ಆಹಾರವನ್ನು ಹೀಗೆ ತಿಂದರೆ ಹೆಚ್ಚು ಆರೋಗ್ಯಕರ

ಹಸಿವಾದಾಗ ಏನಾದರೂ ಆಗಬಹುದೆಂದು ನಾವು ಹೊಟ್ಟೆಗೆ ಹಾಕಿಕೊಂಡು ಹಸಿವು ನೀಗಿಸಿಕೊಳ್ಳುತ್ತೇವೆ. ಆದರೆ ನಾವು ತಿನ್ನುವ ಆಹಾರ ಕ್ರಮ ಮತ್ತು ಸರಿಯಾದ ಪೋಷಕಾಂಶಗಳಿರುವ ಆಹಾರಗಳನ್ನು ತಿನ್ನುತ್ತಿದ್ದೇವೆಯಾ? ನಾವು ತಿನ್ನುತ್ತಿರುವ ಆಹಾರ ನಮ್ಮ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀರಬಹುದೆಂದು ನಾವು ಗಮನಿಸುವುದೇ ಇಲ್ಲ. ಆಹಾರ ಸೇವನೆಯಿಂದಷ್ಟೇ ದೇಹಕ್ಕೆ ಶಕ್ತಿ ಬರುವುದಿಲ್ಲ. ಸರಿಯಾದ ಪೋಷಕಾಂಶ ಮತ್ತು ಆರೋಗ್ಯಕರವಾಗಿರುವ ಆಹಾರದಿಂದ ಮಾತ್ರ ದೇಹದ ಬೆಳವಣಿಗೆ ಮತ್ತು ದೇಹಕ್ಕೆ ಶಕ್ತಿ ಬರಲು ಸಾಧ್ಯ. ಇಲ್ಲವಾದಲ್ಲಿ ಎಷ್ಟು ತಿಂದರೂ ಅದು ನೀರಿನಲ್ಲಿಟ್ಟ ಹೋಮದಂತಾಗುತ್ತದೆ.
ಹೀಗಾದಾಗ ಮುಂದೊಂದು ದಿನ ನಾವು ಅನಾರೋಗ್ಯಕ್ಕೆ ಒಳಗಾಗುವುದು ಖಚಿತ. ಇದಕ್ಕಾಗಿ ನಾವು ಆಹಾರ ಕ್ರಮವನ್ನು ಸರಿಯಾಗಿ ರೂಢಿಸಿಕೊಳ್ಳಬೇಕು. ಯಾವೆಲ್ಲಾ ಆಹಾರವನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಹೇಗೆ ರೂಢಿಸಿಕೊಳ್ಳಬಹುದು ಎನ್ನುವುದನ್ನು ನೋಡೋಣ.
1. ನಿಮ್ಮ ಪ್ರಸ್ತುತ ಆಹಾರ ಕ್ರಮವನ್ನು ವಿಶ್ಲೇಷಿಸಿ :ಆರೋಗ್ಯಕರ ಆಹಾರ ತಿನ್ನುವ ಅಭ್ಯಾಸವನ್ನು ರೂಪಿಸಿಕೊಳ್ಳಲು ಮೊದಲನೇಯದಾಗಿ ಪ್ರಸಕ್ತ ನಿಮ್ಮ ಆಹಾರ ತಿನ್ನುವ ಅಭ್ಯಾಸವನ್ನು ವಿಶ್ಲೇಷಿಸಿ. ಏನೆಲ್ಲಾ ತಿನ್ನುತ್ತಿದ್ದೀರಿ ಎನ್ನುವುದನ್ನು ಆಹಾರ ದಿನಚರಿ ಮೂಲಕ ಅದನ್ನು ಗಮನಿಸಿ. ಈ ತಂತ್ರದ ಮೂಲಕ ನಿಮ್ಮ ಪ್ರಸಕ್ತ ಆಹಾರ ಅಭ್ಯಾಸ ಆರೋಗ್ಯಕರವಾಗಿದೆಯಾ ಅಥವಾ ಇಲ್ಲವಾ ಎನ್ನುವುದನ್ನು ತಿಳಿದುಕೊಳ್ಳಬಹುದು.
2. ನಿಧಾನವಾಗಿ ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿ: ಒಂದೇ ದಿನದಲ್ಲಿ ಆರೋಗ್ಯಕರ ಆಹಾರ ಕ್ರಮಕ್ಕೆ ಬದಲಾಯಿಸಿಕೊಳ್ಳುವುದು ತುಂಬಾ ಕಷ್ಟ. ಹೊಸ ಆಹಾರಕ್ರಮ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವ ಬದಲು ನಿಧಾನವಾಗಿ ಹಾಗೂ ಸ್ಥಿರವಾಗಿ ಆಚರಣೆಗೆ ತನ್ನಿ.
3. ಮೆಡಿಟೇರಿಯನ್ ಆಹಾರ ಪ್ರಯತ್ನಿಸಿ: ಮೆಡಿಟೇರಿಯನ್ ಆಹಾರ ಲಭ್ಯವಿರುವ ಅತ್ಯಂತ ಆರೋಗ್ಯಕರ ಆಹಾರವಾಗಿದೆ. ಈ ಆಹಾರವು ಒಳ್ಳೆಯ ರುಚಿ ಮತ್ತು ಆರೋಗ್ಯವನ್ನು ಹೊಂದಿರುವ ಆಹಾರ. ಮೆಡಿಟೇರಿಯನ್ ಆಹಾರದಲ್ಲಿ ಹೆಚ್ಚು ಕಾಳುಗಳು, ಸಂಸ್ಕರಿದ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಹೈನು ಉತ್ಪನ್ನಗಳಿವೆ.
4.ಉಪಹಾರ ತುಂಬಾ ಮುಖ್ಯ:ಪ್ರತೀ ದಿನ ನೀವು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿಕೊಂಡು ಹೋಗುವುದಾದರೆ ಮೊದಲಿಗೆ ಪ್ರತೀ ದಿನ ಆರೋಗ್ಯಕರ ಉಪಹಾರವನ್ನು ಸೇವಿಸಿ. ನಿದ್ರೆಯ ಬಳಿಕ ಆರೋಗ್ಯಕರ ಉಪಹಾರ ಸೇವಿಸಿ ನಿಮ್ಮ ದಿನವನ್ನು ಆರಂಭಿಸಿ.
5. ಆರೋಗ್ಯಕರವಾಗಿರುವುದನ್ನು ಆಯ್ಕೆ ಮಾಡಿ:ಒಮ್ಮೆ ನೀವು ಆರೋಗ್ಯಕರ ಆಹಾರ ಸೇವನೆಯನ್ನು ಆರಂಭಿಸಿದರೆ ಕ್ಯಾಲೋರಿ ಮತ್ತು ಆಹಾರದ ಗಾತ್ರಕ್ಕೆ ಆದ್ಯತೆ ನೀಡಲ್ಲ. ಇದರ ಬದಲಿಗೆ ಹೆಚ್ಚು ಬಣ್ಣಗಳು, ವೈವಿಧ್ಯತೆ ಮತ್ತು ಆಹಾರಕ್ಕೆ ತಾಜಾತನ ಸೇರಿಸುವ ಬಗ್ಗೆ ಯೋಚಿಸಿ. ಈ ಕ್ರಮವು ನೀವು ಆರೋಗ್ಯಕರ ಆಯ್ಕೆ ಮಾಡಲು ನೆರವಾಗಲಿದೆ.
6.ತಿಂಡಿ ಬದಲಿಗೆ ಹಣ್ಣುಗಳನ್ನು ತಿನ್ನಿ:ಸಂಜೆ ವೇಳೆಗೆ ನಿಮಗೆ ಜಂಕ್ ಫುಡ್ ತಿನ್ನುವ ಅಭ್ಯಾಸವಿದ್ದರೆ ಅದರ ಬದಲಿಗೆ ಒಂದು ತಟ್ಟೆ ತಾಜಾ ಹಣ್ಣುಗಳನ್ನು ತಿನ್ನಿ. ನಿಮಗೆ ಹಸಿವಾಗಿದ್ದರೆ ಹಣ್ಣು ತಿನ್ನಿ. ಇದು ನಿಮ್ಮ ದೇಹಕ್ಕೆ ಅದ್ಭುತವನ್ನು ಮಾಡಲಿದೆ ಮತ್ತು ಹಣ್ಣುಗಳನ್ನು ತಿನ್ನುವುದರಿಂದ ಪ್ರಮುಖ ವಿಟಮಿನ್ ಮತ್ತು ಪೋಷಕಾಂಶಗಳು ಸಿಗಲಿದೆ.