ಗರ್ಭಿಣಿಯರು ಮುಡಿ ಗೆಣಸು ಸೇವಿಸವುದರಿಂದ ಏನಾದರೂ ಸಮಸ್ಯೆ ಇದೆಯೇ?

ಗರ್ಭಧಾರಣೆ ಎನ್ನುವುದು ತುಂಬಾ ಸಂಭ್ರಮ ಹಾಗೂ ಸವಾಲನ್ನು ಉಂಟು ಮಾಡುವ ಸಮಯ. ಹೀಗಾಗಿ ಮಹಿಳೆಯರು ಈ ಸಮಯದಲ್ಲಿ ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ದೈಹಿಕ ಹಾಗೂ ಮಾನಸಿಕವಾಗಿ ಹಲವಾರು ಬದಲಾವಣೆಗಳು ಆಗುವ ನಿಟ್ಟಿನಲ್ಲಿ ಈ ಸಮಯವು ಅತೀ ಪ್ರಾಮುಖ್ಯವಾಗಿರುವುದು. ಸೇವಿಸುವ ಆಹಾರದಿಂದ ಹಿಡಿದು ಮಾಡುವಂತಹ ಕಾರ್ಯದ ಬಗ್ಗೆ ಪ್ರತಿಯೊಂದರಲ್ಲೂ ಎಚ್ಚರಿಕೆ ಅಗತ್ಯವಾಗಿರುವುದು. ಅದರಲ್ಲೂ ಆಹಾರದಲ್ಲಿ ಮುಖ್ಯವಾಗಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎನ್ನುವ ಗೊಂದಲವು ಇರುವುದು. ಯಾಕೆಂದರೆ ಗರ್ಭಿಣಿ ಸೇವಿಸುವ ಆಹಾರವು ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆ ಮೇಲೆ ಪ್ರಮುಖ ಪಾತ್ರ ವಹಿಸುವುದು.

1.ಮುಡಿ ಗೆಣಸು ಮತ್ತು ಸುರಕ್ಷತೆ:ತಿನ್ನಲು ಯೋಗ್ಯವಾಗಿರುವಂತಹ ಮುಡಿ ಗೆಣಸು ಗರ್ಭಿಣಿಯರಿಗೆ ಸೇವಿಸಲು ಸುರಕ್ಷಿತವಾಗಿದೆ. ತಾಜಾ ಮುಡಿಗೆಣಸಿನಲ್ಲಿ ಗರ್ಭಿಣಿಯರಿಗೆ ಹಾಗೂ ಮಗುವಿಗೆ ಹಾನಿ ಉಂಟು ಮಾಡುವ ಯಾವುದೇ ಅಂಶಗಳು ಇಲ್ಲ. ಅದಾಗ್ಯೂ, ನೀವು ಮುಡಿಗೆಣಸನ್ನು ತುಂಬಾ ಸುರಕ್ಷಿತ ವಿಧಾನದಿಂದ ತಯಾರಿಸಿಕೊಂಡು ತಿನ್ನಿ. ಇತರ ಆಹಾರಗಳಂತೆ ಮುಡಿ ಗೆಣಸಿನ ಖಾದ್ಯವನ್ನು ತಯಾರಿಸಿಕೊಂಡು ಇಟ್ಟುಕೊಂಡ ಬಳಿಕ ತಿಂದರೆ ಅದರಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾ ನಿರ್ಮಾಣವಾಗುವುದು. ಇದರಿಂದ ಆಹಾರ ವಿಷವಾಗಬಹುದು. ಆಗ ಗರ್ಭಿಣಿಯರಿಗೆ ಅದರಿಂದ ಪರಿಣಾಮವಾಗಬಹುದು. ಗರ್ಭಿಣಿಯರು ಮುಡಿ ಗೆಣಸನ್ನು ತಯಾರಿಸಿಕೊಂಡ ಬಳಿಕ ಅದನ್ನು ಬೇಗನೆ ಸೇವಿಸಬೇಕು. ಇದನ್ನು ರೆಫ್ರಿಜರೇಟರ್ ನಲ್ಲಿ ಇಟ್ಟುಕೊಂಡಷ್ಟು ಅದರಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗುವುದು ಹೆಚ್ಚಾಗುವುದು.

2.ಕಾಡು ಮುಡಿ ಗೆಣಸು:ಕಾಡು ಮುಡಿ ಗೆಣಸನ್ನು ಗರ್ಭಧಾರಣೆ ಸಮಯದಲ್ಲಿ ಸೇವನೆ ಮಾಡಬಾರದು ಎಂದು ಹೇಳಲಾಗಿದೆ. ಇದನ್ನು ಒಂದು ಸಪ್ಲಿಮೆಂಟ್ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಈ ಸಪ್ಲಿಮೆಂಟ್ ನ್ನು ಋತುಚಕ್ರದ ವೇಳೆ ಕಾಣಿಸುವ ಬಿಸಿಹವೆ ಮತ್ತು ಬಂಜೆತನಕ್ಕೆ ಬಳಸಲಾಗುತ್ತದೆ. ಈ ಸಪ್ಲಿಮೆಂಟ್ ನ್ನು ಗರ್ಭಿಣಿಯರು ಕಡೆಗಣಿಸಬೇಕು. ಯಾಕೆಂದರೆ ಇದಕ್ಕೆ ಯುಎಸ್ ಎಫ್ ಡಿಎ ಯಿಂದ ಯಾವುದೇ ಅನುಮತಿ ಸಿಕ್ಕಿಲ್ಲ. ಗರ್ಭಧಾರಣೆ ವೇಳೆ ಕಾಡು ಮುಡಿಗೆಣಸು ಸೇವನೆ ಬಗ್ಗೆ ಸಾಕಷ್ಟು ಅಧ್ಯಯನಗಳು ಕೂಡ ನಡೆದಿಲ್ಲ. ಇದರಿಂದ ಈ ಸಪ್ಲಿಮೆಂಟ್ ಗರ್ಭಿಣೆ ಹಾಗೂ ಮಗುವಿಗೆ ಸುರಕ್ಷಿತವೇ ಎಂದು ತಿಳಿದಿಲ್ಲ.

3.ತಿನ್ನಲು ಸಲಹೆಗಳು:ನೀವು ಯಾವಾಗಲೂ ಬೇಯಿಸಿದ ಆಲೂಗಡ್ಡೆ ತಿನ್ನುವ ಬದಲು ಹೊಸ ರುಚಿ ಹಾಗೂ ಹಲವಾರು ಪೋಷಕಾಂಶಗಳು ಇರುವಂತಹ ಬೇಯಿಸಿದ ಮುಡಿಗೆಣಸನ್ನು ತಿನ್ನಬಹುದು. ಬೇಯಿಸಿರುವ ಮುಡಿಗೆಣಸನ್ನು ನೀವು ಕೊಬ್ಬು ಕಡಿಮೆ ಇರುವಂತಹ ಮೊಸರಿನ ಜತೆಗೆ ಸೇವಿಸಿ ಮತ್ತು ಇದರಿಂದ ನಿಮಗೆ ಪ್ರೋಟೀನ್ ಹಾಗೂ ಇತರ ಕೆಲವೊಂದು ಪೋಷಕಾಂಶಗಳು ಸಿಗುವುದು. ಇದು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಸೂಪ್ ಅಥವಾ ಬೇರೆ ಖಾದ್ಯಗಳಿಗೆ ಇದನ್ನು ಬಳಸಿಕೊಳ್ಳಿ. ಇದು ರುಚಿ ಜತೆಗೆ ಪೋಷಕಾಂಶಗಳನ್ನು ನೀಡುವುದು. ಬೇಯಿಸಿರುವ ಮುಡಿ ಗೆಣಸು ಹಸಿರು ಸಲಾಡ್ ಮತ್ತು ಪಾಸ್ತಾ ಸಲಾಡ್ ಗೆ ಒಳ್ಳೆಯದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group