ಮಾವಿನ ಎಲೆಯಲ್ಲಿ ಎಷ್ಟೊಂದು ಆರೋಗ್ಯಕರ ಲಾಭವಿದೆ ತಿಳಿದುಕೊಳ್ಳಿ!

ಮಾವಿನ ಹಣ್ಣಿನ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ ಆದರೆ ಮಾವಿನ ಎಲೆಯ ಆರೋಗ್ಯಕರ ಪ್ರಯೋಜನಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದಿಲ್ಲ. ಮಾವಿನ ಎಲೆಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಮಾವಿನ ಎಲೆಗಳನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಮಾವಿನ ಹಣ್ಣಿನಂತೆ ಮಾವಿನ ಎಲೆಗಳಲ್ಲೂ ಸಾಕಷ್ಟು ಮೆಡಿಸಿನ್ ಗುಣಗಳಿವೆ. ಆಯುರ್ವೇದದಲ್ಲಿ ಮಾವಿನ ಎಲೆಗಳನ್ನು ಹಲವಾರು ಔಷಧಿಗಳಲ್ಲಿ ಬಳಸುತ್ತಾರೆ. ಮಾವಿನ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ಸ್ ಗಳಾದ ವಿಟಮಿನ್ ಎ, ಬಿ, ಸಿ ಹಾಗೂ ಖನಿಜಾಂಶಗಳಾದ ಕೋಪರ್, ಮೆಗ್ನೀಷಿಯಂ ಹೆಚ್ಚಿರುತ್ತದೆ. ಅಧಿಕ ರಕ್ತದೊತ್ತಡ ಇರುವವರು ಮಾವಿನ ಎಲೆಗಳನ್ನು ಸೇವಿಸುವುದರಿಂದ ಅವರ ಆರೋಗ್ಯಕ್ಕೆ ಒಳ್ಳೆಯದು.

ಡಯಾಬಿಟಿಸ್ ಹಾಗೂ ಅಧಿಕ ರಕ್ತದೊತ್ತಡ ಇರುವವರು ಒಂದು ಲೋಟ ಬಿಸಿ ನೀರಿನಲ್ಲಿ ಒಂದೆರಡು ಮಾವಿನ ಎಲೆಗಳನ್ನು ನೆನೆಸಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಅದೇ ರೀತಿ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಉಸಿರಾಟ ಸಂಬಂಧಿಸಿದ ಎಲ್ಲ ರೀತಿಯ ಖಾಯಿಲೆಗಳಿಗೆ ಮಾವಿನ ಎಲೆಗಳನ್ನು ಸೇವಿಸುವುದರಿಂದ ಒಳ್ಳೆಯದು. ಅಸ್ತಮಾ ಖಾಯಿಲೆ ಇರುವವರು ಮಾವಿನ ಎಲೆಯ ರೆಸಿಪಿಯನ್ನು ಸೇವಿಸಬೇಕು.

ಕಿವಿ ನೋವಾದಾಗ ಮಾವಿನ ಎಲೆಯ ರಸವನ್ನು ಒಂದೆರಡು ಹನಿ ಬಿಸಿ ಮಾಡಿ ನೋವಿರುವ ಕಿವಿಗೆ ಹಾಕುವುದರಿಂದ ಕಿವಿ ನೋವು ನಿವಾರಣೆಯಾಗುತ್ತದೆ. ಮಾವಿನ ಎಲೆಯನ್ನು ಸುಟ್ಟು ಅದರ ಬೂದಿಯನ್ನು ಸುಟ್ಟ ಗಾಯಗಳಿಗೆ ಹಚ್ಚುವುದರಿಂದ ಗಾಯಗಳು ವಾಸಿಯಾಗುತ್ತದೆ.

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ ಆದನ್ನು ಕಡಿಮೆ ಮಾಡುವ ಗುಣ ಮಾವಿನ ಎಲೆಗಳಿಗೆ ಇದೆ. ಮಾವಿನ ಎಲೆಯ ಟೀಯನ್ನು ಕುಡಿಯುವುದರಿಂದ ಒತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಮಾವಿನ ಎಲೆಯ ಆಹಾರವನ್ನು ಸೇವಿಸುವುದರಿಂದ ಕಿಡ್ನಿ ಸ್ಟೋನ್ ನ್ನು ಕಡಿಮೆ ಮಾಡುತ್ತದೆ. ಮಾವಿನ ಎಲೆಗಳು ಹಲ್ಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಬಾಯಿಯಲ್ಲಿನ ದುರ್ಗಂಧ ಕಡಿಮೆಯಾಗುತ್ತದೆ.

ಮಾವಿನ ಎಲೆಗಳ ಪೌಡರ್ ಮಾಡಿಕೊಂಡು ಅರ್ಧ ಸ್ಪೂನ್ ಮಾವಿನ ಎಲೆಯ ಪೌಡರ್ ನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದ ಅತಿಸಾರ ಹಾಗೂ ಬೇಧಿ ನಿವಾರಣೆಯಾಗುತ್ತದೆ. ಆದ್ದರಿಂದ ಪ್ರಯೋಜನಕಾರಿಯಾದ ಮಾವಿನ‌ ಎಲೆಯ ಅಡುಗೆಯನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಲಾಭದಾಯಕ. ಮಾವಿನ ಎಲೆಗಳನ್ನು ಉಪಯೋಗಿಸಿ ಹಲವು ರೀತಿಯ ಅಡುಗೆ ರೆಸಿಪಿ ಮಾಡಬಹುದಾಗಿದೆ.

ಮಾವಿನ ಕಾಯಿಗಳನ್ನು ಸಹ ಅಡುಗೆಗೆ ಬಳಸುತ್ತಾರೆ. ಒಟ್ಟಿನಲ್ಲಿ ಮಾವಿನ ಎಲೆಗಳನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಆರೋಗ್ಯಕರ ಲಾಭವನ್ನು ಪಡೆಯಬಹುದು. ಹಳ್ಳಿಗಳಲ್ಲಿ ಮಾವಿನ ಮರಗಳಿದ್ದು ಎಲೆಗಳು ಸಿಗುತ್ತವೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಮಾವಿನ ಎಲೆಗಳನ್ನು ಅಡುಗೆಯಲ್ಲಿ ಹೆಚ್ಚು ಬಳಸಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group