ಹಸುಗಳಲ್ಲಿ ಹಾಲು ಜ್ವರ ತಡೆಯಲು ಮುಂಜಾಗ್ರತೆ:

ಏನಿದು ಹಾಲು ಜ್ವರ?:ಮಿಶ್ರ ತಳಿ ಜಾನುವಾರುಗಳನ್ನು ಕರು ಹಾಕಿದ ನಂತರ ಕಾಡುವ ಸಾಮಾನ್ಯವಾದ ಒಂದು ಕಾಯಿಲೆಯೆಂದರೆ ಹಾಲುಜ್ವರ. ಕರು ಹಾಕಿದ 12 ರಿಂದ 24 ಗಂಟೆಯ ಒಳಗೆ ಇದು ಕಾಣಿಸಿಕೊಳ್ಳಬಹುದು. ಇದನ್ನು ರೂಢಿಗತವಾಗಿ ‘ಹಾಲು ಜ್ವರ’ ಎಂದು ಕರೆಯಲಾಗುವುದು.

  • ಯಾವೆಲ್ಲ ಮುಂಜಾಗ್ರತೆ ತೆಗೆದುಕೊಳ್ಳಬೇಕು?

:ಕರು ಹಾಕಿದ ಜಾನುವಾರಿಗೆ ಹಾಲುಜ್ವರ ಬಂದಾಗ ತಕ್ಷಣ ತಜ್ಞ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಬೇಕು. ಆಕಳಿನ ಶರೀರದ ತಾಪಮಾನ ಕಡಿಮೆಯಾಗದಂತೆ ತಡೆಯಲು ಆಕಳನ್ನು ಬೆಚ್ಚಗಿನ ಸ್ಥಳದಲ್ಲಿ ಮಲಗಿಸಬೇಕು. ಕೆಲವು ಸಲ ಬಾಧಿತ ಆಕಳಿಗೆ ಗೋಣಿ ಚೀಲ ಅಥವಾ ಕಂಬಳಿ ಹೊದೆಸಬಹುದು. ಯಾವುದೇ ಕಾರಣಕ್ಕೂ ಯಾವುದೇ ಔಷಧಿಯನ್ನು ಕುಡಿಸಲು ಪ್ರಯತ್ನಿಸಬಾರದು.ಇಂತಹ ಸಂದರ್ಭದಲ್ಲಿ ಔಷಧಿಯು ಶ್ವಾಸನಾಳಕ್ಕೆ ಹೋಗಿ ಆಕಳು ಸಾಯುವ ಸಾಧ್ಯತೆ ಇದೆ. ಆಕಳು ಒದ್ದಾಡುವಾಗ ಗಾಯವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಬಹಳ ಹೊತ್ತು ಮಲಗುವುದರಿಂದ ಮೈಮೇಲೆ ಒತ್ತು ಹುಣ್ಣುಗಳಾಗುವ ಸಾಧ್ಯತೆ ಇದೆ. ಕಾರಣ ಆಕಳನ್ನು ಮೆತ್ತಗಿನ ಸ್ಥಳದಲ್ಲಿ ಮಲಗಿಸಬೇಕು ಮತ್ತು ಅದು ಎದ್ದು ನಿಲ್ಲಲು ಶ್ರಮ ಪಡುವಾಗ ಸ್ವಲ್ಪ ಆಧಾರ ನೀಡಬೇಕು.

  • ಹಾಲುಜ್ವರ ಬರದಂತೆ ತಡೆಗಟ್ಟುವಿಕೆ ಹೇಗೆ? :

ಉತ್ತಮ ಗುಣಮಟ್ಟದ ಒಣಮೇವನ್ನು ಆಕಳು ಗರ್ಭ ಧರಿಸಿದಾಗ ನೀಡುವುದು ಒಳ್ಳೆಯದು. ಕೆಲವು ರೈತರು ತಮ್ಮ ಆಕಳುಗಳಿಗೆ ಗರ್ಭ ಧರಿಸಿದಾಗ, ಅದೂ ಏಳು ತಿಂಗಳ ನಂತರ ಕ್ಯಾಲ್ಸಿಯಂ ಚುಚ್ಚುಮದ್ದನ್ನು ಕೊಡಿಸುವ ಪರಿಪಾಠ ಹೊಂದಿರುತ್ತಾರೆ. ಇದರಿಂದ ಕರು ಹಾಕಿದ ನಂತರ ಪ್ಯಾರಾಥಾರ್ಮೋನ್ ಚೋದಕ ದ್ರವ ಬಿಡುಗಡೆಯಾಗದೆ ಆಕಳಿನಲ್ಲಿ ಕ್ಯಾಲ್ಸಿಯಂ ಶೇಖರಣೆ ಸಾಕಷ್ಟು ಇದ್ದರೂ ಅದು ರಕ್ತದಲ್ಲಿ ಬಿಡುಗಡೆಯಾಗದೇಹಾಲುಜ್ವರ ಬರುವ ಸಾಧ್ಯತೆ ಇದೆ. ಮತ್ತೊಂದು ವಿಧಾನವೆಂದರೆ ಸುಮಾರು ಒಂದು ಕೆ.ಜಿ ಸುಣ್ಣವನ್ನು 10 ಲೀಟರ್ ನೀರಿನಲ್ಲಿ ಕರಗಿಸಿ ಪ್ರತಿ ದಿನವೂ ಮೇಲೆ ಸಂಗ್ರಹವಾಗುವ ಸುಣ್ಣದ ತಿಳಿ ನೀರನ್ನು ಸುಮಾರು 100 ಮಿಲಿಯನ್ನು ದಿನಕ್ಕೊಮ್ಮೆ ನೀಡಿದರೆ ಹಾಲು ಜ್ವರ ಬರಲಾರದು ಎಂಬ ಪ್ರತೀತಿ ಇದೆ.

ಆದರೆ ಸುಣ್ಣದ ತಿಳಿ ನೀರಿನ ಪ್ರಮಾಣ ಯಾವುದೇ ಕಾರಣಕ್ಕೂ ಹೆಚ್ಚು ನೀಡಬಾರದು. ಇದರಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಜಾಸ್ತಿಯಾಗುತ್ತದೆ. ಸೂಕ್ತವಾದ ಖನಿಜ ಮಿಶ್ರಣವನ್ನು ನಿಗದಿತ ಪ್ರಮಾಣದಲ್ಲಿ ನೀಡಿದಲ್ಲಿ ಈ ಕಾಯಿಲೆಯನ್ನು ತಪ್ಪಿಸಬಹುದು. ಮಾಹಿತಿಗೆ ಲೇಖಕರ ಸಂಪರ್ಕ ಸಂಖ್ಯೆ 080– 23415352.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group