ಸೊಂಟದ ಕೊಬ್ಬು ಕರಗಿಸಲು ಅನುಸರಿಸಿ ಇಂತಹ ಸುಲಭ ಆಸನಗಳನ್ನು..!

ಸುಲಭವಾದ ಯೋಗಾಸನವನ್ನು ಅನುಸರಿಸುವ ಮೂಲಕ ಈ ಕೊಬ್ಬನ್ನು ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಸಮರ್ಥವಾಗಿ ಕಡಿಮೆಗೊಳಿಸಲು ಸಾಧ್ಯ. ಸಾವಿರಾರು ವರ್ಷಗಳಿಂದ ಉತ್ತಮ ಆರೋಗ್ಯಕ್ಕೆ ತಳಹದಿಯಾಗಿರುವ ಯೋಗಾಸನಗಳು ದೇಹದ ವಿವಿಧ ಅಂಗಗಳಿಗೆ ಪ್ರತ್ಯೇಕವಾಗಿದ್ದು ಇದರಲ್ಲಿ ಕೆಲವು ಆಸನಗಳು ಸೊಂಟದ ಕೊಬ್ಬನ್ನು ಕರಗಿಸಲು ಸಮರ್ಥವಾಗಿವೆ.
01.ಭುಜಂಗಾಸನ (ಹಾವಿನ ಭಂಗಿ)ಈ ಆಸನದಲ್ಲಿ ಹೊಟ್ಟೆಯ ಸ್ನಾಯುಗಳಿಗೆ ಹೆಚ್ಚು ಸೆಳೆತ ಬೀಳುವ ಮೂಲಕ ಇಲ್ಲಿ ಸಂಗ್ರಹವಾಗಿರುವ ಕೊಬ್ಬು ಅನಿವಾರ್ಯವಾಗಿ ಕರಗಲೇಬೇಕಾಗುತ್ತದೆ. ಅಲ್ಲದೇ ಈ ಆಸನದಿಂದ ದೇಹದ ಮೇಲ್ಭಾಗ ಹೆಚ್ಚು ಬಾಗುವಂತಹ ಶಕ್ತಿ ಪಡೆಯುತ್ತದೆ. ಥಟ್ ಅಂತ ಶಕ್ತಿ ಬರಬೇಕೇ? ಒಮ್ಮೆ ಭುಜಂಗಾಸನ ಪ್ರಯತ್ನಿಸಿ.
ವಿಧಾನ_ ಮೊದಲು ಹೊಟ್ಟೆಯ ಮೇಲೆ ಮಲಗಿ ಕಾಲುಗಳನ್ನು ನೇರವಾಗಿಸಿ. ದೇಹದ ಭಾರ ಪಾದಗಳನ್ನು ನೇರವಾಗಿಸಿ ಕಾಲುಬೆರಳುಗಳ ಮೇಲೆ ಬರುವಂತಿರಲಿ.ನಿಮ್ಮ ಹಸ್ತಗಳು ಭುಜಗಳ ಕೆಳಗೆ ಇರಲಿ.
02.ತಾಡಾಸನ (ಪರ್ವತ ಭಂಗಿ)ಈ ಆಸನದಿಂದಲೂ ಹೊಟ್ಟೆಯ ಕೊಬ್ಬು ಸುಲಭವಾಗಿ ಕರಗುತ್ತದೆ. ಮಂಡಿ-ಪಾದಗಳನ್ನು ಸದೃಢಗೊಳಿಸಲು ತಾಡಾಸನ ಅನುಸರಿಸಿ.
ವಿಧಾನ_ಮೊದಲು ಎರಡೂ ಪಾದಗಳ ಹೆಬ್ಬೆರಳುಗಳು ತಾಕುವಂತೆ ನೆಟ್ಟಗೆ ನಿಂತುಕೊಳ್ಳಿ. ಹಿಮ್ಮಡಿಗಳು ಕೊಂಚ ದೂರವಾಗಿರಲಿ. ಬೆನ್ನು ನೆಟ್ಟಗಿರಲಿ, ಕೈಗಳು ತೊಡೆಗಳಿಗೆ ತಾಕಿರಲಿ.
ಈ ಭಂಗಿಯಲ್ಲಿ ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ ಎರಡೂ ಕೈಬೆರಳುಗಳನ್ನು ಜೋಡಿಸಿ ಹಸ್ತ ನಿಮ್ಮ ಕಡೆಗಿರುವಂತೆ ಅಥವಾ ಇರದಂತೆ, ನಿಮಗೆ ಸೂಕ್ತವೆನಿಸಿದ ಆಯ್ಕೆಯಲ್ಲಿ ಹಸ್ತಗಳನ್ನು ತಲೆಯ ಮೇಲೆ ಕೊಂಡೊಯ್ಯಿರಿ.
03.ಉತ್ತನಾಸನ (ನಿಂತಲ್ಲೇ ಮುಂದೆ ಬಗ್ಗುವ ಭಂಗಿ)ಈ ಭಂಗಿಯಲ್ಲಿ ಹೊಟ್ಟೆಯ ಸ್ನಾಯುಗಳು ಒಳಮುಖವಾಗಿ ಸೆಳೆಯಲ್ಪಡುವ ಕಾರಣ ಕೊಬ್ಬು ಶೀಘ್ರವಾಗಿ ಕರಗಲು ಸಾಧ್ಯವಾಗುತ್ತದೆ.
ವಿಧಾನ_ಮೊದಲು ಕಾಲುಗಳನ್ನು ಕೊಂಚವೇ ಅಗಲಿಸಿ ನಿಂತುಕೊಳ್ಳಿ. ಪೂರ್ಣ ಉಸಿರು ಎಳೆದುಕೊಂಡು ಕೈಗಳನ್ನು ಕೆಳಗಿರಿಸಿ ಮುಂದಕ್ಕೆ ಬಾಗಿ ಕೈಗಳಿಂದ ನೆಲವನ್ನು ಮುಟ್ಟಲು ಯತ್ನಿಸಿ. ಈ ಹಂತದಲ್ಲಿ ನಿಧಾನವಾಗಿ ಉಸಿರು ಒಳಗೆ ಎಳೆದುಕೊಳ್ಳಿ.
ಈ ಹಂತದಲ್ಲಿ ನಿಮಗೆ ಸಾಧ್ಯವಾದಷ್ಟು ಹೊತ್ತು ಹಾಗೇ ಇದ್ದು ಕೈಬೆರಳುಗಳಿಂದ ಕಾಲುಬೆರಳು ಮತ್ತು ಹಿಮ್ಮಡಿಯ ಗಂಟನ್ನು ಹಿಡಿಯಲು ಯತ್ನಿಸಿ. ಬಳಿಕ ನಿಧಾನವಾಗಿ ಉಸಿರುಬಿಡುತ್ತಾ ಮೊದಲ ಹಂತಕ್ಕೆ ಬನ್ನಿ. ಸುಮಾರು ಹತ್ತು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.