ಬಹು ಉಪಯೋಗಿ ಈ ಕಹಿ ಬೇವು..!

ಕಹಿ ಬೇವಿನ ಔಷಧಿ ಗುಣಗಳು : ಕಹಿ ಬೇವಿನ ಮರ ಎಂದಾಕ್ಷಣ ನಮಗೆ ಮೊದಲು ಅದರ ಕಹಿ ನೆನಪಾಗುತ್ತವೆ. ಜೀವನದ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸವ ಸಂಕೇತವಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಬೇವು- ಬೆಲ್ಲನ್ನು ಎಲ್ಲರಿಗೂ ಹಂಚುತ್ತಾರೆ. ಕೆಲವರು ಕಹಿ ಎಂದರೆ ಮೂಗು ಮುರಿಯುತ್ತಾರೆ. ಬೇವಿನ ರುಚಿ ಕಹಿಯಾದರೂ ಅದರಲ್ಲಿರುವ ಔಷಧ ಗುಣಗಳು ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ.
1). ಕಹಿ ಬೇವು ಗುಣದಲ್ಲಿ ಅಮೃತ : ಒಟ್ಟಾರೆ ಬೇವು ಗುಣದಲ್ಲಿ ಕಹಿ ಎನಿಸಿದರೂ ಅದರ ಉಪಯೋಗದಲ್ಲಿ ಮಾತ್ರ ಅಮೃತ. ಬೇವು ಅಂದಕೂಡಲೇ ನಾವು ಮುಖ ಸಿಂಡರಸಿಕೊಳ್ಳುತ್ತೆವೆ. ಆದರೆ ಬೇವಿನ ಉಪಯೋಗ ಅರಿತು ಅದನ್ನು ನಿಯಮಿತವಾಗಿ ಬಳಕೆ ಮಾಡಿದರೆ ಆರೋಗ್ಯಯುತ ಜೀವನ ನಡೆಸಬಹುದು ಎಂಬುದು ನಮ್ಮ ಪೂರ್ವಜರ ಸಲಹೆ.
2). ಗುಣದಿಂದ ಬೇವು ಕಲ್ಪವೃಕ್ಷ : ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ ! ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸಧಾರಣೆಯಲ್ಲಿ ಬೇವು ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು. ದೈವಿಕ ಕಾರ್ಯಗಳೇ ಆಗಲಿ, ವೈದ್ಯಕೀಯ ಕಾರ್ಯಗಳೇ ಬೇವು ಮುಂದಿರುತ್ತದೆ. ವೇದ ಸಾಹಿತ್ಯದಲ್ಲಿ ಬಹುವಾಗಿ ಉಲ್ಲೇಕಿತವಾಗಿರುವ ಬೇವಿನ ಮರದ ಪ್ರತಿ ಭಾಗಕೂಡ ಉಪಯೋಗಕಾರಿ. ಬೇವು ಪರಿಸರವನ್ನು ನಿರ್ಮಲವಾಗಿಟ್ಟು ಶುದ್ಧ ಗಾಳಿಯನ್ನು ಕಲ್ಪಿಸುತ್ತದೆ. ಬೇವು ಕಹಿಯಾದದರೂ ಉಪಯೋಗದ ಕಾರಣದಿಂದ ಕಲ್ಪವೃಕ್ಷವೇ ಸರಿ.
3). ಹಲವು ರೋಗಗಳಿಗೆ ಮದ್ದು ಬೇವು : ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸವಿಡೀ ಮುಂಜಾನೆ ಬೇವಿನ ಎಲೆಗಳನ್ನು ಪ್ರತದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ವರ್ಷ ರೋಗ ರುಜಿನಗಳು ಬರವುದಿಲ್ಲ ಎಂಬುದು ಹಿರಿಯರ ಮಾತು.ಹಾನಿಕಾರಕ ಅಣುಜೀವಿಗಳಿಂದ ಹರಡುವ ಸೋಂಕುಗಳ ತಡೆಗೆ ಬೇವು ಉತ್ತಮ ಮದ್ದು. ಬೇವಿನ ಸೊಪ್ಪನಲ್ಲಿ ಮತ್ತು ಎಣ್ಣೆಯಲ್ಲಿ ಕ್ರಿಮಿನಾಶಕ ಗುಣವಿದೆ. ಎಳೆಯ ಬೇವಿನ ಕಡ್ಡಿಯನ್ನು ಕುಂಚದಂತೆ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಬರುವುದಿಲ್ಲ.ಕಡಿಮೆ ಮಳೆ ಬೀಳುವ ಮತ್ತು ಬಿಸಿಲಿನ ತಾಪ ಅಧಿಕವಾಗಿರುವ ಪ್ರದೇಶದಲ್ಲಿ ಬೇವಿನ ಮರ ಸೊಗಸಾಗಿ ಬೆಳೆಯುತ್ತವೆ. ಇಂದು ಪ್ರಕೃತಿ ವಿಶೇಷ. ಬೇವಿನ ಮರಗಳ ಮೇಲಿಂದ ಬೀಸುವ ಗಾಳಿಯು ಬಿಸಿಲಿನ ತಾಪದಿಂದ ಬಳಲಿದ ದೇಹಕ್ಕೆ ತಂಪು ನೀಡುತ್ತದೆ. ಇದು ಆರೋಗ್ಯಕರ ಕೂಡ ಹೌದು.
4). ಬೇವಿನಿಂದ ಮಲೇರಿಯಾ ದೂರ : ಬೇವಿನ ಸೊಪ್ಪು, ಬೇವಿನ ಹೂವು, ಎಣ್ಣೆ, ಬೇವಿನ ತೊಗಟೆಯಲ್ಲಿ ಹಲವು ರೋಗ ನಿವಾರಕ ಅಂಶಗಳಿದ್ದು, ಇವುಗಳಿಂದ ಔಷಧ ತಯಾರಿಸಲಾಗುತ್ತದೆ. ಚರ್ಮ ರೋಗ ನಿವಾರಣೆಗೆ ಬೇವು ಸಿದ್ಧ ಔಷಧ. ಬೇವಿನ ತಾಜಾ ಸೊಪ್ಪನ್ನು ಹಿಂಡಿ ಸೇವಿಸಿದರೆ ಶಾರೀರಿಕ ದೋಷ ಕೂಡ ನಿವಾರಣೆ ಆಗುತ್ತವೆ ಎಂಬುದು ತಜ್ಞರ ಅಭಿಪ್ರಾಯ.ಬೇವಿನ ಮರದ ಬುಡದಲ್ಲಿನ ತೊಗಟೆಯನ್ನು ಕೆತ್ತಿ ತೆಗೆದು ಅದರಲ್ಲಿ ಕಷಾಯ ತಯಾರಿಸಿ ಸೇವಿಸುವುದರಿಂದ ಕುಷ್ಟ ರೋಗಾ ಚರ್ಮ ರೋಗಗಳು ನಿವಾರಣೆಯಾಗುವವು. ಮಧುಮೇಹ, ನಿಶ್ಯಕ್ತಿ, ವಾಕರಿಕೆ, ಬಾಯಾರಿಕೆ, ಗಡುವಿನ ಜ್ವರ ಸೇರಿದಂತೆ ಅನೇಕ ದೋಷಗಳಿಗೆ ಬೇವು ರಾಮಬಾಣ.ಮಲೇರಿಯಾ ಜ್ವರದಲ್ಲಿ 2 ಅಥವಾ 3 ಗ್ರಾಂ ಬೇವಿನ ಎಲೆಗಳ ಚೂರ್ಣವನ್ನಾಗಲೀ, ತೊಗಟೆಯ ಚೂರ್ಣವನ್ನಾಗಲಿ ಬಿಸಿ ನೀರಿನೊಂದಿಗೆ ಸೇವಿಸುವುದರಿಂದ ಆರೋಗ್ಯ ವೃಧ್ಧಿಸುತ್ತದೆ.
5). ಸೀಮೆಎಣ್ಣೆಯೊಂದಿಗೆ ಬೇವಿನ ಎಣ್ಣೆ ಬೆರೆಸಿ ದೀಪ ಉರಿಸುವುದರಿಂದ ಸೊಳ್ಳೆಗಳ ಕಾಟ ತಪ್ಪಿಸ ಬಹುವುದು. ದ್ವಿಶತಾಂಶ ಬೇವಿನ ಎಣ್ಣೆಯೊಂದಿಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ದೇಹಕ್ಕೆ ಲೇಪಿಸಿದರೆ ಸೊಳ್ಳೆಗಳು ಹತ್ತಿರಕ್ಕೆ ಬರುವುದಿಲ್ಲ.
6)ಕಿವಿ ನೋವು ಕಡಿಮೆ ಮಾಡಲು ಕಹಿ ಬೇವು ಸಹಾಯಕ:ಕಹಿ ಬೇವಿನಿಂದ ತಯಾರಿಸಿದ ಎಣ್ಣೆಯನ್ನು, ಸ್ವಲ್ಪ ಉಗುರು ಬೆಚ್ಚಗೆ ಮಾಡಿ, 1 ರಿಂದ 2 ಹನಿ ಎಣ್ಣೆಯನ್ನು ನೋವಿರುವ ಕಿವಿಗೆ ಹಾಕುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.
7)ಮಲೇರಿಯಾ ಜ್ವರವನ್ನು ಬಾರದ ಹಾಗೆ ತಡೆಯುವಲ್ಲಿ ಕಹಿ ಬೇವು ಸಹಕಾರಿಯಾಗಿದೆ:ಕಹಿ ಬೇವಿನ ಎಣ್ಣೆಯನ್ನು, ಮನೆಯ ಮುಂದೆ ನಿಂತಿರುವ ನೀರಿಗೆ ಸಿಂಪಡಿಸುವುದರಿಂದ, ಸೊಳ್ಳೆಯ ಉತ್ಪತ್ತಿಯನ್ನು ಕಡಿಮೆ ಮಾಡಬಹುದು. ಕಹಿ ಬೇವಿನ ಉಪಯೋಗದಿಂದ ಮಲೇರಿಯಾ ಜ್ವರವನ್ನು ತಡೆಯಬಹುದು. ಕಹಿ ಬೇವಿನ ಚಕ್ಕೆಯ ಕಷಾಯದಲ್ಲಿ, ಕಹಿ ಜೀರಿಗೆ ಪುಡಿಯನ್ನು 1/2 ಚಮಚ ಮತ್ತು ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಸೇವಿಸಬೇಕು.
8)ಮಧುಮೇಹ ನಿಯಂತ್ರಣಕ್ಕೆ ಕಹಿ ಬೇವು:ಕಹಿ ಬೇವಿನ ಮರದ ಚಿಗುರು ಎಲೆಗಳನ್ನು ನುಣ್ಣಗೆ ಅರೆದು, ಅದನ್ನು ಸ್ವಲ್ಪ ಸ್ವಲ್ಪ ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು.
9)ನಿದ್ರಾಹೀನತೆಗೆ ಕಹಿ ಬೇವು ಸಹಕಾರಿಯಾಗಿದೆ:ನಿದ್ರಾಹೀನತೆಯಿಂದ ಬಳಲುತ್ತಿದ್ದವರು, ಕಹಿ ಬೇವಿನ ಎಲೆಗಳನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಹಾಲು ಸೇರಿಸಿ, ನುಣುಪಾಗಿ ಅರೆದು, ರಾತ್ರೆ ಮಲಗುವ ಮೊದಲು ಎರಡೂ ಅಂಗಾಲುಗಳಿಗೆ ಹಚ್ಚಿಕೊಂಡು ಮಲಗುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ.