ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ. ಆದರೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ..

ಕೆಲವು ಮೂಲಗಳು ಹೇಳುವಂತೆ ಬಾಳೆಹಣ್ಣು ನಿದ್ರಾ ಹೀನತೆ, ಕರುಳಿನ ಸಮಸ್ಯೆಯನ್ನು ಹುಟ್ಟಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ “ಬಾಳೆ ಹಣ್ಣಿನಲ್ಲಿ ಆಮ್ಲೀಯ ಗುಣ ಹೆಚ್ಚಾಗಿದೆ. ಇದರಲ್ಲಿರುವ ಹೆಚ್ಚಿನ ಮೆಗ್ನೀಸಿಯಮ್ ಅಂಶ ರಕ್ತದಲ್ಲಿನ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‍ಗಳ ನಡುವಿನ ಅಸಮತೋಲನವನ್ನು ಹೆಚ್ಚಿಸುವುದು. ಅಲ್ಲದೆ ಹೃದಯದ ರಕ್ತನಾಳ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು. ಬಾಳೆ ಹಣ್ಣನ್ನು ತಿನ್ನಬಹುದು ಆದರೆ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು ಎಂದಿದ್ದಾರೆ’.
ತಜ್ಞರ ಪ್ರಕಾರ:ಯುಕೆಯ ಮೈಕ್ರೋಬಯೋಟೆಕ್ ನ್ಯೂಟ್ರಿಶಿಸ್ಟ್ ಡಾ. ಶಿಲ್ಪಾ ಅರೋರಾ ಅವರು ಹೇಳುವ ಪ್ರಕಾರ ಬಾಳೆ ಹಣ್ಣು ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್‍ಗಳನ್ನು ಅಧಿಕವಾಗಿ ಒಳಗೊಂಡಿದೆ. ಹಾಗಾಗಿ ಇದು ಹಸಿವಿನ ನೋವನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಒಂದು ಬಾಳೆ ಹಣ್ಣನ್ನು ತಿನ್ನಬೇಕು. ಇದು ದೇಹಕ್ಕೆ ಬೇಕಾದ ಶೇ. 25ರಷ್ಟು ಸಕ್ಕರೆಯನ್ನು ಒದಗಿಸುತ್ತದೆ. ದಿನದ ಚಟುವಟಿಕೆಗೆ ಶಕ್ತಿಯನ್ನು ಒದಗಿಸುತ್ತದೆ. ಇದು ವಿಟಮಿನ್ ಬಿ6 ಮತ್ತು ವಿಟಮಿನ್ ಬಿಯನ್ನು ಒಳಗೊಂಡಿದೆ.
ಆಯುರ್ವೇದದ ಪ್ರಕಾರ:ಆಯುರ್ವೇದ ತಜ್ಞರ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನಬಾರದು. ಇತ್ತೀಚಿನ ದಿನದಲ್ಲಿ ಹಣ್ಣುಗಳನ್ನು ರಾಸಾಯನಿಕ ಬಳಕೆಯಿಂದ ಕೃತಕ ಹಣ್ಣುಗಳನ್ನಾಗಿ ಪರಿವರ್ತಿಸುತ್ತಾರೆ. ಹಾಗಾಗಿ ಯಾವ ಹಣ್ಣಾದರೂ ಹಸಿದ ಹೊಟ್ಟೆಯಲ್ಲಿ ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇತರ ಆಹಾರದ ಜೊತೆಗೆ ಹಣ್ಣನ್ನು ಸೇರಿಸಿ ಸೇವಿಸಿದರೆ ಉತ್ತಮ ಎಂದು ಅಭಿಪ್ರಾಯಿಸಿದ್ದಾರೆ.
- ಯಾವಾಗ ತಿನ್ನಬೇಕು?
ಅಧಿಕ ಪೋಷಕಾಂಶವನ್ನು ಬಾಳೆ ಹಣ್ಣು ಹೊಂದಿರುವುದರಿಂದ ಇದನ್ನು ಬೆಳಗ್ಗೆ ತಿನ್ನಬಹುದು. ಆದರೆ ಬೇರೆ ಆಹಾರ ಪದಾರ್ಥಗಳೊಂದಿಗೆ ಸೇರಿಸಿ ಸವಿಯಬೇಕು. ಆಗ ಆರೋಗ್ಯ ಹೆಚ್ಚುವುದು. ಹೆಚ್ಚು ಶಕ್ತಿಯು ದೊರೆಯುವುದು.
ಬೆಳಗ್ಗೆ ತಿಂಡಿಯೊಂದಿಗೆ ಬಾಳೆ ಹಣ್ಣುಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನುವ ಬದಲು ಬಾಳೆ ಹಣ್ಣಿನ ರೊಟ್ಟಿ, ದೋಸೆಗೆ ಬಾಳೆ ಹಣ್ಣಿನ ರಸಾಯನ ಸೇರಿದಂತೆ ವಿವಿಧ ಬಗೆಯಲ್ಲಿ ಸೇವಿಸಬಹುದು.