ಆಹಾರ ಕ್ರಮದಲ್ಲಿ ತಿನ್ನಲು ಆರೋಗ್ಯಕರವಾದ 10 ಸೊಪ್ಪುಗಳು!

Abstract Fresh vegetables leaves background .
ಎಲ್ಲಾ ಹಸಿರುಬಣ್ಣದ ಸೊಪ್ಪುಗಳು ಮಾತ್ರ ಆರೋಗ್ಯಕರ ತರಕಾರಿಯೆಂದು ನಾವೆಂದುಕೊಂಡಿದ್ದೇವೆ. ಆದರೆ ಕೆಂಪು ಬಣ್ಣದ ತರಕಾರಿಗಳು ಮತ್ತು ಗಿಡಮೂಲಿಕೆಗಳಲ್ಲಿ ಅನೇಕ ಅನನ್ಯ ಆರೋಗ್ಯ ಲಾಭಗಳಿವೆ. ಹಾಗಾಗಿ ಕೆಂಪು ಬಣ್ಣದ ತರಕಾರಿಗಳಲ್ಲಿ ಅಮರಾಂತಸ್ ಸೊಪ್ಪು ಆರೋಗ್ಯಕರ ಆಹಾರಗಳಲ್ಲಿ ಸೇರಿಕೊಂಡಿದೆ.
1.ಪಾಲಕ್ ಸೊಪ್ಪು ಸೊಪ್ಪಿನ ತರಕಾರಿಗಳಲ್ಲಿ ಪಾಲಕ್ ಸೊಪ್ಪು ಒಂದು ಅತ್ಯಂತ ಉತ್ತಮ ಸೊಪ್ಪು. ವಿಟಮಿನ್ ಕೆ ಮತ್ತು ಕಬ್ಬಿಣಾಂಶಕ್ಕೆ ಇದು ಸಮೃದ್ಧ ಮೂಲ ಮತ್ತು ಸಾಕಷ್ಟು ನಾರಿನಾಂಶದ ಆಹಾರ.
2.ಎಲೆಕೋಸು ಎಲೆಕೋಸನ್ನು ನಾವು ಎರಡು ತರಹ ಬಳಸಬಹುದು – ಬೇಯಿಸಿ ಮತ್ತು ಬೇಯಿಸದೆ. ಇದರಲ್ಲೂ ವಿಟಮಿನ್ ಸಿ ಸಮೃದ್ಧವಾಗಿದ್ದು ನಿಮ್ಮ ಕರುಳಿನ ಚಲನೆಯನ್ನು ಸರಿತೂಗಿಸಿ ಮಲವಿಸರ್ಜನೆಗೆ ಸಹಾಯಮಾಡುತ್ತದೆ.
3.ಸಾಸಿವೆ ಸೊಪ್ಪು ಸಾಸಿವೆ ಸೊಪ್ಪು ಭಾರತದಲ್ಲಿ ಒಂದು ಪ್ರಸಿದ್ಧ ಸೊಪ್ಪಿನ ತರಕಾರಿ. ಸಾಸಿವೆ ಗಿಡದ ಸೊಪ್ಪು ಮಸಾಲೆಯುಕ್ತ ಪರಿಮಳವನ್ನು ಹೊಂದಿದ್ದು ಅದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಎ ನಿಮ್ಮ ಚರ್ಮ ಮತ್ತು ಕಣ್ಣುಗಳ ಆರೋಗ್ಯವನ್ನು ಸುಧಾರಿಸುತ್ತದೆ. ಅದರಲ್ಲಿ ಉತ್ಕರ್ಷಣ ಅಂಶವು (ಆಂಟಿಆಕ್ಸಿಡೆಂಟ್) ಹೇರಳವಾಗಿದೆ.
4.ಪುದೀನ ಸೊಪ್ಪು ಬಾಯಿಯಿಂದ ಕೆಟ್ಟ ವಾಸನೆ ಬೀರುತ್ತಿರುವವರಿಗೆ ಪುದೀನ ಸೊಪ್ಪು ಆಹ್ಲಾದಕರ ಉಸಿರು ಬಿಡುವುದಕ್ಕೆ ಅನುಕೂಲಮಾಡುತ್ತದೆ. ಅದು ಹೊಟ್ಟೆಯೊಳಗಿರುವ ಸ್ಥಿತಿಯನ್ನು ತಂಪಾಗಿರಲು ಸಹಾಯಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
5.ಲೆಟ್ಟ್ಯೂಸ್: ಲೆಟ್ಟ್ಯೂಸ್ ಸಲಾಡ್‌ಗಳಲ್ಲಿ ಬಳಸುವ ಒಂದು ತರಕಾರಿ. ಅದು ಕುರುಕುಲಾದ ರುಚಿ ಹೊಂದಿದ್ದು ಹಸಿಯಾಗಿ ತಿನ್ನಲು ಬಹಳ ಚೆನ್ನಾಗಿರುತ್ತದೆ. ಲೆಟ್ಟ್ಯೂಸಿನಲ್ಲಿ ಬಹುತೇಕ ಶೂನ್ಯ ಕೊಬ್ಬು ಇರುತ್ತದೆ ಮತ್ತು ಪ್ರಮುಖ ಪೌಷ್ಟಿಕಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ.
6.ಕರಿಬೇವು ಕರಿಬೇವಿನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿರುತ್ತವೆ ಮತ್ತು ಇದರಿಂದ ಅಜೀರ್ಣ ಸಮಸ್ಯೆಯನ್ನು ತಡೆಯಬಹುದು ಹಾಗೂ ಶರೀರದ ತೂಕವನ್ನು ಕಡಿಮೆಮಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ.
7.ಶತಾವರಿ (ಆಸ್ಪರಾಗಸ್) ಶತಾವರಿಯು ವಿಟಮಿನ್ ಸಿ ಮತ್ತು ಇ ಇವುಗಳಿಗೆ ಒಂದು ಸಮೃದ್ಧ ಮೂಲ. ಅದರಲ್ಲಿ ಫೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಶತಾವರಿಯು ನಿಮ್ಮ ಗಂಟಲು ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ.
8.ಕೆಂಪು ಅಮರಾಂತ್ ಕೆಂಪು ಅಮರಾಂತ್ ಅನ್ನು ಸಲಾಡಿನಲ್ಲಿ ಸೇರಿಸಿದಾಗ ಒಳ್ಳೆಯ ರುಚಿಯನ್ನು ಅನುಭವಿಸಬಹುದು. ಈ ತರಕಾರಿಯಲ್ಲಿರುವ ಕ್ಯಾಲ್ಸಿಯುಮ್ ಹಾಲಿನಲ್ಲಿರುವುದಕ್ಕಿಂತಾ ಎರಡುಪಟ್ಟು ಅಧಿಕವಾಗಿರುತ್ತದೆ ಮತ್ತು ಸತು (ಜಿಂಕ್) ಅಂಶವು ಮೊಟ್ಟೆಯಲ್ಲಿರುವುದಕ್ಕಿಂತ ಮತ್ತೂ ಹೆಚ್ಚು ಇರುತ್ತದೆ.
9.ತುಳಸಿ ಎಲೆಗಳು ತುಳಸಿ ಎಲೆಗಳು ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತಕ್ಕೆ ಒಂದು ನೈಸರ್ಗಿಕ ಔಷಧಿ. ತುಳಸಿಯು ಉರಿಯೂತದ ಮತ್ತು ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಅಧಿಕವಾಗಿ ಹೊಂದಿದೆ.
10.ಡಾಂಡೇಲಿಯನ್ – ಒಂದು ರೀತಿಯ ಗಿಡಮೂಲಿಕೆ ಡಾಂಡೇಲಿಯನ್ ಸಮೃದ್ಧ ಕ್ಯಾಲ್ಸಿಯಮ್ ಮತ್ತು ಕಬ್ಬಿಣಾಂಶ ಹೊಂದಿರುವುದಕ್ಕೆ ಹೆಸರಾಗಿದೆ. ಅದರಲ್ಲಿ ಮ್ಯಾಂಗನೀಸ್, ಫಾಸ್ಫರಸ್ ಮತ್ತು ಪೊಟ್ಯಾಸಿಯುಮ್ ಅಂಶಗಳು ಸಹ ಇರುತ್ತವೆ.