ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಇಲ್ಲಿವೆ ಮನೆಮದ್ದು..

ವೀಕ್ಷಕರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಬರುವುದು ತುಂಬಾನೇ ಕಾಮನ್ ಆಗಿ ಬಿಟ್ಟಿದೆ. ಇದಕ್ಕೆಲ್ಲ ಕಾರಣ ನಾವು ಸೇವನೆ ಮಾಡುವಂತಹ ಆಹಾರದ ಪದ್ಧತಿ. ನಮ್ಮ ಆಹಾರದ ಪದ್ಧತಿ ಸರಿಯಾಗಿಲ್ಲದಿದ್ದರೆ ಸಮಸ್ಯೆಗಳು ಕಾಡುತ್ತದೆ. ಅಜೀರ್ಣದಂತಹ ಸಮಸ್ಯೆ ನಾವು ನಿರ್ಲಕ್ಷ್ಯ ವಹಿಸಿದರೆ ನಮ್ಮ ಒಟ್ಟಾರೆ ಆರೋಗ್ಯದ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ಹಾಗಿದ್ದಲ್ಲಿ ನಿಮಗೇನಾದರೂ ಅಜೀರ್ಣದ ಸಮಸ್ಯೆ ಉಂಟಾಗಿದ್ದರೆ ಅದನ್ನು ನೀವು ನಿರ್ಲಕ್ಷವನ್ನು ವಹಿಸದೆ ಮನೆಯಲ್ಲಿ ಸಿಗುವಂತಹ ಕೆಲವೊಂದಿಷ್ಟು ಮನೆಮದ್ದುಗಳನ್ನು ಬಳಕೆ ಮಾಡಿಕೊಂಡು ಈ ಸಮಸ್ಯೆಗಳಿಂದ ಬೇಗನೆ ಮುಕ್ತಿಯನ್ನು ಹೊಂದಬಹುದು. ಹಾಗಿದ್ದರೆ ಅಜೀರ್ಣದಂತಹ ಸಮಸ್ಯೆಗಳಿಗೆ ಯಾವೆಲ್ಲ ಮನೆಮದ್ದು ಗಳನ್ನು ಉಪಯೋಗ ಮಾಡಿಕೊಳ್ಳಬಹುದು ಅಂತ ತಿಳಿದುಕೊಳ್ಳೋಣ ಬನ್ನಿ.
ಅಜೀರ್ಣದ ಸಮಸ್ಯೆ ಇಂಗು ತುಂಬಾ ಸಹಾಯಕವಾಗುತ್ತದೆ ಅದಕ್ಕಾಗಿ ನೀವು ಒಂದು ಲೋಟ ಬಿಸಿ ನೀರಿಗೆ 5gram ಅಷ್ಟು ಇಂಗನ್ನು ಹಾಕಿ ಇದಕ್ಕೆ ಒಂದು ಚಮಚ ಸಕ್ಕರೆಯನ್ನು ಕೂಡ ಹಾಕಿ ಕೊಂಡರೆ ರುಚಿಯು ಚೆನ್ನಾಗಿರುತ್ತದೆ. ಇದನ್ನು ಕುಡಿಯುವಾಗ ಸ್ವಲ್ಪ ಗಾಡ ವಾಸನೆ ಬರುತ್ತದೆ.
ಆದರೆ ಇದು ವಾಯು ಮತ್ತು ಅಜೀರ್ಣ ಸಮಸ್ಯೆ ದೂರ ಮಾಡಲು ತುಂಬಾನೇ ಸಹಾಯವಾಗುತ್ತದೆ ಇನ್ನು ಅಜೀರ್ಣದ ಸಮಸ್ಯೆ ಗೆ ಒಂದು ಪವರ್ಫುಲ್ ಮನೆಮದ್ದು ಅಂತ ಹೇಳಿದರೆ ಅದು ಓಂಕಾಳು ಅಥವಾ ಅಜ್ವಾನ. ಈ ಅಜವಾನವನ್ನು ಸೇವನೆ ಮಾಡುವುದರಿಂದ ಅದರಲ್ಲೂ ಅರ್ಧ ಕಲ್ಲುಪ್ಪಿನ ಜೊತೆಗೆ ಒಂದು ಚಮಚದಷ್ಟ ಈ ಅಜ್ವಾನ ನೀರಿಗೆ ಹಾಕಿಕೊಂಡು ಸೇವನೆ ಮಾಡಿದರೆ ಇದರಿಂದ ವಾಯು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ದೂರ ವಾಗುವುದರ ಜೊತೆಗೆ ಅಜೀರ್ಣದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ಇನ್ನು ಅಜೀರ್ಣದ ಸಮಸ್ಯೆ ಗೆ ಜೀರಿಗೆ ಕೂಡ ಬಹಳ ಒಳ್ಳೆಯದು. ಜೀರಿಗೆ ಕಷಾಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಮತ್ತು ಊಟದ ನಂತರ ಜೀರಿಗೆಯನ್ನು ಜಿಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ ಬೇಗನೆ ಕಡಿಮೆಯಾಗುತ್ತದೆ.
ಇನ್ನು ಪುದಿನವನ್ನು ನೀರಿನಲ್ಲಿ ಸೇರಿಸಿ ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ಕೂಡ ಅಜೀರ್ಣದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು.