾನ್ಯ. ಇದರಿಂದ ತ್ವಚೆ ಒಣಗಿ ಕಿರಿ ಕಿರಿ ಉಂಟಾಗುತ್ತದೆ. ಭೃಂಗರಾಜದ ಎಲೆಯ ರಸವನ್ನು ಸ್ವಲ್ಪ ಎಳ್ಳೆಣ್ಣೆ, ಮತ್ತು ಕೊಬ್ಬರಿ ಎಣ್ಣೆ ಸೇರಿಸಿ ಸ್ವಲ್ಪ ಬಿಸಿ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಒಡೆಯುವುದು ಕಡಿಮೆಯಾಗುತ್ತದೆ.

04.ಭೃಂಗರಾಜವು ದೇಹವನ್ನು ತಂಪಾಗಿಡುತ್ತದೆ:ಪ್ರತಿನಿತ್ಯ ಬೆಳಿಗ್ಗೆ 5 ರಿಂದ 6 ಭೃಂಗರಾಜ ಗಿಡದ ಹಸಿ ಎಲೆಗಳನ್ನು ಜಗಿದು ತಿನ್ನುವುದರಿಂದ, ಇದು ದೇಹದ ಉಷ್ಣವನ್ನು ಕಡಿಮೆ ಮಾಡಿ ದೇಹ ತಂಪಾಗಿರುವಂತೆ ನೋಡಿಕೊಳ್ಳುತ್ತದೆ.

05.ಕೂದಲಿನ ಅರೋಗ್ಯ ಕಾಪಾಡುವಲ್ಲಿ ಭೃಂಗರಾಜ ಗಿಡವು ಮಹತ್ವದ ಪಾತ್ರ ವಹಿಸಿದೆ:ಭೃಂಗರಾಜ ಗಿಡವನ್ನು ಕೇಶರಾಜ ಎಂದೇ ಕರೆಯುತ್ತಾರೆ. ಭೃಂಗರಾಜದ ಪುಡಿ ಮತ್ತು ಮೆಂತ್ಯೆ ಪುಡಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಅದಕ್ಕೆ ಸ್ವಲ್ಪ ನೀರು ಸೇರಿಸಿ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು, ಒಂದು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಹಾಗು ನಾವು ಪ್ರತಿದಿನ ಇಲ್ಲವೇ ವಾರಕ್ಕೆ 2 ಬಾರಿ ಭೃಂಗರಾಜ ಎಲೆಯ ರಸವನ್ನು ತೆಗೆದು ಕೊಂಡು, ಕೊಬ್ಬರಿ ಎಣ್ಣೆಯೊಂದಿಗೆ ಬೆರಸಿ ಕುದಿಸಿಕೊಳ್ಳಬೇಕು.ಅದನ್ನು ತಣ್ಣಗಾದ ನಂತರ ತಲೆಗೆ ಹಾಕಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ. ಹಾಗು ಅದರಿಂದ ಕೂದಲಿಗೆ ಹೊಳಪು ಬರುತ್ತದೆ.

06.ಭೃಂಗರಾಜವು ಚರ್ಮರೋಗ ನಿವಾರಣೆಗೆ ಸಹಕಾರಿಯಾಗಿದೆ:ಭೃಂಗರಾಜ ಎಲೆಯ ರಸವನ್ನು ತೆಗೆದುಕೊಂಡು, ಮೈಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಹಾಗು ಚರ್ಮವು ಆರೋಗ್ಯದಿಂದ ಇರುತ್ತದೆ. ಮತ್ತು ಭೃಂಗರಾಜ ಗಿಡದ ಬೇರನ್ನು ಪುಡಿಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿ ಚರ್ಮಕ್ಕೆ ಹಚ್ಚಿ ಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.

07.ಭೃಂಗರಾಜ ಸಸ್ಯವು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ:ಭೃಂಗರಾಜದಲ್ಲಿ ಕೆರೋಟಿನ್ ಅಂಶ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಇದರ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಕಣ್ಣಿನ ಆರೋಗ್ಯವನ್ನು ಇದು ಕಾಪಾಡುತ್ತದೆ.

08.ಗಂಟಲು ನೋವು ನಿವಾರಣೆಗೆ ಭೃಂಗರಾಜ ಸಹಕಾರಿಯಾಗಿದೆ:ಭೃಂಗರಾಜ ಎಲೆಯ ಕಷಾಯವನ್ನು ಮಾಡಿಕೊಂಡು, ಗಂಟಲವರೆಗೂ ಬರುವಂತೆ ಬಾಯಿಗೆ ಹಾಕಿ, ಮುಕ್ಕಳಿಯುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group