ಔಷಧೀಯ ಗುಣವುಳ್ಳ ಪಾಲಕ್ ಸೊಪ್ಪು ;

ಪಾಲಕ್ ಸೊಪ್ಪು, ದಿನನಿತ್ಯ ನಮಗೆ ಸುಲಭವಗಿ ಕೈಗೆ ಸಿಗುವ ಸೊಪ್ಪು. ಈ ಸೊಪ್ಪಿನಿಂದ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಅಷ್ಟೇ ಅಲ್ಲ ಇದರಲ್ಲಿ ಆರೋಗ್ಯ ವರ್ಧನೆಯ ಅಂಶಗಳು ಸಹ ಸಾಕಷ್ಟಿವೆ. ಪಾಲಕ್ ಸೊಪ್ಪನ್ನು ವಾರಕ್ಕೆ ಮೂರು ಬಾರಿ ಸೇವಿಸುವುದರಿಂದ ಆರೋಗ್ಯ ಮತ್ತು ಸೌಂದರ್ಯ ಎರಡು ಸಹ ಸಮೃದ್ಧಿಯಾಗುತ್ತದೆ.ಪಾಲಕ್ ಸೊಪ್ಪಿನಲ್ಲಿರುವ ಹೆಚ್ಚಿನ ಕಬ್ಬಿಣದ ಅಂಶವು ಕೆಂಪು ರಕ್ತಕಣಗಳ ಶಕ್ತಿಯನ್ನು ವೃದ್ಧಿಸುತ್ತದೆ. ಪಾಲಕ್ ಸೊಪ್ಪಿನ ಸೇವನೆ ಪ್ರತಿಯೊಂದು ಕೂದಲಿಗೂ ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಅಂಶ ಇರುವುದರಿಂದ ಬಿಸಿಲಿನಿಂದ ಕಪ್ಪಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರುವಲ್ಲಿ ಸಹಾಯ ಮಾಡುತ್ತದೆ.ಮುಖದ ಮೇಲಿನ ಕಪ್ಪು ಕಲೆಗಳನ್ನು ಮಾಯವಾಗಿಸುತ್ತದೆ.ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ನಾರಿನ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಔಷಧೀಯ ಗುಣಗಳಿಂದ ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುತ್ತದೆ.ಮಲಬದ್ಧತೆ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.
ದೃಷ್ಟಿಯನ್ನು ಮೊನಚಾಗಿಸುತ್ತದೆ ಕಣ್ಣಿನ ಪೊರೆ ಹಾಗೂ ಇರುಳುಗುರುಡುತನದ೦ತಹ ಕೆಲವೊ೦ದು ಕಣ್ಣಿಗೆ ಸಂಬಂಧಿಸಿದ ರೋಗಗಳ ವಿರುದ್ಧ ಸೆಣಸಾಡಲು, ಕ್ಯಾರೇಟ್ ಜ್ಯೂಸ್ ನೊ೦ದಿಗೆ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕೂಡ ಕುಡಿಯಿರಿ.
ವಸಡುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ರಕ್ತವು ಒಸರುವ ವಸಡುಗಳನ್ನು ಗುಣಪಡಿಸುವುದಕ್ಕಾಗಿ, ಕ್ಯಾರೆಟ್ ಸಲಾಡ್ ನೊ೦ದಿಗೆ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕುಡಿಯಿರಿ. ಈ ಆಹಾರಕ್ರಮದ ಮೂಲಕ ನೀವು ವಿಟಮಿನ್ ಸಿ ಯ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು.